60 ವರ್ಷಗಳಿಂದ ಮಹಿಳೆಯ ಮೆದುಳಿನಲ್ಲಿತ್ತು ಗುಂಡು; ಇಷ್ಟು ವರ್ಷಗಳ ಬಳಿಕ ಗೊತ್ತಾಗಿದ್ದು ಹೇಗೆ?
Viral News: ಮಹಿಳೆಯೊಬ್ಬರ ಮೆದುಳಿನೊಳಗೆ ಹಲವು ದಶಕಗಳಿಂದ ಗುಂಡೊಂದು ಪತ್ತೆಯಾಗಿದ್ದು ಇದರ ಅರಿವೇ ಅವರಿಗೆ ಇರಲಿಲ್ಲ. ತನಗೆ ಈ ವಿಚಾರ ತಿಳಿಯದೆಯೆ ಮಹಿಳೆ ಬದುಕುತ್ತಿದ್ದರು. ಮಹಿಳೆಯನ್ನು ಹುನಾನ್ ಪ್ರಾಂತ್ಯದ 67 ವರ್ಷ ವಯಸ್ಸಿನ ಶ್ರೀಮತಿ ಝಾವೋ ಎಂದು ಗುರುತಿಸಲಾಗಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರನ್ನು ಅಚ್ಚರಿ ಪಡಿಸಿದೆ.
ಸಂಗ್ರಹ ಚಿತ್ರ -
ಬೀಜಿಂಗ್ ಮೇ 7: ವೈದ್ಯಕೀಯ ಜಗತ್ತಿನಲ್ಲಿ ಕೆಲವೊಂದು ಘಟನೆಗಳು ಜನರನ್ನು ವಿಸ್ಮಯಗೊಳಿಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ವೈದ್ಯಕೀಯ ಲೋಕವನ್ನೇ ಬೆರಗು ಗೊಳಿಸುವಂತ ಘಟನೆ ಚೀನಾದಲ್ಲಿ ನಡೆದಿದೆ. ಮಹಿಳೆಯೊಬ್ಬರ ಮೆದುಳಿನೊಳಗೆ ಹಲವು ದಶಕಗಳಿಂದ ಗುಂಡೊಂದು ಪತ್ತೆಯಾಗಿದ್ದು ಇದರ ಅರಿವೇ ಅವರಿಗೆ ಇರಲಿಲ್ಲ. ತನಗೆ ಈ ವಿಚಾರ ತಿಳಿಯದೆಯೆ ಮಹಿಳೆ ಬದುಕುತ್ತಿದ್ದರು. ರೋಗಿಯನ್ನು ಹುನಾನ್ ಪ್ರಾಂತ್ಯದ 67 ವರ್ಷ ವಯಸ್ಸಿನ ಶ್ರೀಮತಿ ಝಾವೋ ಎಂದು ಗುರುತಿಸಲಾಗಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದ್ದು ಎಲ್ಲರನ್ನು ಅಚ್ಚರಿ ಪಡಿಸಿದೆ.
ಮಹಿಳೆಗೆ ಇತ್ತೀಚೆಗೆ ತಲೆನೋವು ಬಂದ ಕಾರಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಸ್ಕ್ಯಾನ್ ಮಾಡಿದಾಗ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಅವರ ಮೆದುಳಿನಲ್ಲಿ ವಸ್ತುವೊಂದು ಗೋಚರಿಸುವಂತೆ ಕಂಡಾಗ ವೈದ್ಯರು ಸೂಕ್ಷ್ಮ ವಾಗಿ ಪರಿಶೀಲನೆ ಮಾಡಿದ್ದಾರೆ. ಆಗ ತಲೆಯ ಒಳಗೆ ಬಂದೂಕಿನ ಗುಂಡು ಇರುವುದು ತಿಳಿದು ಬಂದಿದೆ.
Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಈ ಬಗ್ಗೆ ಮಹಿಳೆ ನೆನಪಿಸಿದಾಗ ಬಾಲ್ಯದಲ್ಲಿ ಆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಅವರು ಸಣ್ಣ ವಯಸ್ಸಿನಲ್ಲಿ ಆಟ ಆಡುತ್ತಿದ್ದಾಗ ತಲೆಗೆ ಕಲ್ಲುತಾಗಿದಂತೆ ಅನುಭವ ಆಗಿತ್ತು. ಆದರೆ ಆಗ ರಕ್ತ ಬಂದರೂ ಅವರು ಗಾಯಕಷ್ಟೇ ಚಿಕಿತ್ಸೆ ಪಡೆದು ಸುಮ್ಮನಾಗಿದ್ದರು. ಆದರೆ ಅಂದು ಅವರ ಮೆದುಳಿಗೆ ಗುಂಡು ಸೇರಿಕೊಂಡಿತ್ತು. ಮೆದುಳು ಸೇರಿದ ಗುಂಡು, ಸುಮಾರು 60 ವರ್ಷಗಳವರೆಗೆ ಒಂದೇ ಸ್ಥಳದಲ್ಲಿತ್ತು.
ಈ ಬುಲೆಟ್ ಮೆದುಳಿನ ಹಾನಿಯಲ್ಲದ ಪ್ರದೇಶದಲ್ಲಿ ಸಿಲುಕಿ ಕೊಂಡಿರುವುದರಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ. ಮೆದುಳಿನ ಕೋಶಗಳು ಆ ಗುಂಡಿನ ಸುತ್ತಲೂ ಹೊಂದಿಕೆಯಾಗಿತ್ತು. ಗುಂಡು ಮೆದುಳಿನ ಸೂಕ್ಷ್ಮ ಭಾಗದಲ್ಲಿ ಇದ್ದು ಅದನ್ನು ಹೊರತೆಗೆಯುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಮೆದುಳಿನ ಇತರ ಭಾಗಗಳಿಗೂ ಹಾನಿಯಾಗಬಹುದು ಎಂದು ವೈದ್ಯರು ಸೂಚಿಸಿದ್ದಾರೆ.