DC vs LSG: ಐಪಿಎಲ್ ಐದನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್!
DC LSG: ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐದನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್-ಲಖನೌ ಸೂಪರ್ ಜಯಂಟ್ಸ್ ಪಂದ್ಯ. -
ಲಖನೌ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು (LSG vs DC) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ (Axar Patel) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
“ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಮೊದಲ ಪಂದ್ಯ, ಹೊಸ ಪಿಚ್, ಇದು ಕೆಂಪು ಮಣ್ಣಿನ ಅತ್ಯುತ್ತಮ ಪಿಚ್ ಆಗಿದ್ದು ಮೊದಲ 6 ಓವರ್‌ಗಳಿಗೆ ಸಹಾಯ ಮಾಡಬಹುದು. ಅಂಕಿಅಂಶಗಳ ಪ್ರಕಾರ ಬಹಳಷ್ಟು ಪಂದ್ಯಗಳನ್ನು ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿವೆ, ಆದರೆ ಇದು ಮೊದಲ ಪಂದ್ಯವಾಗಿರುವ ಕಾರಣ ಮೊದಲು ಬೌಲ್ ಮಾಡುತ್ತೇವೆ. ಕಳೆದ ಸೀಸನ್‌ನಲ್ಲಿ ನಾವು ಚೆನ್ನಾಗಿ ಆರಂಭಿಸಿದ್ದೆವು, ಆದರೆ ಮಧ್ಯಭಾಗದಲ್ಲಿ ಸ್ವಲ್ಪ ಕುಸಿತವಾಗಿತ್ತು, ನಾವು ತುಂಬಾ ಮುಂದೆ ಯೋಚಿಸುತ್ತಿಲ್ಲ. ನಿಸಾಂಕ, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್ ಮತ್ತು ಲುಂಗಿ ಎನ್ಗಿಡಿ ನಮ್ಮ ನಾಲ್ಕು ವಿದೇಶಿ ಆಟಗಾರರು,” ಎಂದು ಅಕ್ಷರ್ ಪಟೇಲ್ ಹೇಳಿದರು.
IPL 2026: ಐಪಿಎಲ್ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!
ರಿಷಭ್ ಪಂತ್ ಹೇಳಿದ್ದೇನು?
"ಯಾವ ರೀತಿಯ ವಿಕೆಟ್ ಎಂಬುದು ಇಲ್ಲಿ ಮುಖ್ಯವಲ್ಲ ಹಾಗೂ ಇದು ಹೆಚ್ಚಿನ ವ್ಯತ್ಯಾಸದಿಂದ ಕೂಡಿಲ್ಲ. ಇದು ಸಂಪೂರ್ಣ ಹೊಸದು, ತಡವಾಗಿ ಇಬ್ಬನಿ ಬರುತ್ತದೆ ಎಂಬುದು ಗೊತ್ತಿಲ್ಲ. ನಾವು ಬಣ್ಣ ಮತ್ತು ಲೋಗೋ ಬದಲಿಸಿದ್ದೇವೆ. ಯಾವುದೇ ನಕಾರಾತ್ಮಕ ವಿಚಾರಗಳಿಲ್ಲ, ನಾವು ಉತ್ತಮವಾಗಿದ್ದೇವೆ ಮತ್ತು ಆಟಕ್ಕೆ ಉತ್ಸುಕವಾಗಿದ್ದೇವೆ. ಕಳೆದ ಸೀಸನ್‌ನಲ್ಲಿ ಗಾಯಗಳ ಬಗ್ಗೆ ಕೆಲವು ಆತಂಕಗಳಿದ್ದವು, ಆದರೆ ನಾಯಕನಾಗಿ ಅದರಲ್ಲಿ ಹೆಚ್ಚು ತೊಂದರೆಪಡಬಾರದು. ಈ ಬಾರಿ ಎಲ್ಲರೂ ಫಿಟ್ ಆಗಿದ್ದಾರೆ. ಮಾರ್ಕ್ರಮ್, ಮಾರ್ಷ್, ನಿಕೋಲಸ್ ಪೂರನ್ ಮತ್ತು ಎನ್ರಿಕ್ ನೊರ್ಕಿಯಾ ನಮ್ಮ ನಾಲ್ಕು ವಿದೇಶಿ ಆಟಗಾರರು ಆಡುತ್ತಿದ್ದಾರೆ," ಎಂದು ಲಖನೌ ನಾಯಕ ರಿಷಭ್ ಪಂತ್ ಹೇಳಿದ್ದಾರೆ.
IPL 2026: ಶ್ರೇಯಸ್ ಅಯ್ಯರ್‌ಗೆ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಯುಜ್ವೇಂದ್ರ ಚಹಲ್!
ಉಭಯ ತಂಡಗಳ ಪ್ಲೇಯಿಂಗ್ Xi
ಲಖನೌ ಸೂಪರ್ ಜಯಂಟ್ಸ್: ಏಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್). ಆಯುಷ್ ಬದೋನಿ, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ, ಎನ್ರಿಕ್ ನೊರ್ಕಿಯಾ, ಪ್ರಿನ್ಸ್ ಯಾದವ್
ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಥುಮ್ ನಿಸಾಂಕ, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ವಿಪ್ರಜ್ ನಿಗಮ್, ಲುಂಗಿ ಎನ್ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಕೇಶ್ ಕುಮಾರ್