ರಜತ್ ಪಾಟೀದಾರ್ ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್; ಬದಲಿ ಆಟಗಾರನಾಗಿ ಬಂದು ತಂಡದ ದಿಸೆಯನ್ನೇ ಬದಲಿಸಿದ ನಾಯಕ
Rajat Patidar: ಮಂಗಳವಾರ (ಮೇ 26) ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯವನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಮುನ್ನಡೆಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಜತ್ ಪಟಿದಾರ್ ಪಾತ್ರರಾದರು.
Rajat Patidar -
ಬೆಂಗಳೂರು, ಮೇ 27: ರಜತ್ ಪಾಟಿದಾರ್(Rajat Patidar)...ಮಧ್ಯಪ್ರದೇಶ ಮೂಲದ ಈ ಕ್ರಿಕೆಟಿಗ ಇಂದು ಕರ್ನಾಟಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳ ಪಾಲಿನ ಕಣ್ಮಣಿ ಎಂದರೂ ತಪ್ಪಾಗಲಾರದು. ಐಪಿಎಲ್ 2021 ರ ಕಳಪೆ ಋತುವಿನ ನಂತರ, ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಿಡುಗಡೆ ಮಾಡಿತು. ಕೇವಲ ನಾಲ್ಕು ವರ್ಷಗಳ ನಂತರ, ಅವರು ಅದೇ ಫ್ರಾಂಚೈಸಿಯನ್ನು ಐತಿಹಾಸಿಕ ಪ್ರಶಸ್ತಿಗೆ ಕೊಂಡೊಯ್ಯುತ್ತಾರೆ, 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುತ್ತಾರೆ ಎಂದು ಯಾರು ಊಹೆ ಕೂಡ ಮಾಡಿರಲಿಲ್ಲ.
2008 ರಿಂದ 2024ರ ಅವಧಿಯಲ್ಲಿ ಬರೋಬ್ಬರಿ 17 ಸೀಸನ್‌ಗಳನ್ನು ಪೂರೈಸಿದ್ದ ಆರ್‌ಸಿಬಿ ತಂಡವನ್ನು, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್‌ರಂತಹ ದಿಗ್ಗಜ ಆಟಗಾರರು ಮುನ್ನಡೆಸಿದ್ದರು. ಈ ಅವಧಿಯಲ್ಲಿ (2009, 2011 ಹಾಗೂ 2016) ಒಟ್ಟು 3 ಬಾರಿ ಫೈನಲ್ ಕೂಡ ಪ್ರವೇಶಿಸಿತ್ತು. ಆದರೆ, ತಂಡವು ಒಮ್ಮೆ ಕೂಡ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಆದರೆ 2025ರಲ್ಲಿ ಪಾಟಿದಾರ್ ಅವರು ನಾಯಕತ್ವ ವಹಿಸಿಕೊಳ್ಳುತ್ತಿದ್ದಂತೆ ತಂಡದ ಜೋಶ್ ಬದಲಾಯಿತು. ತಮ್ಮ ಮೊದಲ ನಾಯಕತ್ವದಲ್ಲೇ ಆರ್‌ಸಿಬಿಗೆ 18 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿತು. ಇದೀಗ ಹಾಲಿ ಆವೃತ್ತಿಯಲ್ಲಿಯೂ ತಂಡವನ್ನು ಫೈನಲ್‌ಗೇರಿಸಿ ಸತತ ಎರಡನೇ ಟ್ರೋಫಿ ಗೆಲ್ಲಿಸಿಕೊಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನು ಸಾಧಿಸಲು ಇನ್ನೊಂದು ಗೆಲುವು ಅಗತ್ಯ.
Came out all guns blazing to book back-to-back tickets to the finale. ❤️#PlayBold #ನಮ್ಮRCB #IPL2026 #RCBvGT pic.twitter.com/ICkp8yeTrl
— Royal Challengers Bengaluru (@RCBTweets) May 27, 2026
ಮೊದಲ ನಾಯಕ
ಮಂಗಳವಾರ (ಮೇ 26) ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯವನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಮುನ್ನಡೆಸಿದ ಮೊದಲ ಆಟಗಾರ ಹಾಗೂ ನಾಯಕ ಎಂಬ ಹೆಗ್ಗಳಿಕೆಗೆ ರಜತ್ ಪಟಿದಾರ್ ಪಾತ್ರರಾದರು. ಗೆಲುವಿಗಿಂತ ಹೆಚ್ಚು ಸೋಲುಗಳನ್ನೇ ಕಾಣುತ್ತಿದ್ದ ತಂಡ, ಈಗ ರಜತ್ ನಾಯಕತ್ವದಲ್ಲಿ ಯಾವುದೇ ತಂಡವನ್ನು ಸುಲಭವಾಗಿ ಮಣಿಸುವ ಸಾಮರ್ಥ್ಯ ಹೊಂದಿದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟ್ ಆದ ಸಾಯಿ ಸದರ್ಶನ್; ವಿಡಿಯೊ ವೈರಲ್
ರಾಷ್ಟ್ರೀಯ ತಂಡದಲ್ಲಿ ಸಿಗದ ಮನ್ನಣೆ
ಬ್ಯಾಟಿಂಗ್‌ನಲ್ಲಿಯೂ ನಾಯಕನ ಸ್ಥಾನಕ್ಕೆ ತಕ್ಕ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ನೆರವಾಗುತ್ತಿರುವುದು ಅವರ ಪ್ಲಸ್ ಪಾಯಿಂಟ್. ದೇಶೀಯ ಟೂರ್ನಿಯಲ್ಲಿಯಲ್ಲೂ ಮಧ್ಯಪ್ರದೇಶ ತಂಡದ ನಾಯನಾಗಿಯೂ ಅವರು ಹಲವು ಸಾಧನೆ ಮಾಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಬಲವಾದ ಪ್ರದರ್ಶನ ನೀಡಿದ್ದರೂ, ರಾಷ್ಟ್ರೀಯ ತಂಡದಲ್ಲಿ ಅವರಿಗೆ ಮನ್ನಣೆ ಸಿಗದಿರುವುದು ವಿಪರ್ಯಾಸವೇ ಸರಿ. ಭಾರತ ಪರ ಒಂದು ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಅದು 2023ರಲ್ಲಿ.
2022ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್‌ನಲ್ಲಿ ಪಂದ್ಯದಲ್ಲಿ ಅವರು 54 ಎಸೆತಗಳಲ್ಲಿ ಅಸಾಧಾರಣ 112 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್ ಪ್ಲೇಆಫ್‌ನಲ್ಲಿ ಶತಕ ಗಳಿಸಿದ ಮೊದಲ ಆಡದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2023ರಲ್ಲಿ ಅವರು ಹಿಮ್ಮಡಿ ಗಾಯದಿಂದ ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿದಿದ್ದರು. 2024 ರಲ್ಲಿ ಮತ್ತೆ ತಂಡಕ್ಕೆ ಮರಳಿ 177.13 ರ ಸ್ಟ್ರೈಕ್ ರೇಟ್‌ನಲ್ಲಿ 395 ರನ್ ಗಳಿಸಿದ್ದರು. 2025 ರ ಮೆಗಾ ಹರಾಜು ಬರುವ ಹೊತ್ತಿಗೆ, ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿತು. ವಿರಾಟ್ ಕೊಹ್ಲಿ, ಯಶ್ ದಯಾಳ್ ಮತ್ತು ರಜತ್ ಪಾಟಿದಾರ್. 2025ರಲ್ಲಿ ಅವರು 143 ಸ್ಟ್ರೈಕ್ ರೇಟ್‌ನಲ್ಲಿ 312 ರನ್ ಗಳಿಸಿದ್ದರು. ಈ ಬಾರಿಯೂ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ.