ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PBKS vs GT: ಸೋಲಿಗೆ ಬಲವಾದ ಕಾರಣ ತಿಳಿಸಿದ ಗುಜರಾತ್‌ ನಾಯಕ ಶುಭಮನ್‌ ಗಿಲ್‌

Shubman Gill: ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ ಗೆಲುವಿನ ಹೀರೋ ಕೂಪರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರು. ಪವರ್‌ಪ್ಲೇನಲ್ಲಿ ಉತ್ತಮವಾಗಿ ಆಡಿದರು ಮತ್ತು ತಂಡವು ಒತ್ತಡದಲ್ಲಿದ್ದಾಗ, ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಆಟಗಾರ ಸ್ಟ್ರೈಕ್ ಅನ್ನು ತಿರುಗಿಸುವಷ್ಟು ಚಾಣಾಕ್ಷರಾಗಿದ್ದರು ಎಂದು ಶ್ಲಾಘಿಸಿದರು.

ಸೋಲಿಗೆ ಬಲವಾದ ಕಾರಣ ತಿಳಿಸಿದ ಗುಜರಾತ್‌ ನಾಯಕ ಶುಭಮನ್‌ ಗಿಲ್‌

Shubman Gill -

Abhilash BC
Abhilash BC Apr 1, 2026 6:52 AM

ಮುಲ್ಲನ್‌ಪುರ, ಎ.1: ಐಪಿಎಲ್ 2026(IPL 2026) ರ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(PBKS vs GT) ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಗುಜರಾತ್ ತಂಡದ ನಾಯಕ ಶುಭಮನ್ ಗಿಲ್(Shubman Gill) ಸೋಲಿನ ಹಿಂದಿನ ಕಾರಣವನ್ನು ತಿಳಿಸಿದ್ದು, ತಮ್ಮ ತಂಡವು ಕೆಲವು ರನ್‌ಗಳ ಕೊರತೆಯನ್ನು ಎದುರಿಸಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ನಿರಂತರ ಮಳೆಯಿಂದಾಗಿ, ಬೌಲರ್‌ಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿಶ್ಲೇಷಿಸಿದರು.

ಪಂದ್ಯದ ಬಳಿಕ ಮಾತನಾಡಿದ ಶುಭಮನ್‌ ಗಿಲ್‌, "ಬ್ಯಾಟಿಂಗ್‌ನಲ್ಲಿ, ಪಿಚ್‌ 210-220 ವಿಕೆಟ್‌ನಂತೆ ಕಾಣುತ್ತಿತ್ತು. 175 ಉತ್ತಮ ಸ್ಕೋರ್ ಎಂದು ನಾವು ಭಾವಿಸಿದ್ದೆವು, ಆದರೆ ಕೊನೆಯ 5 ಓವರ್‌ಗಳಲ್ಲಿ ನಾವು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು ಮತ್ತು ಹೆಚ್ಚು ಸ್ಕೋರ್ ಮಾಡಲಿಲ್ಲ. ಚೆಂಡು ಹಳೆಯದಾದ ನಂತರ, ಅದನ್ನು ನೆಲಕ್ಕೆ ಬಡಿಯುವುದು ಕಷ್ಟಕರವಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ, ಮಳೆ ಮುಂದುವರೆಯಿತು. ಇದು ಬೌಲರ್‌ಗಳಿಗೆ ಕಷ್ಟವಾಯಿತು. ಆದರೂ ಪಂದ್ಯವನ್ನೂ ಕೊನೆಯ ಓವರ್‌ ತನಕ ಕೊಂಡೊಯ್ದ ಬೌಲರ್‌ಗಳ ಶ್ರಮವನ್ನು ಮೆಚ್ಚಲೇ ಬೇಕು" ಎಂದು ಗಿಲ್‌ ಹೇಳಿದರು.

ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ ಗೆಲುವಿನ ಹೀರೋ ಕೂಪರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರು. ಪವರ್‌ಪ್ಲೇನಲ್ಲಿ ಉತ್ತಮವಾಗಿ ಆಡಿದರು ಮತ್ತು ತಂಡವು ಒತ್ತಡದಲ್ಲಿದ್ದಾಗ, ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಆಟಗಾರ ಸ್ಟ್ರೈಕ್ ಅನ್ನು ತಿರುಗಿಸುವಷ್ಟು ಚಾಣಾಕ್ಷರಾಗಿದ್ದರು ಎಂದು ಶ್ಲಾಘಿಸಿದರು.

"ಕೂಪರ್‌ ಆಡಿದ ಕೆಲವು ಹೊಡೆತಗಳು ಅವಾಸ್ತವಿಕವಾಗಿದ್ದವು. ನಾನು ನನ್ನ ಕೈಯ ಮೇಲೆ ಕೇಂದ್ರೀಕರಿಸುತ್ತಿದ್ದೆ ಮತ್ತು ಇದ್ದಕ್ಕಿದ್ದಂತೆ ನಾವು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡೆವು. ಆದರೂ ಕೂಪರ್‌ ಶಾಂತವಾಗಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಕೂಪರ್ ಉತ್ತಮ ಮನಸ್ಥಿತಿಯನ್ನು ಹೊಂದಿದ್ದಾರೆ ಮತ್ತು ಅವರು ತಮ್ಮ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ" ಎಂದು ಅಯ್ಯರ್ ಹೇಳಿದರು.

44 ಎಸೆತ ಎದುರಿಸಿದ ಕೂಪರ್‌ ತಲಾ 5 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 72* ರನ್‌ ಬಾರಿಸಿದರು. ಈ ಮೂಲಕ ಐಪಿಎಲ್‌ನ ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ಮೊತ್ತ ಗಳಿಸಿದ ಐದನೇ ಆಟಗಾರ ಎನಿಸಿದರು. ದಾಖಲೆ ಮಾಜಿ ಆಟಗಾರ ಬ್ರೆಂಡನ್‌ ಮೆಕಲಮ್‌( 158*) ಹೆಸರಿನಲ್ಲಿದೆ.

ಪಂಜಾಬ್‌ ಕಿಂಗ್ಸ್‌ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನೆಡೆಸಿದ ಗುಜರಾತ್ ಟೈಟಾನ್ಸ್ , ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್‌ ಬಾರಿಸಿತು, ಜಬಾಬಿತ್ತ ಪಂಜಾಬ್‌ ಕಿಂಗ್ಸ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ165 ರನ್‌ ಗಳಿಸಿ ಗೆಲುವಿನ ಶುಭಾರಂಭ ಮಾಡಿತು. 2 ಅಂಕ ಗಳಿಸಿರುವ ಪಂಜಾಬ್‌ ತಂಡ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ.