ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಅವಕಾಶ ಇದೆಯಾ?

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನು ಮುಂದುವರಿಸಲಿದೆ. ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ ಭಾರತ ತಂಡಕ್ಕೆ ಶ್ರೀಲಂಕಾ ಟೆಸ್ಟ್‌ ಸರಣಿಯಲ್ಲಿ ಗೆಲುವು ಅಗತ್ಯವಾಗಿದೆ. ಭಾರತದ ಫೈನಲ್‌ ಅರ್ಹತೆ ಲೆಕ್ಕಾಚಾರ ಹೇಗಿದೆ ಎಂದು ಇಲ್ಲಿ ವಿವರಿಸಲಾಗಿದೆ.

WTC ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಚಾನ್ಸ್‌ ಇದೆಯಾ?

ಭಾರತ ತಂಡದ ಡಬ್ಲ್ಯುಟಿಸಿ ಫೈನಲ್‌ ಲೆಕ್ಕಾಚಾರ ಹೇಗಿದೆ? -

Profile
Ramesh Kote Aug 11, 2026 9:06 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಗೆಲುವಿನ ಬಳಿಕ ಭಾರತ ತಂಡ, ಇದೀಗ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ (IND vs SL) ಸಜ್ಜಾಗುತ್ತಿದೆ. ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲನೇ ಪಂದ್ಯದ ಮೂಲಕ ಟೆಸ್ಟ್‌ ಸರಣಿ ಶುರುವಾಗಲಿದೆ. ಈ ಸರಣಿಯ ಮೂಲಕ ಟೀಮ್‌ ಇಂಡಿಯಾ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಮುಂದುವರಿಸಲಿದೆ. 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಸೋಲಿನ ಬಳಿಕ ಭಾರತ ಇದೀಗ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.

2024ರ ಮಧ್ಯದಿಂದ ಭಾರತ ತಂಡ ಒಂದೇ ಒಂದು ಟೆಸ್ಟ್‌ ಸರಣಿಯನ್ನು ಗೆದ್ದಿದೆ. ಇದು ವೆಸ್ಟ್‌ ಇಂಡೀಸ್‌ ವಿರುದ್ಧದ ಗೆಲುವಾಗಿದೆ. ಇದಾದ ಬಳಿಕ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಎದುರು ತವರು ಸರಣಿಗಳನ್ನು ಸೋತಿದ್ದರೆ, ನಂತರ ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ ಸೋತಿತ್ತು. ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯನ್ನು ಭಾರತ ಡ್ರಾ ಮಾಡಿಕೊಂಡಿತ್ತು. ಪ್ರಸ್ತುತ ಡಬ್ಲ್ಯುಟಿಸಿ ಋತುವಿನಲ್ಲಿ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಮಾತ್ರ ಸಂಬಂಧಿಸಿವೆ.

IND vs SL ಟೆಸ್ಟ್‌ ಸರಣಿಯಲ್ಲಿ ಭಾರತಕ್ಕೆ ಎಕ್ಸ್‌ ಫ್ಯಾಕ್ಟರ್‌ ಆಟಗಾರನನ್ನು ಹೆಸರಿಸಿದ ಫರ್ವೀಝ್‌ ಮಹರೂಫ್‌!

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತಕ್ಕೆ ಸಂಕಷ್ಟ

ಎರಡು ಬಾರಿ ಫೈನಲ್ ತಲುಪಿರುವ ಭಾರತ ತಂಡ ಇದೀಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಒಂಬತ್ತು ಟೆಸ್ಟ್‌ಗಳಿಂದ ಭಾರತ ನಾಲ್ಕು ಗೆಲುವು, ನಾಲ್ಕು ಸೋಲು ಮತ್ತು ಒಂದು ಡ್ರಾ ದಾಖಲಿಸಿದ್ದು, ಒಟ್ಟು 48.15 ಶೇಕಡಾ ಅಂಕಗಳೊಂದಿಗೆ WTC ಫೈನಲ್‌ಗೆ ಅರ್ಹತೆ ಪಡೆಯುವ ಹಾದಿ ಅತ್ಯಂತ ಕಠಿಣವಾಗಲಿದೆ. ಈ ಡಬ್ಲ್ಯುಟಿಸಿ ಋತುವಿನಲ್ಲಿ ಭಾರತಕ್ಕೆ ಇನ್ನೂ ಒಂಬತ್ತು ಟೆಸ್ಟ್ ಪಂದ್ಯಗಳು ಬಾಕಿ ಇವೆ.

ಭಾರತ ತಂಡದ ಇನ್ನುಳಿದ ಪಂದ್ಯಗಳು

ಶ್ರೀಲಂಕಾ ವಿರುದ್ಧ – 2 ಟೆಸ್ಟ್: ಆಗಸ್ಟ್ 2026

ನ್ಯೂಜಿಲೆಂಡ್ ವಿರುದ್ಧ – 2 ಟೆಸ್ಟ್: ನವೆಂಬರ್ 2026

ಆಸ್ಟ್ರೇಲಿಯಾ ವಿರುದ್ಧ – 5 ಟೆಸ್ಟ್: ಜನವರಿ ಮತ್ತು ಫೆಬ್ರವರಿ 2027

ಭಾರತ ಇನ್ನು ಮುಂದೆ ಯಾವುದೇ ಪಂದ್ಯದಲ್ಲಿ ಸೋಲು ಅನುಭವಿಸುವಂತಿಲ್ಲ. ಉಳಿದ ಒಂಬತ್ತು ಪಂದ್ಯಗಳಲ್ಲಿ ಕನಿಷ್ಠ ಏಳು ಪಂದ್ಯಗಳನ್ನು ಗೆದ್ದರೆ ಮಾತ್ರ ಭಾರತ 60ಕ್ಕಿಂತ ಹೆಚ್ಚಿನ ಶೇಕಡಾ ಅಂಕಗಳನ್ನು ಗಳಿಸಿ ಉತ್ತಮ ಸ್ಥಾನಕ್ಕೇರಲು ಸಾಧ್ಯ.

IND vs SL: ಮೊದಲನೇ ಟೆಸ್ಟ್‌ಗೂ ಮುನ್ನ ರಿಷಭ್‌ ಪಂತ್‌ಗೆ ದೀಪ್‌ ದಾಸ್‌ಗುಪ್ತಾ ಮಹತ್ವದ ಸಲಹೆ!

ಪ್ರಸ್ತುತ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಡಬ್ಲ್ಯಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಈ ಮೂರೂ ತಂಡಗಳು 70ಕ್ಕಿಂತ ಹೆಚ್ಚು ಶೇಕಡಾ ಅಂಕಗಳನ್ನು ಹೊಂದಿವೆ. ಹೀಗಾಗಿ ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಬೇಕೆಂದರೆ ಮುಂಬರುವ ಒಂಬತ್ತು ಟೆಸ್ಟ್‌ಗಳು ಅತ್ಯಂತ ನಿರ್ಣಾಯಕವಾಗಿವೆ.

ಭಾರತ ತಂಡ ಫೈನಲ್‌ ಪ್ರವೇಶದ ಲೆಕ್ಕಾಚಾರ ಹೇಗಿದೆ?

ಕಳೆದ ಎರಡು ಆವೃತ್ತಿಗಳಿಂದ ಭಾರತ ತಂಡದ ಪ್ರದರ್ಶನ ತವರು ಹಾಗೂ ವಿದೇಶಿ ಎರಡೂ ಕಡೆಗಳಲ್ಲಿ ಕುಸಿದಿದೆ. ಶ್ರೀಲಂಕಾದಲ್ಲಿ ಭಾರತ ಟೆಸ್ಟ್ ಸರಣಿ ಸೋತು ಸಾಕಷ್ಟು ಸಮಯ ಕಳೆದಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ಬ್ಯಾಟರ್‌ಗಳ ಪ್ರದರ್ಶನ ಆತಂಕ ಮೂಡಿಸಿದೆ. ಹೀಗಾಗಿ ದ್ವೀಪ ರಾಷ್ಟ್ರದಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಲ್ಲೂ ಗೆಲುವು ಸಾಧಿಸಲು ಭಾರತ ತಂಡ, ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡಬೇಕಾಗಬಹುದು. ಶ್ರೀಲಂಕಾದ ಸ್ಪಿನ್ ಸ್ನೇಹಿ ಪರಿಸ್ಥಿತಿಗಳನ್ನು ಗಮನಿಸಿದರೆ, ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಇದು ದೊಡ್ಡ ಸವಾಲಾಗುವ ಸಾಧ್ಯತೆಯಿದೆ.

ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನು ಗೆದ್ದರೂ, ನಂತರ ಆಸ್ಟ್ರೇಲಿಯಾ ಎದುರು ತವರಿನಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಅಂದ ಹಾಗೆ ಆಸ್ಟ್ರೇಲಿಯಾ ತಂಡ ತನ್ನ ಪೂರ್ಣ ಪ್ರಮಾಣದ ಆಟಗಾರರೊಂದಿಗೆ ಭಾರತಕ್ಕೆ ಆಗಮಿಸಿದರೆ, ಶುಭಮನ್‌ ಗಿಲ್‌ ನಾಯಕತ್ವದ ಯುವ ತಂಡಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ.