ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು

Virat Kohli: "ನಾವು ಇಲ್ಲಿ(ಚಿನ್ನಸ್ವಾಮಿ) ಆಡಲು ಸಂತೋಷಪಟ್ಟಿದ್ದೇವೆ, ಇದು ಕ್ರಿಕೆಟ್ ಆಡಲು ವಿಶೇಷ ಸ್ಥಳವಾಗಿದೆ. ತವರಿನಲ್ಲಿ ಆಡುವುದು ಮತ್ತು ನಾಲ್ಕು ಪಂದ್ಯಗಳನ್ನು ಗೆದ್ದಿರುವುದು ಅದ್ಭುತವಾಗಿದೆ. ಋತುವಿನ ನಂತರ ನಾವು ಮತ್ತೆ ಇಲ್ಲಿ ಆಡಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇವೆ" ಎಂದು ಕೊಹ್ಲಿ ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ವಿರಾಟ್‌ ಕೊಹ್ಲಿ ಮನದಾಳದ ಮಾತು

virat kohli post match interview -

Abhilash BC
Abhilash BC Apr 25, 2026 8:37 AM

ಬೆಂಗಳೂರು, ಎ.25: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರು ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium)ದ ಬಗ್ಗೆ ಮತ್ತು ಇಲ್ಲಿನ ಅಭಿಮಾನಿಗಳ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಇಲ್ಲಿ ಆಡುವುದೇ ಒಂದು ವಿಶೇಷ ಎಂದಿದ್ದಾರೆ.

ಹಾಲಿ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಶುಕ್ರವಾರ ನಡೆದಿದ್ದ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯ ಆರ್‌ಸಿಬಿಗೆ ಚಿನ್ನಸ್ವಾಮಿಯಲ್ಲಿ ಕೊನೆಯ ತವರು ಪಂದ್ಯವಾಗಿತ್ತು. ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಕೊಹ್ಲಿ 81 ರನ್‌ ಬಾರಿಸಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿ ಬಳಿಕ ಮಾತನಾಡಿದ ಕೊಹ್ಲಿ, "ಮೊದಲನೆಯದಾಗಿ, ನಾವು ಇಲ್ಲಿ ಐದು ಪಂದ್ಯಗಳನ್ನು ಆಡಲು ಸಾಧ್ಯವಾಯಿತು ಮತ್ತು ಅಭಿಮಾನಿಗಳು ತಂಡವನ್ನು ಮತ್ತೆ ನೋಡಲು ಸಾಧ್ಯವಾಯಿತು ಎಂದು ನಮಗೆ ತುಂಬಾ ಸಂತೋಷವಾಯಿತು" ಎಂದರು.

2025ರ ಜೂ.4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಚಟುವಟಿಕೆಯನ್ನು ರದ್ದುಮಾಡಲಾಗಿತ್ತು. ಈ ಬಾರಿ ಐಪಿಎಲ್‌ ಪಂದ್ಯಗಳನ್ನು ನಡೆಯುವುದೇ ಅನುಮಾನ ಎನ್ನುವಂತಿತ್ತು. ಬಳಿಕ ಕ್ರೀಡಾಂಗಣದಲ್ಲಿ ಆಗಿರುವ ಬದಲಾವಣೆಯನ್ನು ಪರಿಶೀಲಿಸಿದ ಬಳಿಕ ತಜ್ಞರ ಸಮಿತಿ ಸಲ್ಲಿಸಿದ್ದ ವರದಿ ಆಧರಿಸಿದ ಗೃಹ ಸಚಿವ ಪರಮೇಶ್ವರ್‌ ಅವರು ಐಪಿಎಲ್‌ಗೆ ಅನುಮತಿ ನೀಡಿದ್ದರು. ಮತ್ತೆ ಚಿನ್ನಸ್ವಾಮಿಗೆ ಕ್ರಿಕೆಟ್‌ ಮರಳಿದ್ದಕ್ಕೆ ಕೊಹ್ಲಿ ತೃಪ್ತಿ ವ್ಯಕ್ತಪಡಿಸಿದರು.



IPL 2026: : ಕ್ರಿಸ್ ಗೇಲ್, ರೋಹಿತ್ ಶರ್ಮಾ ನಂತರ ಸಿಕ್ಸರ್‌ ದಾಖಲೆ ಬರೆದ ವಿರಾಟ್ ಕೊಹ್ಲಿ

"ನಾವು ಇಲ್ಲಿ(ಚಿನ್ನಸ್ವಾಮಿ) ಆಡಲು ಸಂತೋಷಪಟ್ಟಿದ್ದೇವೆ, ಇದು ಕ್ರಿಕೆಟ್ ಆಡಲು ವಿಶೇಷ ಸ್ಥಳವಾಗಿದೆ. ತವರಿನಲ್ಲಿ ಆಡುವುದು ಮತ್ತು ನಾಲ್ಕು ಪಂದ್ಯಗಳನ್ನು ಗೆದ್ದಿರುವುದು ಅದ್ಭುತವಾಗಿದೆ. ಋತುವಿನ ನಂತರ ನಾವು ಮತ್ತೆ ಇಲ್ಲಿ ಆಡಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇವೆ" ಎಂದು ಕೊಹ್ಲಿ ಹೇಳಿದರು.



ಬೆಂಗಳೂರು ಎರಡನೇ ತವರು ಎಂದಿದ್ದ ಕೊಹ್ಲಿ

ಈ ಹಿಂದೊಮ್ಮೆ ಕೊಹ್ಲಿ ಬೆಂಗಳೂರು ಮತ್ತು ಇಲ್ಲಿನ ಅಭಿಮಾನಿಗಳ ಪ್ರೀತಿಯ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದರು. ನಾನು ಹೆದಲಿಯಲ್ಲಿ ಜನಿಸಿದರೂ ಬೆಂಗಳೂರಿನಲ್ಲಿ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನನಗೆ ಇಲ್ಲಿ ತವರಿನ ಅನುಭವ ನೀಡುತ್ತದೆ. ಹೀಗಾಗಿ ಬೆಂಗಳೂರು ನನ್ನ ಎರಡನೇ ತವರು ಕೂಡ ಆಗಿದೆ. ಬೆಂಗಳೂರಿಗರ ಪ್ರೀತಿ, ಬೆಂಬಲ ನಿಜಕ್ಕೂ ಅದ್ಭುತ. ಪ್ರತಿ ಐಪಿಎಲ್​ ಸೀಸನ್ ವೇಳೆ ಅದನ್ನು ನಾನು ನೋಡುತ್ತಿದ್ದೇನೆ. ನನಗೆ ಎಲ್ಲವನ್ನು ನೀಡಿದ ಆರ್​ಸಿಬಿ ಮತ್ತು ಕನ್ನಡಿಗರನ್ನು ಎಷ್ಟೇ ಹೊಗಳಿದರು ಸಾಲದು. ಕಡೆಯ ವರೆಗೂ ಆರ್​ಸಿಬಿ ಪರ ಆಡುವೆ ಎಂದು ಕೊಹ್ಲಿ ಮನದಾಳದ ಮಾತುಗಳನ್ನಾಡಿದ್ದರು.



ಅಂಡರ್​​​-19 ವಿಶ್ವಕಪ್​​​​​​​​​​ನಿಂದಲೇ ಬೆಂಗಳೂರಿಗೂ ನನಗೂ ವಿಶೇಷ ಬಾಂಧವ್ಯ ಆರಂಭವಾಯಿತು. 2008 ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲು ನನ್ನನ್ನ ಬಿಡ್ ಮಾಡಿತ್ತು. ಬಳಿಕ ನನ್ನನ್ನು ಕೈ ಬಿಟ್ಟು ಪ್ರದೀಪ್​ ಸಾಂಗ್ವಾರನ್ನು ಖರೀದಿಸಿತು. ಆರ್​ಸಿಬಿ ಎರಡನೇ ತಂಡವಾಗಿ ನನ್ನನ್ನು ಬಿಡ್​ ಮಾಡಿತು. ಕೊನೆಗೆ ಆರ್​ಸಿಬಿ ಪಾಲಾದೆ. ಅಲ್ಲಿಂದ ಇಲ್ಲಿ ತನಕ ನಾನು ಆರ್​ಸಿಬಿ ತಂಡದ ಪರವೇ ಆಡುತ್ತಿದ್ದೇನೆ. ಇಂತಹ ಫ್ರಾಂಚೈಸಿಯನ್ನ ನಾನು ಇದುವರೆಗೆ ನೋಡಿಲ್ಲ. ಹಲವು ವರ್ಷಗಳಿಂದ ಫ್ಯಾನ್ಸ್ ಸಾಕಷ್ಟು ಪ್ರೀತಿ, ಸಹಕಾರ ನೀಡುತ್ತಿದ್ದಾರೆ. ಇಂತಹ ಪ್ರೀತಿ ಪಡೆದಿರುವ ನಾನು ನಿಜಕ್ಕೂ ಧನ್ಯ. ಬೆಂಗಳೂರಿನ ಸಿಟಿ ಎಂದರೆ ನನಗೆ ತುಂಬಾ ಇಷ್ಟ ಇಲ್ಲಿನ ಜನರೂ ಕೂಡ ಅಷ್ಟೇ ಪ್ರೀತಿ ಪಾತ್ರರು ಎಂದು ಹೇಳಿದ್ದರು.

IPL 2026 Points Table: ಅಂಕಪಟ್ಟಿಯಲ್ಲಿ ಏರಿಕೆ ಕಂಡ ಆರ್‌ಸಿಬಿ

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡ 5 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ ಟೈಟಾನ್ಸ್‌ ತಂಡ ಸಾಯಿ ಸುದರ್ಶನ್ (100) ಅವರ ಆಕರ್ಷಕ ಶತಕದ ನೆರವಿನಿಂದ 3 ವಿಕೆಟ್‌ಗೆ 205 ರನ್‌ಗಳ ಉತ್ತಮ ಮೊತ್ತ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ ಕೊಹ್ಲಿ ಮತ್ತು ಪಡಿಕ್ಕಲ್‌ ಅರ್ಧಶತಕದ ಬಲದಿಂದ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 206 ರನ್‌ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.