ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಕ್ರಿಕೆಟಿಂಗ್ ಸ್ಫೂರ್ತಿಗೆ ಶಕ್ತಿಯುತ ಗೌರವದಿಂದ ಹೊಸ ಜಾಹೀರಾತು ಅಭಿಯಾನಕ್ಕೆ ಚಾಲನೆ

ಎ.ಆರ್. ರಹಮಾನ್ ಅವರ ಗೀತೆ ಮಾ ತುಜೇ ಸಲಾಂ ಹೊಂದಿರುವ ಮತ್ತು ಚಿತ್ರ ನಿರ್ದೇಶಕ ಅಭಿನಯ್ ದೇವ್ ನಿರ್ದೇಶಿಸಿರುವ ಈ ಚಲನಚಿತ್ರವು ಈ ನಾಲ್ಕು ಕ್ರಿಕೆಟ್ ಪಟುಗಳ ಬಾಲ್ಯ ಮತ್ತು ಅವರ ಕನಸುಗಳು ನನಸಾಗಿಸಲು ಅವರ ಕುಟುಂಬಗಳು ನೀಡಿದ ಅಸಾಧಾರಣ ಬೆಂಬಲ, ಪ್ರತಿ ಪ್ರಯತ್ನದಲ್ಲೂ ರಾಷ್ಟ್ರದ ಹೆಮ್ಮೆಯನ್ನು ಮುಂಚೂಣಿಯಲ್ಲಿರಿಸುವುದನ್ನು ತೋರುತ್ತದೆ.

ಭಾರತದ ಕ್ರಿಕೆಟಿಂಗ್ ಸ್ಫೂರ್ತಿಗೆ ಹೊಸ ಜಾಹೀರಾತು ಅಭಿಯಾನಕ್ಕೆ ಚಾಲನೆ

-

Ashok Nayak
Ashok Nayak Feb 6, 2026 8:16 PM

ಗುರುಗ್ರಾಮ್: ಭಾರತದ ಕ್ರಿಕೆಟ್ ತಂಡದ ಮುಂಚೂಣಿಯ ಪ್ರಾಯೋಜಕ ಅಪೋಲೋ ಟೈರ್ಸ್ ಇಂದು ತನ್ನ ಹೊಸ ಬ್ರಾಂಡ್ ಅಭಿಯಾನ, ಪ್ರತಿ ಪ್ರಯಾಣಕ್ಕೂ ಒಂದು ಅವಕಾಶವಿದೆ(ಹರ್ ಸಫರ್ ಮೇ ದಮ್ ಹೈ)’ ಪ್ರಾರಂಭಿಸಿದೆ. ಇದರಲ್ಲ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಟೀಂ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶುಭ್ ಮನ್ ಗಿಲ್ ಮತ್ತು ಅರ್ಷದೀಪ್ ಸಿಂಗ್ ಅವರು ಟೀಂ ಇಂಡಿಯಾ ಜೆರ್ಸೀಗಳಲ್ಲಿ ಕಾಣಿಸಿಕೊಳ್ಳಲಿದ್ದು ಈ ಅಭಿಯಾನವು ಅತ್ಯಂತ ಭಾವನಾತ್ಮಕ ಬ್ರಾಂಡ್ ಚಲನಚಿತ್ರವಾಗಿದ್ದು ಅಪೋಲೋದ ತತ್ವ ಗಳೊಂದಿಗೆ ಭಾರತೀಯ ಕ್ರಿಕೆಟ್ ನ ಅನಂತ ಸ್ಫೂರ್ತಿ ಮತ್ತು ಸಾಮಾನ್ಯತೆಯನ್ನು ಸಂಭ್ರಮಿಸುತ್ತದೆ.

ಎ.ಆರ್. ರಹಮಾನ್ ಅವರ ಪ್ರಖ್ಯಾತ ಗೀತೆ ಮಾ ತುಜೇ ಸಲಾಂ ಹೊಂದಿರುವ ಮತ್ತು ಖ್ಯಾತ ಚಿತ್ರ ನಿರ್ದೇಶಕ ಅಭಿನಯ್ ದೇವ್ ನಿರ್ದೇಶಿಸಿರುವ ಈ ಚಲನಚಿತ್ರವು ಈ ನಾಲ್ಕು ಕ್ರಿಕೆಟ್ ಪಟುಗಳ ಬಾಲ್ಯ ಮತ್ತು ಅವರ ಕನಸುಗಳು ನನಸಾಗಿಸಲು ಅವರ ಕುಟುಂಬಗಳು ನೀಡಿದ ಅಸಾಧಾರಣ ಬೆಂಬಲ, ಪ್ರತಿ ಪ್ರಯತ್ನದಲ್ಲೂ ರಾಷ್ಟ್ರದ ಹೆಮ್ಮೆಯನ್ನು ಮುಂಚೂಣಿಯಲ್ಲಿರಿಸುವುದನ್ನು ತೋರುತ್ತದೆ.

ಇದು ಭಾರತವನ್ನು ಪ್ರತಿನಿಧಿಸುವ ಕನಸನ್ನು ಮಾತ್ರವಲ್ಲದೆ ಆ ಗೌರವ ಪಡೆಯಲು ಎತ್ತಿ ಹಿಡಿಯಲು ಮತ್ತು ಅದನ್ನು ಉಳಿಸಿಕೊಳ್ಳಲು ಮಾನದಂಡಗಳು, ಶಿಸ್ತು ಮತ್ತು ಸದೃಢತೆಯನ್ನೂ ಬಿಂಬಿಸುತ್ತವೆ. ಈ ಜಾಹೀರಾತು ಚಿತ್ರವು ಅವರು ಮಕ್ಕಳಿಂದ ಭಾರತದ ಜೆರ್ಸೀ ಧರಿಸಲು ದಿಟ್ಟ ಕನಸುಗಳನ್ನು ನನಸಾಗಿಸಿಕೊಳ್ಳುವ ಪರಿವರ್ತನೆಯನ್ನು ತೋರುವ ಮೂಲಕ ವಿಶ್ವಮಟ್ಟದ ವೇದಿಕೆಯಲ್ಲಿ ಬರೀ ಪ್ರತಿಭೆಯಿಂದ ಮಾತ್ರವಲ್ಲ, ಶ್ರೇಷ್ಠರಾಗಲು ಜೀವಿತಾವಧಿ ಬದ್ಧತೆಯನ್ನು ಹೊಂದಿರುವ ಕೋಟ್ಯಂತರ ಮಂದಿಯ ಹೃದಯಗಳ ಭರವಸೆಯನ್ನು ಬಿಂಬಿಸುತ್ತದೆ.

ಇದನ್ನೂ ಓದಿ: Apollo Tyres: ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಸ್ಪಾನ್ಸರ್‌ ಘೋಷಿಸಿದ ಬಿಸಿಸಿಐ!

ಕ್ರಿಕೆಟ್ ಪಟು ಮತ್ತು ಅಪೋಲೋ ಟೈರ್ಸ್ ಬ್ರಾಂಡ್ ರಾಯಭಾರಿ ಸಚಿನ್ ತೆಂಡೂಲ್ಕರ್ ಅವರ ಉಪಸ್ಥಿತಿ ಮತ್ತು ನಿರೂಪಣೆಯನ್ನು ಸಮಾನಾಂತರವಾಗಿ ನಿರೂಪಿಸುತ್ತದೆ. ತಲೆಮಾರುಗಳ ಕ್ರಿಕೆಟಿಗರಿಗೆ ಮತ್ತು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾದ ಅವರು ಭಾರತೀಯ ಕ್ರಿಕೆಟ್ ಅನ್ನು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಅನಂತ ಪರಂಪರೆ, ಮೌಲ್ಯಗಳು ಮತ್ತು ಮಾನದಂಡಗಳನ್ನು ಬಿಂಬಿಸುತ್ತಾರೆ.

“ಈ ಅಭಿಯಾನವು ಅಪೋಲೋ ಟೈರ್ಸ್ ಹೊಂದಿರುವ ಶ್ರೇಷ್ಠತೆಯನ್ನು ಸದೃಢತೆ, ಶಿಸ್ತು ಮತ್ತು ಸ್ಥಿರತೆಯಿಂದ ನಿರ್ಮಿಸಲಾಗುತ್ತದೆ ಎಂಬ ಕೇಂದ್ರ ನಂಬಿಕೆಯನ್ನು ಬಿಂಬಿಸುತ್ತದೆ” ಎಂದು ಅಪೋಲೋ ಟೈರ್ಸ್ ಲಿಮಿಟೆಡ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೀರಜ್ ಕನ್ವರ್ ಹೇಳಿದರು.

“ಹರ್ ಸಫರ್ ಮೆ ದಮ್ ಹೈ ಭಾರತೀಯ ಸ್ಫೂರ್ತಿಗೆ ಮತ್ತು ನೀವು ಮಾಡುವ ಕೆಲಸದಲ್ಲಿ ಶ್ರೇಷ್ಠ ರಾಗಲು ಎಣೆಯಿರದ ಬದ್ಧತೆಗೆ ನಮ್ಮ ಗೌರವವಾಗಿದೆ” ಎಂದರು. ಸೃಜನಶೀಲ ದೃಷ್ಟಿಕೋನವನ್ನು ಹಂಚಿಕೊಂಡ ಈ ಜಾಹೀರಾತು ಚಿತ್ರವನ್ನು ರೂಪಿಸಿದ ಕಥೆ ಹಾಗೂ ಚಿತ್ರಕಥೆ ಬರೆದ ಶ್ರೀಮತಿ ಸಿಮ್ರಾನ್ ಕನ್ವರ್, “ಪ್ರತಿ ಪ್ರಯಾಣಕ್ಕೂ ಒಂದು ಅವಕಾಶವಿದೆ (ಹರ್ ಸಫರ್ ಮೇ ದಮ್ ಹೈ) ಪ್ರಯಾಣವನ್ನು ಪ್ರಾರಂಭಿಸುವ ಕುರಿತಾಗಿ ಅಲ್ಲ.

ಇದು ಶ್ರೇಷ್ಠತೆಗೆ ಸತತವಾದ ಪ್ರಯತ್ನದ ಕುರಿತಾಗಿದೆ. ಇದು ವಿಶ್ವದ ಶ್ರೇಷ್ಠ ಕ್ರೀಡಾಪಟುಗಳನ್ನು ಒಂದು ಚಲನಚಿತ್ರಕ್ಕೆ ತರುವ ನಮ್ಮ ಕ್ರಿಕೆಟ್ ಗೀತೆ ಮಾ ತುಜೇ ಸಲಾಂ ಹಿನ್ನೆಲೆಯಲ್ಲಿರುವ ಏಕೀಯ ಜಾಹೀರಾತು ಚಿತ್ರವಾಗಿರಬಹುದು. ಒಟ್ಟಿಗೆ ಈ ಅಂಶಗಳು ಈ ಚಲನಚಿತ್ರವನ್ನು ನಿಜಕ್ಕೂ ವಿಶಿಷ್ಟವಾಗಿಸುತ್ತಿದ್ದು ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆಯನ್ನು ವ್ಯಾಖ್ಯಾನಿಸುವ ಸ್ಫೂರ್ತಿ, ಹೆಮ್ಮೆ ಮತ್ತು ಮಾನದಂಡಗಳನ್ನು ಸೆರೆ ಹಿಡಿಯುತ್ತದೆ” ಎಂದರು.

ಈ ಜಾಹೀರಾತು ಚಿತ್ರ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಕಾರ್ಯ ದರ್ಶಿ ದೇವಜಿತ್ ಸೈಕಿಯಾ, “ಈ ಜಾಹೀರಾತು ಚಿತ್ರವು ಭಾರತೀಯ ಕ್ರಿಕೆಟ್ ಸ್ಫೂರ್ತಿಯನ್ನು ವಿಶ್ವಾಸಾರ್ಹವಾಗಿ ಸೆರೆ ಹಿಸಿಯುತ್ತದೆ. ಇದು ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸು ಅಗತ್ಯ ವಾದ ಕಠಿಣ ಪರಿಶ್ರಮ, ತ್ಯಾಗ ಮತ್ತು ಸಹಿಷ್ಣುತೆಯನ್ನು ಬಿಂಬಿಸುತ್ತದೆ. ಬಿಸಿಸಿಐ, ಪ್ರತಿಭೆಯನ್ನು ಪೋಷಿಸುವ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವ ಮತ್ತು ಬೇರುಮಟ್ಟದ ಮಹತ್ವಾಕಾಂಕ್ಷೆ ಯನ್ನು ವಿಶ್ವಮಟ್ಟದ ಪ್ರಭುತ್ವದ ಪ್ರಯಾಣ ಸಂಭ್ರಮಿಸುವ ಬ್ರಾಂಡ್ ಅಪೋಲೋ ಟೈರ್ಸ್ ಜೊತೆಯಲ್ಲಿ ಸಹಯೋಗಕ್ಕೆ ಹೆಮ್ಮೆ ಪಡುತ್ತದೆ” ಎಂದರು.

ಅಪೋಲೋ ಟೈರ್ಸ್ ಲಿ.ಯ ಗ್ರೂಪ್ ಹೆಡ್ ಮಾರ್ಕೆಟಿಂಗ್ ಉದ್ಯಾನ್ ಘಾಯ್, “ಈ ಅಭಿಯಾನವು ಅಪೋಲೋ ಟೈರ್ಸ್ ಬ್ರಾಂಡ್ ತತ್ವದ ಸದೃಢ ಉಚ್ಚಾರಣೆಯಾಗಿದ್ದು ತನ್ನ ಉತ್ಪನ್ನ ವ್ಯಾಪ್ತಿ ಯಲ್ಲು ಕಾರ್ಯಕ್ಷಮತೆ, ಸಹಿಷ್ಣುತೆ ಮತ್ತು ವಿಶ್ವಾಸಾರ್ಹತೆಯನ್ನು ಬಿಂಬಿಸುತ್ತದೆ. ಭಾರತದಿಂದ ವಿಶ್ವಕ್ಕೆ ಕ್ರಿಕೆಟ್ ಪ್ರಯಾಣದ ಸಮಾನಾಂತರತೆ ಪಡೆದ ಈ ಜಾಹೀರಾತು ಚಿತ್ರವು ಜಾಗತಿಕ ಬ್ರಾಂಡ್ ಆಗಿ ಅಪೋಲೋ ಟೈರ್ಸ್ ಸ್ವಂತ ವಿಕಾಸವನ್ನು ಬಿಂಬಿಸುವುದಲ್ಲದೆ ಗ್ರಾಹಕರೊಂದಿಗೆ ಅದರ ಭಾವನಾತ್ಮಕ ಸಂಪರ್ಕವನ್ನು ಸದೃಢಗೊಳಿಸುತ್ತದೆ” ಎಂದರು.