ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Genie Bouchard: ಟೆನಿಸ್‌ಗೆ ನಿವೃತ್ತಿ ಪ್ರಕಟಿಸಿದ ಮಾಜಿ ವಿಂಬಲ್ಡನ್‌ ರನ್ನರ್-ಅಪ್ ಬೌಚರ್ಡ್

ಬೌಚರ್ಡ್ 2009 ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಅವರು 2014 ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಎರಡರಲ್ಲೂ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದರು. ನಂತರ ವಿಂಬಲ್ಡನ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದರು. ಅವರು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಮೊದಲ ಕೆನಡಾದ ಸಿಂಗಲ್ಸ್ ಆಟಗಾತ್ತಿಯೂ ಹೌದು.

ಟೆನಿಸ್‌ಗೆ ನಿವೃತ್ತಿ ಪ್ರಕಟಿಸಿದ ಮಾಜಿ ವಿಂಬಲ್ಡನ್‌ ರನ್ನರ್-ಅಪ್ ಬೌಚರ್ಡ್

Profile Abhilash BC Jul 17, 2025 12:36 PM

ಒಟ್ಟಾವಾ: 2014 ರಲ್ಲಿ ವಿಂಬಲ್ಡನ್ ಫೈನಲ್ ಮತ್ತು ಇತರ ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ್ದ ಕೆನಡಾದ ಜಿನೀ ಬೌಚರ್ಡ್(Genie Bouchard) ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಾಂಟ್ರಿಯಲ್‌ನಲ್ಲಿ ನಡೆಯಲಿರುವ ನ್ಯಾಷನಲ್ ಬ್ಯಾಂಕ್ ಓಪನ್‌ನಲ್ಲಿ(National Bank Open) ಬೌಚರ್ಡ್‌ ಆಡಲಿದ್ದು, ನಂತರ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ ಎಂದು ಟೆನಿಸ್ ಕೆನಡಾ ತಿಳಿಸಿದೆ. 31 ವರ್ಷದ ಬೌಚರ್ಡ್‌ಗೆ ತವರೂರಿನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲು ವೈಲ್ಡ್ ಕಾರ್ಡ್ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ತಮ್ಮ ಬಾಲ್ಯದ ಟೆನಿಸ್ ಫೋಟೋದೊಂದಿಗೆ ಭಾವನಾತ್ಮಕ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಮೂಲಕ ನಿವೃತ್ತಿ ಸುದ್ದಿ ಪ್ರಕಟಿಸಿದರು. "ಸಮಯ ಬಂದಾಗ ನಿಮಗೆ ತಿಳಿಯುತ್ತದೆ. ನನಗೆ, ಈಗ. ಎಲ್ಲವೂ ಪ್ರಾರಂಭವಾದ ಸ್ಥಳದಿಂದ ಕೊನೆಗೊಳ್ಳುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.

ಬೌಚರ್ಡ್ 2009 ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಅವರು 2014 ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಎರಡರಲ್ಲೂ ಸೆಮಿಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದರು. ನಂತರ ವಿಂಬಲ್ಡನ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದರು. ಅವರು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಮೊದಲ ಕೆನಡಾದ ಸಿಂಗಲ್ಸ್ ಆಟಗಾತ್ತಿಯೂ ಹೌದು.

"ಕೆನಡಾದಲ್ಲಿ ನಮ್ಮ ಕ್ರೀಡೆಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು"ಎಂದು ನ್ಯಾಷನಲ್ ಬ್ಯಾಂಕ್ ಓಪನ್ ಟೂರ್ನಮೆಂಟ್ ನಿರ್ದೇಶಕಿ ವ್ಯಾಲೆರಿ ಟೆಟ್ರಿಯೊಲ್ಟ್ ಹೇಳಿದರು. "ಆಟಗಾರ್ತಿ ಮತ್ತು ಮಾದರಿಯಾಗಿ ಅವರು ಮಾಡಿದ ಎಲ್ಲದರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಈ ಬೇಸಿಗೆಯಲ್ಲಿ ಐಜಿಎ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಅವರ ಆಟ ನೋಡಲು ಎದುರು ನೋಡುತ್ತಿದ್ದೇವೆ" ಎಂದು ಟೆಟ್ರಿಯೊಲ್ಟ್ ಹೇಳಿದರು.