ಟಿ20ಯಲ್ಲಿ 9 ಸಾವಿರ ರನ್ ಪೂರೈಸಿದ ಸೂರ್ಯಕುಮಾರ್ ಯಾದವ್; ಈ ಸಾಧನೆಗೈದ 4ನೇ ಭಾರತೀಯ ಕ್ರಿಕೆಟಿಗ
Suryakumar Yadav: ಟಿ20ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಒಂದು ಡಜನ್‌ಗೂ ಹೆಚ್ಚು ತಂಡಗಳಿಗಾಗಿ 463 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 455 ಇನ್ನಿಂಗ್ಸ್‌ಗಳಲ್ಲಿ 14,562 ರನ್ ಗಳಿಸಿದ್ದಾರೆ.
Suryakumar Yadav -
ನಾಗ್ಪುರ, ಜ.22: ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20ಐ(India vs New Zealand 1st T20I) ಪಂದ್ಯದಲ್ಲಿ ಭಾರತ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) 22 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ನಂತರ ಟಿ20ಗಳಲ್ಲಿ 9000 ರನ್ ಗಳಿಸಿದ ನಾಲ್ಕನೇ ಭಾರತೀಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾದರು.
2026 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕನಾಗಲಿರುವ ಸೂರ್ಯ, 9000 ರನ್‌ಗಳ ಕ್ಲಬ್‌ಗೆ ಸೇರಲು ತಮ್ಮ 347 ನೇ ಟಿ20 ಪಂದ್ಯದಲ್ಲಿ 25 ರನ್‌ಗಳ ಅಗತ್ಯವಿತ್ತು. ಮತ್ತು ಭಾರತದ ಇನ್ನಿಂಗ್ಸ್‌ನ 10 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇಶ್ ಸೋಧಿ ಎಸೆತಕ್ಕೆ ಬೌಂಡರಿ ಬಾರಿಸುವ ಮೂಲಕ ಅವರು ಗುರಿಯನ್ನು ಸಾಧಿಸಿದರು.
ಕೊಹ್ಲಿ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಭಾರತ, ದೆಹಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ 414 ಪಂದ್ಯಗಳಲ್ಲಿ ಅವರು ಒಟ್ಟು 13,543 ರನ್ ಗಳಿಸಿದ್ದಾರೆ. ಮುಂಬೈ, ಭಾರತ, ಭಾರತ ಎ, ಮುಂಬೈ ಇಂಡಿಯನ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಪರ 463 ಪಂದ್ಯಗಳಲ್ಲಿ 12,248 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಅಭಿಷೇಕ್ ಶರ್ಮ ಸ್ಫೋಟಕ ಅರ್ಧ ಶತಕ; ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ಟಿ20ಗಳಲ್ಲಿ 9000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸ್ಟೈಲಿಶ್ ಎಡಗೈ ಬ್ಯಾಟ್ಸ್‌ಮನ್ 2007 ರಿಂದ 2024 ರವರೆಗೆ 334 ಟಿ20 ಪಂದ್ಯಗಳನ್ನು ಆಡಿ ಒಟ್ಟು 9797 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಸದ್ಯ 347* ಟಿ20 ಪಂದ್ಯಗಳ 321 ಇನ್ನಿಂಗ್ಸ್‌ಗಳಲ್ಲಿ 9007* ರನ್‌ಗಳನ್ನು ಗಳಿಸಿದ್ದಾರೆ.
ಟಿ20ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಒಂದು ಡಜನ್‌ಗೂ ಹೆಚ್ಚು ತಂಡಗಳಿಗಾಗಿ 463 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 455 ಇನ್ನಿಂಗ್ಸ್‌ಗಳಲ್ಲಿ 14,562 ರನ್ ಗಳಿಸಿದ್ದಾರೆ. ಅವರ ಮಾಜಿ ವೆಸ್ಟ್ ಇಂಡೀಸ್ ತಂಡದ ಸಹ ಆಟಗಾರ ಕೀರನ್ ಪೊಲಾರ್ಡ್ 735 ಟಿ20 ಪಂದ್ಯಗಳಲ್ಲಿ 14,482 ರನ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ 528 ಟಿ20 ಪಂದ್ಯಗಳಲ್ಲಿ 523 ಇನ್ನಿಂಗ್ಸ್‌ಗಳಲ್ಲಿ 14,449 ರನ್ ಗಳಿಸಿದ್ದಾರೆ.