WPL 2026: ಮೇಡಿನ್ ಓವರ್ ಬೌಲ್ ಮಾಡಿ ಆರ್‌ಸಿಬಿ ಫ್ಯಾನ್ಸ್ ದಿಲ್ ಗೆದ್ದ ಸುಂದರಿ ಲಾರೆನ್ ಬೆಲ್ ಯಾರು?
Who is Lauren Bell?: ಮುಂಬೈ ಇಂಡಿಯನ್ಸ್ ವಿರುದ್ಧದ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಮೊಟ್ಟ ಮೊದಲ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಲಾರೆನ್ ಬೆಲ್ ಮೇಡಿನ್ ಮಾಡಿದರು. ಆ ಮೂಲಕ ಆರ್‌ಸಿಬಿಗೆ ಮೇಲುಗೈ ತಂದುಕೊಟ್ಟಿತು. ಈ ಸೀಸನ್‌ನಲ್ಲಿ ಬೆಲ್ ಆರ್‌ಸಿಬಿಗೆ ಸೇರ್ಪಡೆಯಾಗಿದ್ದಾರೆ. ಇವರ ಬಗ್ಗೆ ಇಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.
ಆರ್‌ಸಿಬಿ ಪರ ಮೇಡಿನ್ ಓವರ್ ಬೌಲ್ ಮಾಡಿದ ಸುಂದರಿ ಯಾರು? -
ಮುಂಬೈ: ಇಲ್ಲಿನ ನವ ಮಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆ ಮೂಲಕ ಎದುರಾಳಿ ಮುಂಬೈ ತಂಡವನ್ನು ಮೊದಲ ಬ್ಯಾಟಿಂಗ್ ಆಹ್ವಾನಿಸಿದರು. ಅದರಂತೆ ನಾಯಕಿಯ ನಿರ್ಧಾರವನ್ನು ಆರ್‌ಸಿಬಿ ಬೌಲರ್‌ಗಳು ಸಮರ್ಥಿಸಿಕೊಂಡರು. ಅದರಲ್ಲಿಯೂ ವಿಶೇಷವಾಗಿ ಲಾರೆನ್ ಬೆಲ್ (Lauren Bell) ಎಂದರೆ ತಪ್ಪಾಗಲಾರದು.
ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಅವರು ಮೊಟ್ಟ ಮೊದಲ ಓವರ್ ಅನ್ನು ಬೌಲ್ ಮಾಡಲು ವಿದೇಶಿ ಆಟಗಾರ್ತಿ ಲಾರೆನ್ ಬೆಲ್ ಅವರಿಗೆ ನೀಡಿದರು. ಅದರಂತೆ ಲಾರೆನ್ ಬೆಲ್ ಟೂರ್ನಿಯ ಮೊಟ್ಟ ಮೊದಲ ಓವರ್‌ನಲ್ಲಿ ಅಚ್ಚುಕಟ್ಟಾಗಿ ಬೌಲ್ ಮಾಡಿದರು. ಸ್ಟ್ರೈಕ್‌ನಲ್ಲಿದ್ದ ಅಮೇಲಿಯಾ ಕೆರ್ ಅವರನ್ನು ಹೊಸ ಚೆಂಡಿನಲ್ಲಿ ಕಟ್ಟಿ ಹಾಕಿದರು. ಅತ್ಯುತ್ತಮ ಲೈನ ಅಂಡ್ ಲೆನ್ತ್ ಹಾಗೂ ಚೆಂಡನ್ನು ಸ್ವಿಂಗ್ ಮಾಡಿದ ಬೆಲ್, ಎದುರಾಳಿ ತಂಡಕ್ಕೆ ಒಂದೇ ಒಂದು ರನ್ ಅನ್ನು ಕೂಡ ನೀಡಲಿಲ್ಲ. ಆ ಮೂಲಕ ಟೂರ್ನಿಯ ಹಾಗೂ ಪಂದ್ಯದ ಮೊದಲ ಮೊಟ್ಟ ಓವರ್‌ನಲ್ಲಿ ಮೇಡಿನ್ ಪಡೆದುಕೊಂಡರು. ಆ ಮೂಲಕ ಆರ್‌ಸಿಬಿಗೆ ಉತ್ತಮ ಆರಂಭ ತಂದುಕೊಟ್ಟರು.
RCBW vs MIW: ಮುಂಬೈ ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ!
ಮತ್ತೆ ಮೂರನೇ ಓವರ್‌ಗೆ ಬೌಲ್ ಮಾಡಲು ಬಂದ ಲಾರೆನ್ ಬೆಲ್‌ಗೆ, ಮತ್ತೊಮ್ಮೆ ಅಮೇಲಿಯಾ ಕೆರ್ ಸ್ಟ್ರೈಕ್‌ನಲ್ಲಿ ಸಿಕ್ಕರು. ಬೆಲ್ ಅವರ ಸತತ ನಾಲ್ಕು ಎಸೆತಗಳನ್ನು ವ್ಯರ್ಥ ಮಾಡಿದ ಕೆರ್, ಐದನೇ ಎಸೆತದಲ್ಲಿ ಸಿಂಗಲ್ ರನ್ ಪಡೆದು, ಜಿ ಕಮಲಿನಿಗೆ ಸ್ಟ್ರೈಕ್ ಬಿಟ್ಟು ಕೊಟ್ಟರು. ನಂತರ ಕೊನೆಯ ಎಸೆತದಲ್ಲಿ ಜಿ ಕಮಲಿನಿ ರನ್ ಪಡೆಯಲಿಲ್ಲ. ಎರಡು ಓವರ್‌ಗಳ ಅಂತ್ಯಕ್ಕೆ ಲಾರೆನ್ ಬೆಲ್ ಕೇವಲ ಒಂದು ರನ್ ನೀಡಿ ಉತ್ತಮ ಆರಂಭವನ್ನು ಕೊಟ್ಟರು. ನಂತರ ಐದನೇ ಓವರ್‌ನಲ್ಲಿ ಲಾರೆನ್ ಬೆಲ್, 6 ರನ್ ನೀಡಿ ಅಮೇಲಿಯಾ ಕೆರ್ ಅವರನ್ನು ಔಟ್ ಮಾಡಿದರು. ನಂತರ ತಮ್ಮ ಕೊನೆಯ ಹಾಗೂ 9ನೇ ಓವರ್‌ನಲ್ಲಿ ಬೌಲ್ ಮಾಡಿದ ಬೆಲ್ 7 ರನ್ ಕೊಟ್ಟರು.
When the Bell rings and the ball swings, runs vanish. 🔔🔥
— Royal Challengers Bengaluru (@RCBTweets) January 9, 2026
What a debut spell from Lauren Bell. 🫡❤️🔥#PlayBold #ನಮ್ಮRCB #WPL2026 #MIvRCB pic.twitter.com/DgHzCERYgJ
ಅಂತಿಮವಾಗಿ ಆರ್‌ಸಿಬಿ ಪರ ಚೊಚ್ಚಲ ಪಂದ್ಯದಲ್ಲಿ ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ ಕೇವಲ 14 ರನ್ ನೀಡಿ ಒಂದು ವಿಕೆಟ್ ಪಡೆದರು. ಆ ಮೂಲಕ ಆರ್‌ಸಿಬಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಪ್ರದರ್ಶನದ ಜೊತೆಗೆ ಲಾರೆನ್ ಬೆಲ್ ನೋಡಲು ಅತ್ಯಂತ ಸುಂದರವಾಗಿದ್ದಾರೆ. ಆ ಮೂಲಕ ತಮ್ಮ ಮೊದಲ ಪಂದ್ಯದಲ್ಲಿಯೇ ಅವರು ಆರ್‌ಸಿಬಿ ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ. ಅಂದ ಹಾಗೆ ಲಾರೆನ್ ಬೆಲ್ ಯಾವ ದೇಶದ ಆಟಗಾರ್ತಿ, ಸೇರಿದಂತೆ ಅವರ ಬಗ್ಗೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
The first wicket of #TATAWPL 2026! 😎
— Women's Premier League (WPL) (@wplt20) January 9, 2026
Lauren Bell gets her reward ⚡️
Mumbai Indians lose Amelia Kerr's wicket
Updates ▶️ https://t.co/IWU1URl1fr#KhelEmotionKa | #MIvRCB | @RCBTweets pic.twitter.com/o3mgkZZ34B
ಸುಂದರಿ ಲಾರೆನ್ ಬೆಲ್ ಯಾರು?
ಲಾರೆನ್ ಬೆಲ್ ಅವರು ಮೂಲತಃ ಇಂಗ್ಲೆಂಡ್ ಆಟಗಾರ್ತಿ. ಅವರು ವಿಲ್ಟ್‌ಶೈರ್‌ನ ಸ್ವಿಂಡನ್‌ನಲ್ಲಿ 2001ರ ಜನವರಿ 02 ರಂದು ಜನಿಸಿದ್ದಾರೆ. ಇವರು ಇಂಗ್ಲೆಂಡ್ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದರ ಫಲವಾಗಿ ಅವರು 2022ರಲ್ಲಿ ಇಂಗ್ಲೆಂಡ್ ತಂಡದ ಪರ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನಂತರ 2022ರ ಮಹಿಳಾ ಟಿ20 ವಿಶ್ವಕಪ್ ಇಂಗ್ಲೆಂಡ್ ತಂಡದಲ್ಲಿ ಮೀಸಲು ಆಟಗಾರ್ತಿಯಾಗಿ ಇದ್ದರು. ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಲಾರೆನ್ ಬೆಲ್ ಅವರನ್ನು 90 ಲಕ್ಷ ರು. ಗಳಿಗೆ ಆರ್‌ಸಿಬಿ ತಂಡ ಖರೀದಿಸಿತ್ತು.