MI vs KKR: ಹಲವು ದಾಖಲೆಗೆ ಸಾಕ್ಷಿಯಾದ ಮುಂಬೈ-ಕೆಕೆಆರ್ ಪಂದ್ಯ
IPL 2026: ಕೋಲ್ಕತಾ ವಿರುದ್ಧ ಮುಂಬೈಗೆ ಒಲಿದ 25ನೇ ಗೆಲುವು ಇದಾಗಿದೆ. ಈ ಮೂಲಕ ಐಪಿಎಲ್‌ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪೈಕಿ ಮುಂಬೈ ಅಗ್ರಸ್ಥಾನ ಪಡೆಯಿತು. ಆರ್‌ಸಿಬಿ ವಿರುದ್ಧ 21 ಗೆಲುವು ಕಂಡ ಚೆನ್ನೈ ಎರಡನೇ ಸ್ಥಾನದಲ್ಲಿದೆ.
Finn Allen punishes a long hop -
ಮುಂಬಯಿ, ಮಾ.30: ಕೋಲ್ಕತಾ ನೈಟ್‌ರೈಡರ್ಸ್(MI vs KKR) ಮತ್ತು ಮುಂಬೈ ಇಂಡಿಯನ್ಸ್ ನಡುವೆ ಭಾನುವಾರ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬೃಹತ್ ಮೊತ್ತದ ಐಪಿಎಲ್(IPL 2026) ಪಂದ್ಯದ ಹಲವು ದಾಖಲೆಗೆ ಸಾಕ್ಷಿಯಾಯಿತು. ದಾಖಲೆಯ ಪಟ್ಟಿ ಇಲ್ಲಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 200+ ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ
220 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮುಂಬೈ ಇಂಡಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ 6ನೇ ಬಾರಿಗೆ 200+ ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸಾಧನೆ ಮಾಡಿತು. ದಾಖಲೆ ಪಂಜಾಬ್ ಕಿಂಗ್ಸ್ ತಂಡ ಹೆಸರಿನಲ್ಲಿದೆ. ಅದು 8 ಬಾರಿ ಈ ಸಾಧನೆ ಮಾಡಿದೆ. ಉಳಿದಂತೆ ಆರ್‌ಸಿಬಿ, ರಾಜಸ್ಥಾನ್ ಮತ್ತು ಹೈದರಾಬಾದ್ ತಂಡಗಳು ತಲಾ 4 ಬಾರಿ 200+ ರನ್‌ಗಳನ್ನು ಚೇಸಿಂಗ್ ನಡೆಸಿವೆ.
ಐಪಿಎಲ್‌ನಲ್ಲಿ ಒಂದೇ ಸ್ಥಳದಲ್ಲಿ ಎದುರಾಳಿಯ ವಿರುದ್ಧ ಅತಿ ಹೆಚ್ಚು ಗೆಲುವುಗಳು
ಮುಂಬೈ ತಂಡ ಈ ಗೆಲುವಿನೊಂದಿಗೆ ಒಂದೇ ತಾಣದಲ್ಲಿ ಎದುರಾಳಿ ವಿರುದ್ಧ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡವೆನಿಸಿತು. ಕೆಕೆಆರ್ ವಿರುದ್ಧ ವಾಂಖೆಡೆಯಲ್ಲಿ ಮುಂಬೈಗೆ ಒಲಿದ 11ನೇ ಗೆಲುವು ಇದಾಗಿದೆ. ಒಟ್ಟು 13 ಪಂದ್ಯಗಳನ್ನು ಆಡಿದೆ. 2 ಪಂದ್ಯ ಮಾತ್ರ ಸೋಲು ಕಂಡಿದೆ. ಕೋಲ್ಕತ್ತಾದಲ್ಲಿ ಕೆಕೆಆರ್ ತಂಡ ಪಂಜಾಬ್ ವಿರುದ್ಧ 9, ಹೈದರಾಬಾದ್‌ನಲ್ಲಿ ಎಸ್‌ಆರ್‌ಹೆಚ್ ತಂಡ ಪಂಜಾಬ್ ವಿರುದ್ಧ 9 ಗೆಲುವು ಸಾಧಿಸಿದೆ.
ಐಪಿಎಲ್‌ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಗೆಲುವುಗಳು
ಕೋಲ್ಕತಾ ವಿರುದ್ಧ ಮುಂಬೈಗೆ ಒಲಿದ 25ನೇ ಗೆಲುವು ಇದಾಗಿದೆ. ಈ ಮೂಲಕ ಐಪಿಎಲ್‌ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪೈಕಿ ಮುಂಬೈ ಅಗ್ರಸ್ಥಾನ ಪಡೆಯಿತು. ಆರ್‌ಸಿಬಿ ವಿರುದ್ಧ 21 ಗೆಲುವು ಕಂಡ ಚೆನ್ನೈ ಎರಡನೇ ಸ್ಥಾನದಲ್ಲಿದೆ.
25 ಗೆಲುವು- MI vs KKR (36 ಪಂದ್ಯಗಳು)*
21 ಗೆಲುವು - CSK vs RCB (35 ಪಂದ್ಯಗಳು)
21 ಗೆಲುವು - KKR vs PBKS (35 ಪಂದ್ಯಗಳು)
21 ಗೆಲುವು - MI vs CSK (39 ಪಂದ್ಯಗಳು)
21 ಗೆಲುವು - MI vs DC (37 ಪಂದ್ಯಗಳು)
MI vs KKR: ವಿರಾಟ್ ಕೊಹ್ಲಿಯ ದಾಖಲೆ ಮುರಿದ ರೋಹಿತ್ ಶರ್ಮ
ಐಪಿಎಲ್‌ನಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸಿಂಗ್‌ಗಳು
262 - ಪಿಬಿಕೆಎಸ್ ವಿರುದ್ಧ ಕೆಕೆಆರ್, ಕೋಲ್ಕತ್ತಾ, 2024
246 - ಎಸ್‌ಆರ್‌ಹೆಚ್ ವಿರುದ್ಧ ಪಿಬಿಕೆಎಸ್, ಹೈದರಾಬಾದ್, 2025
228 - ಆರ್‌ಸಿಬಿ ವಿರುದ್ಧ ಎಲ್‌ಎಸ್‌ಜಿ, ಲಕ್ನೋ, 2025
224 - ಆರ್‌ಆರ್ ವಿರುದ್ಧ ಪಿಬಿಕೆಎಸ್, ಶಾರ್ಜಾ, 2020
224 - ಆರ್‌ಆರ್ ವಿರುದ್ಧ ಕೆಕೆಆರ್, ಕೋಲ್ಕತ್ತಾ, 2024
221 - ಎಂಐ ವಿರುದ್ಧ ಕೆಕೆಆರ್, ವಾಂಖೆಡೆ, 2026*