ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KKR vs GT: ದಿಗ್ಗಜರಾದ ಸಚಿನ್‌, ಕೊಹ್ಲಿ ಜತೆ ಎಲೈಟ್‌ ಪಟ್ಟಿ ಸೇರಿದ ಶುಭಮನ್‌ ಗಿಲ್‌

IPL 2026: ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 247 ರನ್ ಗಳಿಸಿತು. ಫಿನ್ ಅಲೆನ್(93) ರನ್ ಗಳಿಸಿದರು. ಅವರು ಬರೋಬ್ಬರಿ 10 ಸಿಕ್ಸರ್ ಸಿಡಿಸಿದರು. ಕೇವಲ ಏಳು ರನ್‌ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ರಘುವಂಶಿ (ಔಟಾಗದೇ 82) ಮತ್ತು ಗ್ರೀನ್ (ಔಟಾಗದೇ 52) ಅವರಿಬ್ಬರೂ ಅರ್ಧಶತಕಗಳನ್ನು ಗಳಿಸಿದರು.

ಐಪಿಎಲ್‌ನಲ್ಲಿ ಸಚಿನ್‌, ಕೊಹ್ಲಿಯ ದಾಖಲೆ ಸರಿಗಟ್ಟಿದ ಶುಭಮನ್‌ ಗಿಲ್‌

Shubman Gill -

Abhilash BC
Abhilash BC May 17, 2026 7:33 AM

ಕೋಲ್ಕತಾ, ಮೇ 17: ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌(KKR vs GT) 29 ರನ್‌ ಅಂತರದ ಸೋಲು ಕಂಡರೂ, ನಾಯಕ ಶುಭಮನ್‌ ಗಿಲ್‌(Shubman Gill) ಅವರು ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯುವ ಮೂಲಕ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್‌ ಅವರನ್ನೊಳಗೊಂಡ ಎಲೈಟ್‌ ಪಟ್ಟಿಗೆ ಸೇರಿದ್ದಾರೆ.

ಪಂದ್ಯದಲ್ಲಿ 85 ರನ್‌ ಬಾರಿಸಿದ ಗಿಲ್‌ ಹಾಲಿ ಆವೃತ್ತಿಯಲ್ಲಿ 500 ರನ್‌ ಪೂರ್ತಿಗೊಳಿಸಿದರು. ಈ ಮೂಲಕ ಐಪಿಎಲ್‌ ಆವೃತ್ತಿಗಳಲ್ಲಿ ನಾಯಕನಾಗಿ ಅತ್ಯಧಿಕ ಬಾರಿ 500 ರನ್‌ ಕಲೆಹಾಕಿದ ಆಟಗಾರರ ಪೈಕಿ ಜಂಟಿ ಎರಡನೇ ಬ್ಯಾಟರ್‌ ಎನಿಸಿದರು. ಇದು ಗಿಲ್‌ ಅವರ ಎರಡನೇ 500 ರನ್‌ ಸಾಧನೆಯಾಗಿದೆ. ತೆಂಡೂಲ್ಕರ್‌ ಮತ್ತು ಕೊಹ್ಲಿ ಕೂಡ ಎರಡು ಬಾರಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ. ದಾಖಲೆ ಕೆ.ಎಲ್‌ ರಾಹುಲ್‌ ಮತ್ತು ಡೇವಿಡ್‌ ವಾರ್ನರ್‌ ಹೆಸರಿನಲ್ಲಿದೆ. ಉಭಯ ಆಟಗಾರರು ಮೂರು ಬಾರಿ ಈ ಸಾಧನೆಗೈದಿದ್ದಾರೆ.

ಸತತ ಐಪಿಎಲ್ ಋತುಗಳಲ್ಲಿ ನಾಯಕನಾಗಿ 500+ ರನ್

3 - ಡೇವಿಡ್ ವಾರ್ನರ್ (2015, 2016, 2017)

3 - ಕೆಎಲ್ ರಾಹುಲ್ (2020, 2021, 2022)

2 - ಸಚಿನ್ ತೆಂಡೂಲ್ಕರ್ (2010, 2011)

2 - ವಿರಾಟ್ ಕೊಹ್ಲಿ (2015, 2016)

2 - ಶುಭಮನ್ ಗಿಲ್ (2025, 2026)*

ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 247 ರನ್ ಗಳಿಸಿತು. ಫಿನ್ ಅಲೆನ್(93) ರನ್ ಗಳಿಸಿದರು. ಅವರು ಬರೋಬ್ಬರಿ 10 ಸಿಕ್ಸರ್ ಸಿಡಿಸಿದರು. ಕೇವಲ ಏಳು ರನ್‌ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ರಘುವಂಶಿ (ಔಟಾಗದೇ 82) ಮತ್ತು ಗ್ರೀನ್ (ಔಟಾಗದೇ 52) ಅವರಿಬ್ಬರೂ ಅರ್ಧಶತಕಗಳನ್ನು ಗಳಿಸಿದರು. ಅಲ್ಲದೇ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 108 ರನ್ ಸೇರಿಸಿದರು.

KKR vs GT: ರನ್‌ ಮಳೆಯಲ್ಲಿ ಮುಳುಗಿದ ಟೈಟಾನ್ಸ್‌; ಕೆಕೆಆರ್‌ಗೆ 29 ರನ್‌ ಜಯ

ಗುರಿ ಬೆನ್ನಟ್ಟಿದ ಗುಜರಾತ್‌ ದಿಟ್ಟ ಬ್ಯಾಟಿಂಗ್‌ ಹೋರಾಟ ನಡೆಸಿರೂ ಅಂತಿಮವಾಗಿ 4 ವಿಕೆಟ್‌ಗೆ 218 ರನ್‌ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಗಿಲ್‌ 85 ರನ್‌ ಗಳಿಸಿದರೆ, ಜಾಸ್‌ ಬಟ್ಲರ್‌(57) ಮತ್ತು ಸಾಯಿ ಸುದರ್ಶನ್‌(53*) ಅರ್ಧಶತಕ ಬಾರಿಸಿದರು.

ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 247 (ಫಿನ್‌ ಅಲೆನ್‌ 93, ಅಂಗಕ್ರಿಷ್ ರಘುವಂಶಿ ಔಟಾಗದೇ 82, ಕ್ಯಾಮರಾನ್‌ ಗ್ರೀನ್‌ ಔಟಾಗದೇ 52; ಸಾಯಿ ಕಿಶೋರ್‌ 38ಕ್ಕೆ 1) ವಿರುದ್ಧ: ಗುಜರಾತ್‌ ಟೈಟನ್ಸ್‌; 20 ಓವರ್‌ಗಳಲ್ಲಿ 4 ವಿಕೆಟ್‌ಗೆ 218( ಶುಭಮನ್‌ ಗಿಲ್‌ 85, ಬಟ್ಲರ್‌ 57, ಸುದರ್ಶನ್‌ 53*, ಸುನಿಲ್‌ ನರೈನ್‌ 29ಕ್ಕೆ 2.