ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

RCBW vs MIW: ಮುಂಬೈ ಎದುರು ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

RCBW vs MIW Match Toss: 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಾಂಧಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಮುಂಬೈ ಎದುರು ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯ. -

Profile
Ramesh Kote Jan 9, 2026 7:44 PM

ಮುಂಬೈ: ಇಲ್ಲಿನ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ (RCBW vs MIW) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ (Smriti Mandhana) ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಈ ಪಂದ್ಯದ ಮೂಲಕ ನಾಲ್ಕನೇ ಆವೃತ್ತಿಯ ಟೂರ್ನಿ ಅಧಿಕೃತವಾಗಿ ಆರಂಭವಾಗಿದೆ.

2024ರ ಚಾಂಪಿಯನ್ಸ್‌ ಆರ್‌ಸಿಬಿ ಈ ಸೀಸನ್‌ನಲ್ಲಿ ಕೀ ಆಟಗಾರ್ತಿ ಎಲಿಸ್‌ ಪೆರಿ ಅವರ ಅನುಪಸ್ಥಿತಿಯಲ್ಲಿ ಆಡುತ್ತಿದೆ. ಅವರು ವೈಯಕ್ತಿಕ ಕಾರಣಗಳಿಂದ ಈ ಬಾರಿಯ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದರು.ಇದು ಆರ್‌ಸಿಬಿಗೆ ಭಾರಿ ನಷ್ಟವನ್ನು ತಂದುಕೊಟ್ಟಿದೆ. ಅಂದ ಹಾಗೆ ಟಾಸ್‌ ವೇಳೆ ಮಾತನಾಡಿದ ನಾಯಕಿ ಸ್ಮೃತಿ ಮಂಧಾನಾ, ನಮ್ಮ ಆಟಗಾರ್ತಿಯರು ತುಂಬಾ ಕಠಿಣ ಪರಿಶ್ರಮವನ್ನು ಹಾಕಿದ್ದಾರೆ. ನಾವು ಆರು ಮಂದಿ ಭಾರತೀಯ ಆಟಗಾರ್ತಿಯರು ಹಾಗೂ ನಾಲ್ಕು ಮಂದಿ ವಿದೇಶಿ ಆಟಗಾರ್ತಿಯರನ್ನು ಆಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತ ಟಿ20ಐ ತಂಡದಲ್ಲಿ ಗಾಯಾಳು ತಿಲಕ್‌ ವರ್ಮಾ ಸ್ಥಾನ ತುಂಬಬಲ್ಲ ಮೂವರು ಆಟಗಾರರು!

ಇನ್ನು ಟಾಸ್‌ ಬಳಿಕ ಮಾತನಾಡಿದ ಹರ್ಮನ್‌ಪ್ರೀತ್‌ ಕೌರ್‌, ನಾವು ಕೂಡ ಬೌಲ್‌ ಮಾಡಲು ಎದುರು ನೋಡುತ್ತಿದ್ದೆವು, ಏಕೆಂದರೆ ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬರಲಿದೆ. ಇಲ್ಲಿನ ಕಂಡೀಷನ್ಸ್‌ ಬಹುಬೇಗ ಬದಲಾಗುತ್ತದೆ. ಅನಾರೋಗ್ಯದ ಕಾರಣ ಹೇಯ್ಲಿ ಮ್ಯಾಥ್ಯೂಸ್‌ ಆಡುತ್ತಿಲ್ಲ. ಕಳೆದ 10ದಿನಗಳಿಂದ ನಾವು ಅಭ್ಯಾಸ ನಡೆಸುತ್ತಿದ್ದೇವೆ. ಎಲ್ಲರೂ ಉತ್ತಮ ಲಯದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.



ಉಭಯ ತಂಡಗಳ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್‌ ಹ್ಯಾರಿಸ್‌, ಡಯಾಲನ ಹೇಮಲತಾ, ರಿಚಾ ಘೋಷ್‌ (ವಿಕೆಟ್‌ ಕೀಪರ್‌), ರಾಧಾ ಯಾದವ್‌, ನದಿನ್‌ ಡಿ ಕ್ಲಾರ್ಕ್‌, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್‌, ಪ್ರೇಮಾ ರಾವತ್‌, ಲಿನ್ಸೇ ಸ್ಮಿತ್‌. ಲಾರೆನ್‌ ಬೆಲ್‌

ಮುಂಬೈ ಇಂಡಿಯನ್ಸ್‌: ನ್ಯಾಟ್‌ ಸೀವರ್‌ ಬ್ರಂಟ್‌, ಜಿ ಕಮಲಿನಿ (ವಿಕೆಟ್‌ ಕೀಪರ್‌), ಅಮೇಲಿಯಾ ಕೆರ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಅಮನ್‌ಜೋತ್‌ ಕೌರ್‌, ನಿಕೋಲ ಕ್ಯಾರಿ, ಪೂನಮ್‌ ಖೆಮ್ನರ್‌, ಶಬ್ನಿಮ್‌ ಇಸ್ಮಾಯಿಲ್‌, ಸಂಸ್ಕೃತಿ ಗುಪ್ತಾ, ಸಜೀವನ್‌ ಸಂಜನಾ, ಸೈಕಾ ಇಶಾಕ್‌



ತಂಡಗಳ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವಾಲ್‌, ಗೌತಮಿ ನಾಯಕ್‌, ಗ್ರೇಸ್‌ ಹ್ಯಾರಿಸ್‌, ರಿಚಾ ಘೋಷ್‌ (ವಿಕೆಟ್‌ ಕೀಪರ್‌), ನಡಿನ್‌ ಡಿ ಕ್ಲಾರ್ಕ್‌, ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌, ಶ್ರೇಯಾಂಕ ಪಾಟೀಲ್‌, ಅರುಂಧತಿ ರೆಡ್ಡಿ, ಲಾರೆನ್‌ ಬೆಲ್‌, ಕುಮಾರ್‌ ಪ್ರತ್ಯೋಷಾ, ಸಯಾಲಿ ಸಾತ್ಘಾರೆ, ಪ್ರೇಮಾ ರಾವತ್‌, ಡಯಾಲನ್‌ ಹೇಮಲತಾ, ಲಿನ್ಸಿ ಸ್ಮಿತ್‌

ಮುಂಬೈ ಇಂಡಿಯನ್ಸ್‌: ಹೇಯ್ಲಿ ಮ್ಯಾಥ್ಯೂಸ್‌, ಜಿ ಕಮಲಿನಿ (ವಿಕೆಟ್‌ ಕೀಪರ್‌), ನ್ಯಾಟ್‌ ಸೀವರ್‌ ಬ್ರಂಟ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಅಮೇಲಿಯಾ ಕೆರ್‌, ಸಜೀವನ್‌ ಸಜನಾ, ಪೂನಮ್‌ ಖೆಮ್ನರ್‌, ಸಂಸ್ಕೃತಿ ಗುಪ್ತಾ, ಶಬ್ನಿಮ್‌ ಇಸ್ಮಾಯಿಲ್‌, ತ್ರಿವೇಣಿ ವಸಿಷ್ಠ, ನಲ್ಲಾ ರೆಡ್ಡಿ, ರಹಿಲಾ ಫರ್ಡೌಸ್‌, ಮಿಲ್ಲಿ ಇಲ್ಲಿಂಗ್‌ವರ್ಥ್‌, ಸೈಕಾ ಇಶಾಕ್‌, ನಿಕೋಲಾ ಕ್ಯಾರಿ