KKR vs GT: ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಸಾಯಿ ಸುದರ್ಶನ್
IPL 2026: ಐಪಿಎಲ್ 2026 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸುದರ್ಶನ್, 3000 ರನ್‌ಗಳ ಕ್ಲಬ್‌ಗೆ ಸೇರಲು ಶನಿವಾರ 36 ರನ್‌ಗಳ ಅಗತ್ಯವಿತ್ತು, ಮತ್ತು ಕಾರ್ತಿಕ್ ತ್ಯಾಗಿ ಎಸೆದ ಜಿಟಿ ಇನ್ನಿಂಗ್ಸ್‌ನ 18 ನೇ ಓವರ್‌ನ ಎರಡನೇ ಎಸೆತದಲ್ಲಿ ಅವರು ಈ ಮೈಲುಗಲ್ಲು ನೆಟ್ಟರು.
Sai Sudharsan -
ಕೋಲ್ಕತಾ, ಮೇ 17: 24 ವರ್ಷದ ಎಡಗೈ ಬ್ಯಾಟ್ಸ್‌ಮನ್ ಬಿ. ಸಾಯಿ ಸುದರ್ಶನ್(Sai Sudharsan), ಮೇ 16 ರ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ 13 ನೇ ಲೀಗ್ ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್(KKR vs GT)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ 248 ರನ್‌ಗಳ ಗುರಿ ಬೆನ್ನಟ್ಟುವಿಕೆಯಲ್ಲಿ 28 ಎಸೆತಗಳಲ್ಲಿ ಅಜೇಯ 53 ರನ್ ಗಳಿಸುವ ಮೂಲಕ ಟಿ20ಯಲ್ಲಿ ಅತಿ ವೇಗವಾಗಿ 3000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿದರು.
ಟಿ20 ಓವರ್‌ಗಳ ಮಾದರಿಯಲ್ಲಿ ಸುದರ್ಶನ್ ಕೇವಲ 78 ಇನ್ನಿಂಗ್ಸ್‌ಗಳಲ್ಲಿ 3 ಸಾವಿರ ರನ್ ಪೂರ್ತಿಗೊಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶಾನ್ ಮಾರ್ಷ್ ಅವರ ಹೆಸರಿನಲ್ಲಿತ್ತು. ಪಂಜಾಬ್ ಕಿಂಗ್ಸ್ ಪರ ಐಪಿಎಲ್‌ನಲ್ಲಿ ಆಡಿದ್ದ ಮಾರ್ಷ್, 85ನೇ ಇನ್ನಿಂಗ್ಸ್‌ನಲ್ಲಿ 3000ನೇ ರನ್ ಗಳಿಸಿದ್ದರು. ಮಾರ್ಷ್ ನಂತರ ಆಸ್ಟ್ರೇಲಿಯಾದ ಡಿ'ಆರ್ಸಿ ಶಾರ್ಟ್ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಇದ್ದಾರೆ. ಶಾರ್ಟ್ ಮತ್ತು ಕಾನ್ವೇ ಇಬ್ಬರೂ 86 ನೇ ಇನ್ನಿಂಗ್ಸ್‌ನಲ್ಲಿ 3 ಸಾವಿರ ಟಿ20 ರನ್ ಗಳಿಸಿದ್ದರು.
𝑪𝒐𝒏𝒔𝒊𝒔𝒕𝒆𝒏𝒕𝒍𝒚 going from strength to strength 🤌 pic.twitter.com/VQQGhvRVUp
— Gujarat Titans (@gujarat_titans) May 16, 2026
ಐಪಿಎಲ್ 2026 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸುದರ್ಶನ್, 3000 ರನ್‌ಗಳ ಕ್ಲಬ್‌ಗೆ ಸೇರಲು ಶನಿವಾರ 36 ರನ್‌ಗಳ ಅಗತ್ಯವಿತ್ತು, ಮತ್ತು ಕಾರ್ತಿಕ್ ತ್ಯಾಗಿ ಎಸೆದ ಜಿಟಿ ಇನ್ನಿಂಗ್ಸ್‌ನ 18 ನೇ ಓವರ್‌ನ ಎರಡನೇ ಎಸೆತದಲ್ಲಿ ಅವರು ಈ ಮೈಲುಗಲ್ಲು ನೆಟ್ಟರು. ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಬ್ಯಾಟರ್ ಎಂಬ ದಾಖಲೆಯೂ ಸಾಯಿ ಸುದರ್ಶನ್ ಹೆಸರಿನಲ್ಲಿದೆ.
ಟಿ20ಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್ ಗಳಿಂದ 3000 ರನ್
78 - ಸಾಯಿ ಸುದರ್ಶನ್*
85 - ಶಾನ್ ಮಾರ್ಷ್
86 - ಡಿ’ಆರ್ಸಿ ಶಾರ್ಟ್
86 - ಡೆವೊನ್ ಕಾನ್ವೇ
87 - ಕ್ರಿಸ್ ಗೇಲ್
DC vs RR: ಡೆಲ್ಲಿ ಚಾಲೆಂಜ್ ಗೆದ್ದಿದ್ದೇ ರಾಜಸ್ಥಾನ್ ರಾಯಲ್ಸ್?
ಪಂದ್ಯ ಗೆದ್ದ ಕೆಕೆಆರ್
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಕೆಕೆಆರ್ ಪಂದ್ಯದಲ್ಲಿ 29 ರನ್ ಅಂತರದ ಗೆಲುವು ಸಾಧಿಸಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿತು. ಕೋಲ್ಕತಾ, ಫಿನ್ ಅಲೆನ್ ಮತ್ತು ಯುವ ಬ್ಯಾಟರ್ ರಘುವಂಶಿ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೇವಲ 2 ವಿಕೆಟ್‌ಗೆ 247 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಜವಾಬಿತ್ತ ಗುಜರಾತ್ ಕೂಡ ಒಂದು ಹಂತದ ವರೆಗೆ ದಿಟ್ಟ ಹೋರಾಟ ನಡೆಸಿತು. ಆದರೆ ಅಂತಿಮವಾಗಿ 4 ವಿಕೆಟ್‌ಗೆ 218 ರನ್‌ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.