ಗೆಲುವಿನ ಹಳಿ ಏರಲು ಚೆನ್ನೈ ತಂಡದಲ್ಲಿ 3 ಬದಲಾವಣೆ ಅಗತ್ಯ
IPL 2026: ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ ಕೊನೆಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ವರದಿಯೊಂದು ತಿಳಿಸಿದೆ. ಮೀನಖಂಡದ ಉಳುಕಿಗೆ ಒಳಗಾಗಿರುವ ಧೋನಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. 44 ವರ್ಷದ ಮಾಜಿ ನಾಯಕ ಸಿ ಎಸ್ ಕೆ ಯ ಆರು ಪಂದ್ಯಗಳನ್ನು ಕಳೆದುಕೊಳ್ಳಬಹುದು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.
Chennai Super Kings -
ಚೆನ್ನೈ, ಮಾ.31: ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯ ಸೋಲು ಕಂಡ 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ತನ್ನ ಮುಂದಿನ(IPL 2026) ಪಂದ್ಯವನ್ನು ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಆಡಲಿದ್ದಾರೆ. ಅದಕ್ಕೂ ಮುನ್ನ, ತಂಡವು ಋತುವಿನ ಮೊದಲ ಗೆಲುವು ದಾಖಲಿಸಲು ತನ್ನ ಆಡುವ ಬಳಗದಲ್ಲಿ ಮಹತ್ವದ ಮೂರು ಬದಲಾವಣೆ ಮಾಡುವ ಅಗತ್ಯವಿದೆ.
ಕಳೆದ ಆವೃತ್ತಿಯಂತೆ ಈ ಬಾರಿಯೂ ಚೆನ್ನೈ ತಂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದೆ. ಹೀಗಾಗಿ ತಂಡ ಗೆಲುವಿನ ಹಳಿ ಏರಲು ಕೆಲವು ಬದಲಾವಣೆ ಮಾಡಲೇಬೇಕಾದ ಅನಿವಾರ್ಯವಿದೆ.
ಉರ್ವಿಲ್ ಪಟೇಲ್
ಕಳೆದ ವರ್ಷ ಉರ್ವಿಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳಲ್ಲಿ 212.50 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 68 ರನ್ ಗಳಿಸಿದ್ದರು. ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಘಟಕವು ಶೋಚನೀಯವಾಗಿ ವಿಫಲವಾದ ಕಾರಣ, ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಪರಿಗಣಿಸಬಹುದು. ರಾಜಸ್ಥಾನ ವಿರುದ್ಧ ವೈಫಲ್ಯ ಕಂಡ ಸರ್ಫರಾಜ್ ಖಾನ್ ಅವರ ಬದಲಿಗೆ ಮುಂದಿನ ಪಂದ್ಯದಲ್ಲಿ ಉರ್ವಿಲ್ ಪಟೇಲ್‌ಗೆ ಅವಕಾಶ ನೀಡಬಹುದು.
ಅಕೀಲ್ ಹೊಸೈನ್
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ನೂರ್ ಅಹ್ಮದ್ ಎರಡು ಓವರ್‌ಗಳಲ್ಲಿ 24 ರನ್‌ಗಳನ್ನು ಬಿಟ್ಟುಕೊಟ್ಟರು. ಇದನ್ನು ಗಮನದಲ್ಲಿಟ್ಟುಕೊಂಡು, ತಂಡದ ಆಡಳಿತ ಮಂಡಳಿಯು ಅಕೀಲ್ ಹೊಸೇನ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ಪವರ್‌ಪ್ಲೇನಲ್ಲಿಯೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಅವರು ತಂಡಕ್ಕೆ ನೆರವಾಗಬಲ್ಲರು.
PBKS vs GT: ಪಂಜಾಬ್ ಕಿಂಗ್ಸ್ ಪರ ಪದಾರ್ಪಣೆ ಮಾಡಿದ ಅಶೋಕ್ ಶರ್ಮಾ ಯಾರು?
ಡೆವಾಲ್ಡ್ ಬ್ರೇವಿಸ್
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಪಾರ್ಶ್ವ ನೋವಿನಿಂದಾಗಿ ರಾಜಸ್ಥಾನ್ ಪಂದ್ಯದಿಂದ ಹೊರಗುಳಿದಿದ್ದರು. ಮುಂದಿನ ಪಂದ್ಯಕ್ಕೆ ಅವರು ಚೇತರಿಸಿಕೊಂಡರೆ ಆಡುವ ಹನ್ನೊಂದರಲ್ಲಿ ಅವರಿಗೆ ಸ್ಥಾನ ನೀಡಿದರೆ ಉತ್ತಮ. ಕೆಲ ಕ್ರಮಾಂಕದಲ್ಲಿ ಅವರು ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಪೂರ್ಣ ಪ್ರಮಾಣದ ಆಟಗಾರನಾಗಿ ಆಡದಿದ್ದರೂ ಇಂಪ್ಯಾಕ್ಟ್ ಆಗಿ ಅವರನ್ನು ಬಳಸಿಕೊಳ್ಳಬಹುದು.
ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ ಕೊನೆಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ವರದಿಯೊಂದು ತಿಳಿಸಿದೆ. ಮೀನಖಂಡದ ಉಳುಕಿಗೆ ಒಳಗಾಗಿರುವ ಧೋನಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. 44 ವರ್ಷದ ಮಾಜಿ ನಾಯಕ ಸಿ ಎಸ್ ಕೆ ಯ ಆರು ಪಂದ್ಯಗಳನ್ನು ಕಳೆದುಕೊಳ್ಳಬಹುದು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.