ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ಕಾಂತಾರಾ ಮೋಡಿ; ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್ ವೈರಲ್‌

Manchester City FC: ರಿಷಬ್ ಶೆಟ್ಟಿ ಡೋಲು ಹಿಡಿದು ದೇವಾರಾಧನೆ, ಕುಣಿತದ ಪೋಸ್ಟರ್ ಬಳಸಿಕೊಂಡು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡ, ಏರ್ಲಿಂಗ್ ಹಾಲೆಂಡ್ ಫೋಟೋವನ್ನು ಪೋಸ್ಟ್ ಮಾಡಿದೆ. ಏರ್ಲಿಂಗ್ ಹಾಲೆಂಡ್ ಇತ್ತೀಚೆಗಷ್ಟೇ ಮ್ಯಾಂಚೆಸ್ಟರ್ ಸಿಟಿ ತಂಡ ಸೇರಿಕೊಂಡಿದ್ದರು. ಹಾಲೆಂಡ್‌ಗೆ ಮ್ಯಾಂಚೆಸ್ಟರ್ ಸಿಟಿ ಕಾಂತಾರಾ ಪೋಸ್ಟರ್ ಮೂಲಕ ಸ್ವಾಗತ ನೀಡಿದೆ.

ಕಾಂತಾರಾ ಮೋಡಿ; ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್ ವೈರಲ್‌

-

Abhilash BC Abhilash BC Oct 8, 2025 8:30 AM

ಲಂಡನ್: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ 'ಕಾಂತಾರಾ ಚಾಪ್ಟರ್ 1'(Kantara Chapter 1) ಸಿನಿಮಾ ದೇಶ ವಿದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ದಿನವೇ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಈ ಸಿನೆಮಾ ಚಿತ್ರಮಂದಿರದಲ್ಲಿ ಭಾರೀ ಪ್ರದರ್ಶನ ಕಾಣುತ್ತಿದೆ. ಇದೀಗ ವಿಶ್ವದ ಅತ್ಯಂತ ಪ್ರಸಿದ್ದ ಫುಟ್ಬಾಲ್ ಲೀಗ್ ಪ್ರೀಮಿಯರ್ ಲೀಗ್(Manchester City FC) ಟೂರ್ನಿಯಲ್ಲೂ ಕಾಂತಾರಾದ ಹವಾ ಕಂಡುಬಂದಿದೆ.

ಹೌದು, ಪ್ರತಿಷ್ಠಿತ ಮ್ಯಾಂಚೆಸ್ಟರ್ ಸಿಟಿ ತಂಡ, ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕಾಂತಾರಾ ರೀತಿಯ ಪೋಸ್ಟರ್ ಹಾಕಿದೆ. ತಂಡದ ಪ್ರಮುಖ ಸ್ಟೈಕರ್ ಏರ್ಲಿಂಗ್ ಹಾಲೆಂಡ್ ಪೋಸ್ಟರ್ ರೆಡಿ ಮಾಡಿದೆ. ಒಂದು ದಂಕತೆ, ಇನ್ನು ರಚನೆಯಾಗುತ್ತದೆ ಎಂದು ಬರೆಯಲಾಗಿದೆ.

ಇದನ್ನೂ ಓದಿ Kantara: Chapter 1: ಕಾಂತಾರ-1 ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ; ರಿಷಬ್‌ ಕೊಂಡಾಡಿದ ಎಚ್‌ಡಿಕೆ

ರಿಷಬ್ ಶೆಟ್ಟಿ ಡೋಲು ಹಿಡಿದು ದೇವಾರಾಧನೆ, ಕುಣಿತದ ಪೋಸ್ಟರ್ ಬಳಸಿಕೊಂಡು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡ, ಏರ್ಲಿಂಗ್ ಹಾಲೆಂಡ್ ಫೋಟೋವನ್ನು ಪೋಸ್ಟ್ ಮಾಡಿದೆ. ಏರ್ಲಿಂಗ್ ಹಾಲೆಂಡ್ ಇತ್ತೀಚೆಗಷ್ಟೇ ಮ್ಯಾಂಚೆಸ್ಟರ್ ಸಿಟಿ ತಂಡ ಸೇರಿಕೊಂಡಿದ್ದರು. ಹಾಲೆಂಡ್‌ಗೆ ಮ್ಯಾಂಚೆಸ್ಟರ್ ಸಿಟಿ ಕಾಂತಾರಾ ಪೋಸ್ಟರ್ ಮೂಲಕ ಸ್ವಾಗತ ನೀಡಿದೆ.

ರಿಷಬ್ ಪೋಸ್ಟರ್ ರೀತಿಯಲ್ಲೇ ಮ್ಯಾಂಚೆಸ್ಟರ್ ಸಿಟಿಯ ಪೋಸ್ಟರ್ ಇಲ್ಲಿದೆ

ಹಾಲೆಂಡ್, ದಿ ಲೆಜೆಂಡ್ ಎಂದು ಬರೆದಿರುವ ಈ ಪೋಸ್ಟರ್‌ನಲ್ಲಿ ಹಾಲೆಂಡ್ ಅವರ ಗೋಲು ಸೇರಿದಂತೆ ಸಾಧನೆಯನ್ನು ಹೇಳಲಾಗಿದೆ. ಮ್ಯಾಂಚೆಸ್ಟರ್ ಸಿಟಿ ಪೋಸ್ಟ್ ಮಾಡಿರುವ ಈ ಕಾಂತಾರಾ ಶೈಲಿಯ ಪೋಸ್ಟರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮ್ಯಾಂಚೆಸ್ಟರ್ ಹೊಸ ಪೋಸ್ಟರ್ ಹಾಗೂ ಪ್ರದರ್ಶನ ಕುರಿತು ಅಭಿಮಾನಿಗಳು ಖುಷಿಯಾಗಿದ್ದಾರೆ.