ಕಮ್ಮಿನ್ಸ್ ಅಲಭ್ಯ ಸಾಧ್ಯತೆ; ಸನ್ ರೈಸರ್ಸ್‌ಗೆ ಇಶಾನ್ ಕಿಶನ್ ನಾಯಕ
IPL 2026: ಕಿಶನ್ ಹೈದರಾಬಾದ್ ತಂಡಕ್ಕೆ ಅಲ್ಪಾವಧಿ ನಾಯಕನಾಗಿ ಸೂಕ್ತ ಆಯ್ಕೆಯಾಗಬಹುದು. ಇತ್ತೀಚೆಗೆ ಜಾರ್ಖಂಡ್ ತಂಡವನ್ನು ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಗೆ ಕೊಂಡೊಯ್ದರು. ಜೊತೆಗೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು.
Ishan Kishan likely to lead SRH -
ಹೈದರಾಬಾದ್, ಮಾ.16: ಮುಂಬರುವ ಐಪಿಎಲ್ 2026ರ(IPL 2026) ಆವೃತ್ತಿಯಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ತಂಡದ ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಹೈದರಾಬಾದ್ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸೊಂಟದ ಮತ್ತು ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಕಮ್ಮಿನ್ಸ್ ಯಾವಾಗ ತಂಡವನ್ನು ಸೇರುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಹೀಗಾಗಿ ಅವರ ಅನುಪಸ್ಥಿತಿ ಎದುರಾದರೆ ಆಗ ಹಂಗಾಮಿಯಾಗಿ ಇಶಾನ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಆಶಸ್ ಸರಣಿಗೂ ಮುನ್ನ ಕಮ್ಮಿನ್ಸ್ ಗಂಭೀರ ಗಾಯಕ್ಕೆ ತುತ್ತಾದರು. ಆ ಸರಣಿಯ ಸಂಪೂರ್ಣ ಪಂದ್ಯಕ್ಕೂ ಅವರು ಗೈರುಹಾಜರಾಗುವ ನಿರೀಕ್ಷೆಯಿತ್ತು, ಆದರೆ ಒಂದು ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಮತ್ತೆ ಆಟದಿಂದ ಹೊರಗುಳಿದರು.ಜತೆಗೆ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು.
ಕಿಶನ್ ಹೈದರಾಬಾದ್ ತಂಡಕ್ಕೆ ಅಲ್ಪಾವಧಿ ನಾಯಕನಾಗಿ ಸೂಕ್ತ ಆಯ್ಕೆಯಾಗಬಹುದು. ಇತ್ತೀಚೆಗೆ ಜಾರ್ಖಂಡ್ ತಂಡವನ್ನು ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಗೆ ಕೊಂಡೊಯ್ದರು. ಜೊತೆಗೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು. 197.33 ರ ಸ್ಟ್ರೈಕ್ ರೇಟ್‌ನಲ್ಲಿ 517 ರನ್ ಬಾರಿಸಿದ್ದರು. ಟಿ20 ವಿಶ್ವಕಪ್‌ನಲ್ಲಿಯೂ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅಭಿಷೇಕ್ ಶರ್ಮಾ-ಟ್ರಾವಿಸ್ ಹೆಡ್ ಆರಂಭಿಕ ಜೋಡಿಯಾದರೆ ಇಶಾನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ.
ಈ ಬಾರಿಯೂ ನಡೆಯಲಿದೆ 'ಆರ್‌ಸಿಬಿ ಅನ್‌ಬಾಕ್ಸ್' ಕಾರ್ಯಕ್ರಮ
ಹೈದರಾಬಾದ್ ತಂಡ
ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಇಶಾನ್ ಕಿಶನ್, ಹರ್ಷಲ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಜ್ಯಾಕ್ ಎಡ್ವರ್ಡ್ಸ್, ಸಲೀಲ್ ಅರೋರಾ, ಎಶನ್ ಮಾಲಿಂಗ, ಬ್ರೈಡನ್ ಕಾರ್ಸೆ, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ಶಿವಂ ಮಾವಿ, ಜೀಶನ್ ಅನ್ಸಾರಿ, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಶಿವಂಗ್ ಕುಮಾರ್, ಕ್ರೇನ್ಸ್ ಫುಲೆತ್ರಾ, ಅನಿಕೇತ್ ವರ್ಮಾ, ಸಾಕಿಬ್ ಹುಸೇನ್, ರವಿಚಂದ್ರನ್ ಸ್ಮರನ್, ಪ್ರಫುಲ್ ಹಿಂಗೆ, ಹರ್ಷ ದುಬೆ.