ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026 38th match: LSG vs KKR ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ವಿವರ!

LSG vs KK Match Preview: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕ್ರಮವಾಗಿ ಕೊನೆಯ ಸ್ಥಾನಗಳಲ್ಲಿರುವ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಭಾನುವಾರ ನಡೆಯುವ 38ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈಗಾಗಲೇ ಸಾಲು ಸಾಲು ಸೋಲುಗಳನ್ನು ಅನುಭವಿಸಿರುವ ಈ ಎರಡೂ ತಂಡಗಳಿಗೆ ಮುಂದಿನ ಎಲ್ಲಾ ಪಂದ್ಯಗಳಲ್ಲಿಯೂ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಲಿದೆ.

IPL 2026: KKR vs LSG ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಲಖನೌ vs ಕೋಲ್ಕತಾ ನಡುವಣ ಐಪಿಎಲ್‌ ಪಂದ್ಯ. -

Profile
Ramesh Kote Apr 25, 2026 5:49 PM

ಲಖನೌ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಸಾಲು ಸಾಲು ಸೋಲುಗಳನ್ನು ಅನುಭವಿಸಿರುವ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು (LSG vs KKR) ಭಾನುವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುವ 38ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಎರಡೂ ತಂಡಗಳು 2026ರ ಟೂರ್ನಿಯ ಅಂಕಪಟ್ಟಿಯಲ್ಲಿ ಕ್ರಮವಾಗಿ ಕೊನೆಯ ಸ್ಥಾನಕ್ಕೆ ಕುಸಿದಿವೆ. ಹಾಗಾಗಿ ಮುಂದಿನ ಎಲ್ಲಾ ಪಂದ್ಯಗಳು ಕೂಡ ಈ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯಗಳಾಗಲಿವೆ.

ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರ ಪರಿಣಾಮ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಆಡಿದ 7 ಪಂದ್ಯಗಳಲ್ಲಿ ಒಂದು ಗೆಲುವು, ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ ಹಾಗೂ ಇನ್ನೊಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯ ಕಂಡಿದೆ. ಇದೀಗ ಭಾನುವಾರದ ಪಂದ್ಯದಲ್ಲಿ ಸೋಲು ಅನುಭವಿಸಿದರೆ ಕೆಕೆಆರ್ ಪ್ಲೇಆಫ್ಸ್‌ ರೇಸ್‌ನಿಂದ ಹೊರ ಬೀಳಲಿದೆ.

ʻಇವರು ಕೇವಲ ಕಿಂಗ್‌ ಮಾತ್ರವಲ್ಲ, ಚೇಸ್‌ ಮಾಸ್ಟರ್‌ʼ: ವಿರಾಟ್‌ ಕೊಹ್ಲಿಗೆ ಸುನೀಲ್‌ ಗವಾಸ್ಕರ್‌ ಮೆಚ್ಚುಗೆ!

ಲಖನೌ ತಂಡ ಪವರ್‌ಪ್ಲೇ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದೆ, ಆದರೆ, ಮಧ್ಯಮ ಹಾಗೂ ಡೆತ್‌ ಓವರ್‌ಗಳಲ್ಲಿ ವೈಫಲ್ಯ ಅನುಭವಿಸುತ್ತುದೆ. ಇನ್ನು ಬ್ಯಾಟಿಂಗ್‌ನಲ್ಲಿಯೂ ಎಲ್‌ಎಸ್‌ಜಿ ಸ್ಥಿರ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗುತ್ತಿದೆ. ಏಡೆನ್‌ ಮಾರ್ಕ್ರಮ್‌ ಹಾಗೂ ನಿಕೋಲಸ್‌ ಪೂರನ್‌ ಅವರು ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಜೊತೆಗೆ ನಾಯಕ ರಿಷಭ್‌ ಪಂತ್‌ ಒಂದು ಪಂದ್ಯದಲ್ಲಿ ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.

ಹೊಸ ಚೆಂಡಿನಲ್ಲಿ ಮೊಹಮ್ಮದ್‌ ಶಮಿ ಹಾಗೂ ಆವೇಶ್‌ ಖಾನ್‌ ಅವರು ಉತ್ತಮ ಪ್ರದರ್ಶನವನ್ನು ತೋರುತ್ತಿದ್ದರೆ, ಇವರಿಗೆ ಸ್ಪಿನ್ನರ್‌ಗಳು ಸಾಥ್‌ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಲಖನೌ ತಂಡ ನಿಯಮಿತವಾಗಿ ವಿಫಲವಾಗುತ್ತಿದೆ.

IPL 2026: 34 ಪಂದ್ಯಗಳು ಮುಕ್ತಾಯ; ತಂಡಗಳ ಪ್ಲೇ ಆಪ್‌ ಲೆಕ್ಕಾಚಾರ ಹೇಗಿದೆ?

ಏಕನಾ ಗ್ರೌಂಡ್‌ನ ಪಿಚ್‌ ರಿಪೋರ್ಟ್‌

ಏಕನಾ ಕ್ರಿಕೆಟ್‌ ಕ್ರೀಡಾಂಗಣದ ಪಿಚ್‌ ನಿಧಾನಗತಿಯಿಂದ ಕೂಡಿದ್ದು, ಇಲ್ಲಿ ವೇಗವಾಗಿ ರನ್‌ ಗಳಿಸುವುದು ಸುಲಭವಲ್ಲ. ಅಲ್ಲದೆ ಎರಡನೇ ಅವಧಿಯಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಇಬ್ಬನಿ ಬಂದರೆ ಚೇಸಿಂಗ್‌ ತಂಡಕ್ಕೆ ನೆರವು ನೀಡಲಿದೆ. ಮಳೆ ಬರುವ ಸಾಧ್ಯತೆ ಕಡಿಮೆ ಇದ್ದು, 20 ಓವರ್‌ಗಳನ್ನು ಪೂರ್ಣಗೊಳಿಸಬಹುದು.

ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಲಖನೌ ಸೂಪರ್‌ ಜಯಂಟ್ಸ್: ಮಿಚೆಲ್‌ ಮಾರ್ಷ್‌, ಏಡೆನ್‌ ಮಾರ್ಕ್ರಮ್‌, ರಿಷಭ್‌ ಪಂತ್‌ (ನಾಯಕ, ವಿಕೆಟ್‌ ಕೀಪರ್‌), ನಿಕೋಲಸ್‌ ಪೂರನ್‌, ಆಯುಷ್‌ ಬದೋನಿ, ಅಬ್ದುಲ್‌ ಸಮದ್‌, ಮುಕುಲ್‌ ಚೌಧರಿ, ಮಣಿಮಾರನ್‌ ಸಿದ್ದಾರ್ಥ್‌, ಆವೇಶ್‌ ಖಾನ್‌, ಮೊಹಮ್ಮದ್‌ ಶಮಿ, ದಿಗ್ವೇಶ್‌ ರಾಥಿ/ಪ್ರಿನ್ಸ್‌ ಯಾದವ್‌

ಕೋಲ್ಕತಾ ನೈಟ್‌ ರೈಡರ್ಸ್‌: ಫಿನ್‌ ಆಲೆನ್‌, ಅಜಿಂಕ್ಯ ರಹಾನೆ (ನಾಯಕ), ಅಂಗ್‌ಕ್ರಿಷ್‌ ರಘುವಂಶಿ (ವಿಕೆಟ್‌ ಕೀಪರ್‌) ಕ್ಯಾಮೆರಾನ್‌ ಗ್ರೀನ್‌, ರಿಂಕು ಸಿಂಗ್‌, ರಮಣ್‌ದೀಪ್‌ ಸಿಂಗ್‌, ಅನುಕುಲ್‌ ರಾಯ್‌, ಸುನೀಲ್‌ ನರೇನ್‌, ವೈಭವ್‌ ಅರೋರಾ, ಕಾರ್ತಿಕ್‌ ತ್ಯಾಗಿ/ಬ್ಲೆಸಿಂಗ್‌ ಮುಝರಾಬಾನಿ, ವರುಣ್‌ ಚಕ್ರವರ್ತಿ

IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು

ಪಂದ್ಯದ ವಿವರ

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌

38ನೇ ಪಂದ್ಯ

ಲಖನೌ ಸೂಪರ್‌ ಜಯಂಟ್ಸ್‌ vs ಕೋಲ್ಕತಾ ನೈಟ್‌ ರೈಡರ್ಸ್‌

ದಿನಾಂಕ: ಏಪ್ರಿಲ್‌ 26, 2026

ಸಮಯ: ಸಂಜೆ 07: 30 ಕ್ಕೆ

ಸ್ಥಳ: ಏಕನಾ ಕ್ರಿಕೆಟ್‌ ಕ್ರೀಡಾಂಗಣ, ಲಖನೌ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌