ಅಗ್ರಸ್ಥಾನ ಉಳಿಸಿಕೊಂಡ ಪಂಜಾಬ್, ಮೂರಕ್ಕೇರಿದ ಸನ್‌ರೈಸಸರ್ಸ್
IPL 2026 Points Table: ಪಂಜಾಬ್ ತಂಡ ಪ್ಲೇಆಫ್ ಪ್ರವೇಶಿಸಲು ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಆರ್‌ಸಿಬಿ ಕೂಡ ಪ್ಲೇ ಆಪ್ ಸನಿಹದಲ್ಲಿದೆ. 16 ಅಂಕಗಳನ್ನು ತಲುಪಲು ಅವರಿಗೆ ಉಳಿದ 7 ಪಂದ್ಯಗಳಲ್ಲಿ 3 ಗೆಲುವುಗಳು ಬೇಕಾಗುತ್ತವೆ.
ಅಗ್ರಸ್ಥಾನ ಉಳಿಸಿಕೊಂಡ ಪಂಜಾಬ್, ಮೂರಕ್ಕೇರಿದ ಸನ್‌ರೈಸಸರ್ಸ್ -
ನವದೆಹಲಿ, ಎ.26: ಪಂಜಾಬ್ ಕಿಂಗ್ಸ್(Punjab Kings) ತಂಡವು ಟಿ20ಯಲ್ಲಿ ದಾಖಲೆಯ 265 ರನ್ ಚೇಸಿಂಗ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸುವ ಮೂಲಕ ಅಂಕ(IPL 2026 Points Table)ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜತೆಗೆ ಪ್ಲೇ ಆಫ್ ಸನಿಹಕ್ಕೆ ಬಂದು ನಿಂತಿದೆ. ಪಂಜಾಬ್ ಆರು ಗೆಲುವುಗಳೊಂದಿಗೆ 13 ಅಂಕಗಳನ್ನು ಹೊಂದಿದೆ. ಸೋತ ಡೆಲ್ಲಿ ಕ್ಯಾಪಿಟಲ್ಸ್ ಈಗ ಮೂರು ಗೆಲುವು ಮತ್ತು ಆರು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
ಜೈಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರೆಂಜ್ ಆರ್ಮಿ ಮೂರನೇ ಸ್ಥಾನಕ್ಕೆ ತಲುಪಿದರೆ, ರಾಯಲ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಎರಡೂ ತಂಡಗಳು ತಲಾ 10 ಅಂಕಗಳನ್ನು ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಹೈದರಾಬಾದ್ ಮುಂದಿರುವ ಕಾರಣ ಮೂರನೇ ಸ್ಥಾನ ಪಡೆಯಿತು. ಹಾಲಿ ಚಾಂಪಿಯನ್ ಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ.
ತನ್ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರೂ ಸೂರ್ಯವಂಶಿಯ ಅಭಿಮಾನಿ ಎಂದ ಪ್ಯಾಟ್ ಕಮಿನ್ಸ್
ಪಂಜಾಬ್ ತಂಡ ಪ್ಲೇಆಫ್ ಪ್ರವೇಶಿಸಲು ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಆರ್‌ಸಿಬಿ ಕೂಡ ಪ್ಲೇ ಆಪ್ ಸನಿಹದಲ್ಲಿದೆ. 16 ಅಂಕಗಳನ್ನು ತಲುಪಲು ಅವರಿಗೆ ಉಳಿದ 7 ಪಂದ್ಯಗಳಲ್ಲಿ 3 ಗೆಲುವುಗಳು ಬೇಕಾಗುತ್ತವೆ. ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ರೇಸ್‌ನಲ್ಲಿ ಸದ್ಯಕ್ಕೆ ಸುರಕ್ಷಿತವಾಗಿದೆ. 6 ಪಂದ್ಯಗಳಲ್ಲಿ 3 ಗೆಲುವುಗಳು ಬೇಕಾಗಿವೆ. ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇನ್ನು 6 ಪಂದ್ಯಗಳು ಬಾಕಿ ಇವೆ. 16 ಅಂಕಗಳನ್ನು ತಲುಪಲು ಅವರಿಗೆ 3 ಗೆಲುವುಗಳು ಬೇಕಾಗಿವೆ.
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಅನ್ಶುಲ್ ಕಾಂಬೋಜ್ ಪ್ರಸ್ತುತ 7 ಪಂದ್ಯಗಳಲ್ಲಿ 14 ವಿಕೆಟ್‌ಗಳೊಂದಿಗೆ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅತ್ಯಧಿಕ ರನ್ ಕಲೆಹಾಕಿದ ಅಭಿಷೇಕ್ ಶರ್ಮ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಅವರು 380 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆ.ಎಲ್ ರಾಹುಲ್(357) ಎರಡನೇ ಸ್ಥಾನದಲ್ಲಿದ್ದಾರೆ.