ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಆರ್‌ಸಿಬಿ ಗೆದ್ದರೂ ಮೆರವಣಿಗೆ, ರ‍್ಯಾಲಿ ನಡೆಸಲು ಅವಕಾಶವಿಲ್ಲ

ಆರ್‌ಸಿಬಿಯ ಅಭಿಮಾನಿಗಳು ತಂಡ ಗೆದ್ದರೆ ಮೈದಾನಗಳು ಹಾಗೂ ಮಾಲ್‌ಗಳಲ್ಲಿ ವಿಜಯೋತ್ಸವ ಆಚರಣೆ, ರಸ್ತೆಗಳಲ್ಲಿ ಬೈಕ್‌, ಕಾರುಗಳಲ್ಲಿ ಮೆರವಣಿ ಮಾಡುವ ಸಾಧ್ಯತೆಯಿದೆ. ಹೀಗಾಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ. ಜತೆಗೆ ನಗರದ ಯಾವುದೇ ರಸ್ತೆಗಳಲ್ಲಿ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್‌ಸಿಬಿ ಗೆದ್ದರೂ ಮೆರವಣಿಗೆ, ರ‍್ಯಾಲಿ ನಡೆಸಲು ಅವಕಾಶವಿಲ್ಲ

Profile Abhilash BC Jun 3, 2025 8:04 AM

ಅಹಮದಾಬಾದ್‌: ಐಪಿಎಲ್‌ ಫೈನಲ್‌(IPL Final 2025) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಪಂಜಾಬ್‌ ಮತ್ತು ಆರ್‌ಸಿಬಿ(RCB vs PBKS) ಪ್ರಶಸ್ತಿಗಾಗಿ ಸೆಣಸಾಡಲಿದೆ. ಉಭಯ ತಂಡಗಳಿಗೂ ಹದಿನೆಂಟು ವರ್ಷಗಳಿಂದ ಅನುಭವಿಸಿರುವ ಹತಾಶೆಯನ್ನು ತೊಡೆದುಹಾಕಿ ಸಂಭ್ರಮಿಸುವ ಕಾಲ ಸಮೀಪಿಸಿದೆ. ಈ ಸಲದ ಟೂರ್ನಿಯಲ್ಲಿ ಆರ್‌ಸಿಬಿ ಒಂದು ತಂಡವಾಗಿ ಅಮೋಘ ಸಾಧನೆ ಮಾಡಿದೆ. ಆದ್ದರಿಂದ ಕಪ್ ಗೆಲ್ಲುವ ನಿರೀಕ್ಷೆಯೂ ಹೆಚ್ಚಿದೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆದ್ದರೆ ಭಾರೀ ಸಂಭ್ರಮಾಚರಣೆ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಇದೇ ಕಾಎರಣದಿಂದ ಬೆಂಗಳೂರು ನಗರದ ಕೆಲವು ಸ್ಥಳಗಳಲ್ಲಿ ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ರಸ್ತೆ ಮೆರವಣಿಗೆ ಅವಕಾಶವಿಲ್ಲ

ಆರ್‌ಸಿಬಿಯ ಅಭಿಮಾನಿಗಳು ತಂಡ ಗೆದ್ದರೆ ಮೈದಾನಗಳು ಹಾಗೂ ಮಾಲ್‌ಗಳಲ್ಲಿ ವಿಜಯೋತ್ಸವ ಆಚರಣೆ, ರಸ್ತೆಗಳಲ್ಲಿ ಬೈಕ್‌, ಕಾರುಗಳಲ್ಲಿ ಮೆರವಣಿ ಮಾಡುವ ಸಾಧ್ಯತೆಯಿದೆ. ಹೀಗಾಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ. ಜತೆಗೆ ನಗರದ ಯಾವುದೇ ರಸ್ತೆಗಳಲ್ಲಿ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂದ್ಯಕ್ಕೆ ಮಳೆ ಭೀತಿ

ಭಾನುವಾರ ಇಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಎರಡನೇ ಕ್ವಾಲಿಫೈಯರ್ ಪಂದ್ಯದ ಸಂದರ್ಭದಲ್ಲಿ ಮಳೆ ಸುರಿದಿತ್ತು. ಮಂಗಳವಾರ ಮಳೆಯಾದರೆ ಒಂದು ಪಂದ್ಯಕ್ಕೆ 120 ನಿಮಿಷಗಳ ಹೆಚ್ಚುವರಿ ಅವಧಿ ಇದೆ. ಒಂದೊಮ್ಮೆ ಮಳೆಯಿಂದಾಗಿ ಈ ದಿನ ಪಂದ್ಯವೇ ನಡೆಯದಿದ್ದರೆ ಮೀಸಲು ದಿನವಾದ ಬುಧವಾರಕ್ಕೆ ಪಂದ್ಯ ಮುಂದೂಡಲಾಗುತ್ತದೆ. ಮೀಸಲು ದಿನವೂ ಪಂದ್ಯ ರದ್ದಾದರೆ ಆಗ ಅಂಕಪಟ್ಟಿಯಲ್ಲಿ ಮೇಲಿರುವ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

ಸದ್ಯ ಆರ್‌ಸಿಬಿ ತಂಡದಲ್ಲಿ ಯಾವುದೇ ಕೊರತೆಗಳು ಕಾಣಿಸಿಲ್ಲ. ಚಾಂಪಿಯನ್‌ ಆಟಗಾರ ಜೋಶ್‌ ಹ್ಯಾಜಲ್‌ವುಡ್‌, ಫಿಲ್‌ ಸಾಲ್ಟ್‌, ಕೊಹ್ಲಿ, ಜಿತೇಶ್‌ ಶರ್ಮ ಇವರೆಲ್ಲ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಿಮ್‌ ಡೇವಿಡ್‌ ಕೂಡ ಫಿಟ್‌ ಆಗಿದ್ದು ಫೈನಲ್‌ ಆಡುವ ನಿರೀಕ್ಷೆ ಇದೆ. ಅನುಭವಿ ಸ್ವಿಂಗ್‌ ಮಾಸ್ಟರ್‌ ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌ ತಮ್ಮ ಬತ್ತಳಿಕೆಯಲ್ಲಿರುವ, ಇದುವರೆಗೂ ಪ್ರಯೋಗಿಸ ಸ್ಫೆಲ್‌ ಇಲ್ಲಿ ಪ್ರಯೋಗಿಸಬೇಕು.