ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂಡೋನೇಷ್ಯಾ ಮಾಸ್ಟರ್ಸ್; ಸಿಂಧು, ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ ಪ್ರವೇಶ

Indonesia Masters 2026: ಸಿಂಧು ಮತ್ತು ಫೀ ಇದುವರೆಗೆ 13 ಬಾರಿ ಮುಖಾಮುಖಿಯಾಗಿದ್ದು, ಒಟ್ಟಾರೆ ದಾಖಲೆಯಲ್ಲಿ ಸಿಂಧು 7-6 ಅಂತರದಲ್ಲಿ ಸ್ವಲ್ಪ ಮುನ್ನಡೆಯಲ್ಲಿದ್ದಾರೆ. ಫೀ ವಿರುದ್ಧ ಭಾರತೀಯ ಆಟಗಾರ್ತಿ ಕೊನೆಯ ಬಾರಿಗೆ ಗೆಲುವು ಸಾಧಿಸಿದ್ದು 2019 ರಲ್ಲಿ ಮತ್ತು ಆ ದಾಖಲೆಯನ್ನು ಸುಧಾರಿಸಲು ಅವರು ಉತ್ಸುಕರಾಗಿದ್ದಾರೆ.

500ನೇ ಗೆಲುವು ಸಾಧಿಸಿ ವಿಶೇಷ ದಾಖಲೆ ಬರೆದ ಪಿ.ವಿ. ಸಿಂಧು

PV Sindhu -

Abhilash BC
Abhilash BC Jan 22, 2026 1:16 PM

ಜಕಾರ್ತ, ಜ.22: ಗುರುವಾರ ಇಲ್ಲಿ ನಡೆದ ತಮ್ಮ 16ನೇ ಸುತ್ತಿನ ಪಂದ್ಯಗಳಲ್ಲಿ ನೇರ ಗೇಮ್‌ಗಳ ಜಯ ಸಾಧಿಸಿದ ನಂತರ ಭಾರತೀಯ ಶಟ್ಲರ್‌ಗಳಾದ ಪಿ.ವಿ. ಸಿಂಧು(PV Sindhu) ಮತ್ತು ಲಕ್ಷ್ಯ ಸೇನ್(Lakshya Sen) ಇಂಡೋನೇಷ್ಯಾ ಮಾಸ್ಟರ್ಸ್‌ನ(Indonesia Masters 2026) ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಸಿಂಧು ಈ ಗೆಲುವಿನೊಂದಿಗೆ ದಾಖಲೆಯೊಂದನ್ನು ಬರೆದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು, 43 ನಿಮಿಷಗಳ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪರಿಚಿತ ಎದುರಾಳಿ ಡೆನ್ಮಾರ್ಕ್‌ನ ಲೈನ್ ಕ್ಜೆರ್‌ಫೆಲ್ಡ್ಟ್ ಅವರನ್ನು 21-19, 21-18 ಅಂತರದಲ್ಲಿ ಸೋಲಿಸಿದರು. ಇದುವರೆಗಿನ ಆರು ಮುಖಾಮುಖಿಗಳಲ್ಲಿ ಸಿಂಧು ಡೆನ್ಮಾರ್ಕ್‌ ಆಟಗಾರ್ತಿ ವಿರುದ್ಧ ಸಾಧಿಸಿದ ಐದನೇ ಗೆಲುವು ಇದಾಗಿದೆ.

ಇದೇ ವೇಳೆ ಸಿಂಧು ತಮ್ಮ ವೃತ್ತಿಜೀವನದಲ್ಲಿ 500 ಪಂದ್ಯಗಳ ಗೆಲುವುಗಳನ್ನು ಪೂರ್ಣಗೊಳಿಸಿದ ಆರನೇ ಮಹಿಳಾ ಸಿಂಗಲ್ಸ್ ಶಟ್ಲರ್ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಿಡಬ್ಲ್ಯೂಎಫ್ ಪ್ರವಾಸದಲ್ಲಿ, ಸಿಂಧು 456-227 ಗೆಲುವು-ಸೋಲಿನ ದಾಖಲೆಯನ್ನು ಹೊಂದಿದ್ದಾರೆ. ಸಿಂಧು ಮುಂದಿನ ಪಂದ್ಯದಲ್ಲಿ ಟೂರ್ನಮೆಂಟ್‌ನ ಅಗ್ರ ಶ್ರೇಯಾಂಕಿತ ಮತ್ತು ವಿಶ್ವದ 4 ನೇ ಶ್ರೇಯಾಂಕಿತ ಚೀನಾದ ಚೆನ್ ಯು ಫೀ ಅವರನ್ನು ಎದುರಿಸಲಿದ್ದಾರೆ.

ಟಿ-20ಯಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

ಸಿಂಧು ಮತ್ತು ಫೀ ಇದುವರೆಗೆ 13 ಬಾರಿ ಮುಖಾಮುಖಿಯಾಗಿದ್ದು, ಒಟ್ಟಾರೆ ದಾಖಲೆಯಲ್ಲಿ ಸಿಂಧು 7-6 ಅಂತರದಲ್ಲಿ ಸ್ವಲ್ಪ ಮುನ್ನಡೆಯಲ್ಲಿದ್ದಾರೆ. ಫೀ ವಿರುದ್ಧ ಭಾರತೀಯ ಆಟಗಾರ್ತಿ ಕೊನೆಯ ಬಾರಿಗೆ ಗೆಲುವು ಸಾಧಿಸಿದ್ದು 2019 ರಲ್ಲಿ ಮತ್ತು ಆ ದಾಖಲೆಯನ್ನು ಸುಧಾರಿಸಲು ಅವರು ಉತ್ಸುಕರಾಗಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ 7ನೇ ಶ್ರೇಯಾಂಕದ ಲಕ್ಷ್ಯ ಸೇನ್, ವಿಶ್ವದ 42ನೇ ಶ್ರೇಯಾಂಕಿತ ಹಾಂಗ್ ಕಾಂಗ್‌ನ ಜೇಸನ್ ಗುಣವಾನ್ ಅವರನ್ನು 21-10, 21-11 ಅಂತರದಲ್ಲಿ ಸೋಲಿಸಿದರು.‌ ಕಳೆದ ವಾರ ಇಂಡಿಯಾ ಓಪನ್‌ನಲ್ಲಿ ಲಕ್ಷ್ಯ ಸೇನ್‌ ಕೊನೆಯ-ಎಂಟರ ಸುತ್ತು ತಲುಪಿದ ಏಕೈಕ ಭಾರತೀಯ ಶಟ್ಲರ್ ಎನಿಸಿಕೊಂಡಿದ್ದರು. ಇದೇ ಫಾರ್ಮ್‌ ಮುಂದುವರಿಸಿರುವ ಅವರು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.