ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಭಾರತ, ಆರ್‌ಸಿಬಿ ನಾಯಕತ್ವವನ್ನು ತೊರೆಯಲು ಕಾರಣ ತಿಳಿಸಿದ ವಿರಾಟ್‌ ಕೊಹ್ಲಿ!

Virat Kohli on quitting captains: ಪ್ರಸ್ತುತ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳುರು ತಂಡದ ನಾಯಕ ವಿರಾಟ್‌ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಅವರು ಭಾರತ ಹಾಗೂ ಆರ್‌ಸಿಬಿ ನಾಯಕತ್ವವನ್ನು ತೊರೆಯಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಭಾರತ, ಆರ್‌ಸಿಬಿ ನಾಯಕತ್ವ ತೊರೆಯಲು ಕಾರಣ ತಿಳಿಸಿದ ಕೊಹ್ಲಿ!

ವಿರಾಟ್‌ ಕೊಹ್ಲಿ ಹೇಳಿಕೆ.

Profile Ramesh Kote May 6, 2025 5:23 PM

ಬೆಂಗಳೂರು: ಭಾರತ ಕ್ರಿಕೆಟ್‌ ತಂಡ (Indian Cricket Team) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಗಳ ನಾಯಕತ್ವವನ್ನು ತೊರೆಯಲು ಕಾರಣವೇನೆಂದು ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (Virat Kohli) ಇದೀಗ ರಿವೀಲ್‌ ಮಾಡಿದ್ದಾರೆ. ಭಾರತ ಹಾಗೂ ಆರ್‌ಸಿಬಿ ನಾಯಕತ್ವ ಎರಡನ್ನೂ ನಿರ್ವಹಿಸುವ ವೇಳೆ ಕಾರ್ಯಭಾರ ಹಾಗೂ ತಮ್ಮ ಹೆಚ್ಚಿನ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದ ಕಾರಣ ಒತ್ತಡ ಜಾಸ್ತಿಯಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಅಂದು ಭಾರತ ಹಾಗೂ ಆರ್‌ಸಿಬಿ ತಂಡಗಳ ನಾಯಕತ್ವವನ್ನು ತೊರೆಯಬೇಕಾಗಿತ್ತು ಎಂದು ಕಿಂಗ್‌ ಕೊಹ್ಲಿ ತಿಳಿಸಿದ್ದಾರೆ. ಸದ್ಯ ವಿರಾಟ್‌ ಕೊಹ್ಲಿ ಹಾಗೂ ಆರ್‌ಸಿಬಿ ಎರಡೂ ತಂಡಗಳಲ್ಲಿ ಹಿರಿಯ ಬ್ಯಾಟ್ಸ್‌ಮನ್‌ ಆಗಿ ಆಡುತ್ತಿದ್ದಾರೆ.

2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವವನ್ನು ತೊರೆದಿದ್ದರು. ನಂತರ 2021ರ ಐಸಿಸಿ ಟಿ2೦ ವಿಶ್ವಕಪ್‌ ಟೂರ್ನಿಯ ಬಳಿಕವೂ ಅವರು ಭಾರತ ಟಿ20 ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದರು. ನಂತರ ವೈಟ್‌ಬಾಲ್‌ ತಂಡಗಳಿಗೆ ಒಬ್ಬರೇ ನಾಯಕತ್ವ ಇರಬೇಕೆಂಬ ಕಾರಣದಿಂದ ವಿರಾಟ್‌ ಕೊಹ್ಲಿ ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗೆ ಇಳಿಸಿತ್ತು. ನಂತರ 2022ರ ಆರಂಭದಲ್ಲಿ ವಿರಾಟ್‌ ಕೊಹ್ಲಿ ಟೆಸ್ಟ್‌ ನಾಯಕತ್ವವನ್ನು ತೊರೆದು ಬಿಸಿಸಿಐಗೆ ತಿರುಗೇಟು ನೀಡಿದ್ದರು.

IPL 2025: ವಿರಾಟ್‌ ಕೊಹ್ಲಿಗೆ ಧನ್ಯವಾದ ತಿಳಿಸಿದ ಯಶ್‌ ದಯಾಳ್‌ ತಂದೆ

"ಈ ಹಿಂದೆಯೂ ನಾನು ಹೇಳಿದ್ದೆ. ನನ್ನ ವೃತ್ತಿಜೀವನದ ಉತ್ತುಂಗದ ವರ್ಷಗಳಲ್ಲಿ ಬೇರೆಡೆ ಅನ್ವೇಷಿಸಲು ಮತ್ತು ನೋಡಲು ನನಗೆ ಅವಕಾಶ ಸಿಕ್ಕಿತು. ನನ್ನ ವೃತ್ತಿ ಜೀವನದ 2016 ರಿಂದ 2019ರ ನಡುವೆ ನನಗೆ ಸಾಕಷ್ಟು ಸಲಹೆಗಳು ಬಂದಿದ್ದವು. ಈ ಅವಧಿಯಲ್ಲಿ ಸಾಕಷ್ಟು ವೇಳಾಪಟ್ಟಿ ಇತ್ತು ಹಾಗೂ ಇದರಿಂದ ನನಗೆ ತುಂಬಾ ಕಷ್ಟವಾಗುತ್ತಿತ್ತು. ಭಾರತ ತಂಡವನ್ನು 7-8 ವರ್ಷಗಳ ಕಾಲ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 9 ವರ್ಷಗಳ ಕಾಲ ನಾಯಕನಾಗಿದ್ದೆ. ನಾನು ಆಡಿದ್ದ ಎಲ್ಲಾ ಪಂದ್ಯಗಳಲ್ಲಿ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು," ಎಂದು ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

"ನನ್ನ ಮೇಲಿನ ಎಲ್ಲರ ಗಮನ ಕಡಿಮೆಯಾಗಿದೆ ಎಂದು ನನಗೆ ಎಂದಿಗೂ ಅನಿಸಿಲ್ಲ. ನಾನು ಏನು ಮಾಡಬೇಕೆಂದು ತಿಳಿಯದ ಜಾಗದಲ್ಲಿ ಇದ್ದೆ. ನಾನು ಇದನ್ನು 24*7 ಎದುರಿಸುತ್ತಿದ್ದೆ ಹಾಗೂ ಇದು ನನಗೆ ತುಂಬಾ ಕಠಿಣವಾಗುತ್ತಿತ್ತು. ನಾನು ಆ ಜಾಗದಲ್ಲಿ ಉಳಿಯಬೇಕಾದರೆ, ನಾನು ಯಾವಾಗಲೂ ಸಂತೋಷವಾಗಿರಬೇಕೆಂದು ಅನಿಸಿತ್ತು. ನಾನು ನಿರ್ಣಯಿಸಲ್ಪಡದೆ ಕ್ರಿಕೆಟ್ ಆಡಬಹುದಾದ ಸ್ಥಳದಲ್ಲಿರಲು ಬಯಸಿದ್ದೆ," ಎಂದು ಆರ್‌ಸಿಬಿ ಮಾಜಿ ನಾಯಕ ಹೇಳಿದ್ದಾರೆ.

IPL 2025: ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್‌ ಅನ್ನು ಆರಿಸಿದ ವಿರಾಟ್‌ ಕೊಹ್ಲಿ!

ನಾಯಕನಾಗಿ ಕಪ್‌ ಗೆಲ್ಲದ ವಿರಾಟ್‌ ಕೊಹ್ಲಿ

ವಿರಾಟ್‌ ಕೊಹ್ಲಿ ನಾಯಕ್ವದಲ್ಲಿ ಭಾರತ ತಂಡ, ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿದೆ. ಆದರೆ, ಒಮ್ಮೆಯೂ ಐಸಿಸಿ ಟ್ರೋಫಿ ಗೆದ್ದಿಲ್ಲವೆಂಬುದು ಬೇಸರದ ಸಂಗತಿ. ಕೊಹ್ಲಿ ನಾಯಕತ್ವದಲ್ಲಿ 2019ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ನಂತರ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ವಿಫಲವಾಗಿತ್ತು. ಅದರಂತೆ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿಯೂ ಆರ್‌ಸಿಬಿ ಒಮ್ಮೆಯೂ ಕಪ್‌ ಗೆದ್ದಿಲ್ಲ. 2016ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಪಂದ್ಯದ ಮುಕ್ಕಾಲು ಅವಧಿಯಲ್ಲಿ ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಕೊನೆಯಲ್ಲಿ ಡೇವಿಡ್‌ ವಾರ್ನರ್‌ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತು ರನ್ನರ್‌ ಅಪ್‌ ಆಗಿತ್ತು.