ಲಂಡನ್‌ನಲ್ಲಿ ಮಗನ ಜತೆ ವಿರಾಟ್ ಕೊಹ್ಲಿ ಮೋಜು-ಮಸ್ತಿ; ಮುದ್ದಾದ ಫೋಟೊ ವೈರಲ್
Virat Kohli's UK outing: ಈ ಹಿಂದೆ ಮಗಳು ವಮಿಕಾಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ತೀವ್ರ ಅಸಮಾಧಾನಗೊಂಡಿದ್ದರು. ದಯವಿಟ್ಟು ಮಗಳ ಫೋಟೊ ವೈರಲ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಮಗನ ಜತೆಗಿನ ಫೋಟೊ ಹಂಚಿಕೊಂಡಿರುವ ವಿಚಾರ ಕೊಹ್ಲಿಗೆ ತಿಳಿದರೆ ಮತ್ತೆ ಸಿಟ್ಟಿಗೇಳುವುದು ಖಚಿತ.
Virat Kohli's UK outing -
ಲಂಡನ್, ಜೂ. 16: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಲಂಡನ್‌ನ ಪಾರ್ಕ್‌ವೊಂದರಲ್ಲಿ ಮಗ ಅಕಾಯ್(Akaay) ಜತೆ ಅತ್ಯಂತ ಸುಂದರವಾಗಿ ಕಾಲಕಳೆಯುತ್ತಿರುವ ಫೋಟೊವೊಂದು ವೈರಲ್ ಆಗಿದೆ. ಕೊಹ್ಲಿ ಅಕಾಯ್ನನ್ನು ಹೆಗಲ ಮೇಲೆ ಹೊತ್ತಕೊಂಡು ಮದ್ದಾಡುತ್ತಿರುವುದನ್ನು ಈ ಫೋಟೊದಲ್ಲಿ ನೋಡಬಹುದಾಗಿದೆ. ಪತ್ನಿ ಅನುಷ್ಕಾ ಶರ್ಮ(Anushka Sharma) ಕೂಡ ಈ ವೇಳೆ ಜತೆಗಿದ್ದರು.
ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್‌ನಲ್ಲಿ ನೆಲೆಸಲಿದ್ದಾರೆ ಎಂಬ ಮಾತುಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಕೊಹ್ಲಿ ಕೂಡ ಭಾರತದಲ್ಲಿ ಸರಣಿ ಆಡಲಷ್ಟೇ ಭೇಟಿ ನೀಡುತ್ತಾರೆ. ಐಪಿಎಲ್ ಮುಕ್ತಾಯದ ತಕ್ಷಣ ಕೊಹ್ಲಿ ಲಂಡನ್‌ಗೆ ತೆರಳಿದ್ದರು. ಅಭಿಮಾನಿಗಳ ಜಂಜಾಟದಿಂದ ತಪ್ಪಿಸಿಕೊಂಡು ಸಾಮಾನ್ಯರಂತೆ ಜೀವಿಸಲು ಇಷ್ಟ ಪಡುತ್ತಿರುವ ಕೊಹ್ಲಿ ಮುಂದಿನ ದಿನದಲ್ಲಿ ಲಂಡನ್ನಲ್ಲಿಯೇ ನೆಲೆಸುವ ಸಾಧ್ಯತೆ ಇದೆ.
VIRAL: #ViratKohli and #AnushkaSharma spend some quality time with family in UK. 😍#Celebs pic.twitter.com/p1mgmD115A
— Filmfare (@filmfare) June 16, 2026
ಈ ಹಿಂದೆ ಮಗಳು ವಮಿಕಾಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ತೀವ್ರ ಅಸಮಾಧಾನಗೊಂಡಿದ್ದರು. ದಯವಿಟ್ಟು ಮಗಳ ಫೋಟೊ ವೈರಲ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಮಗನ ಜತೆಗಿನ ಫೋಟೊ ಹಂಚಿಕೊಂಡಿರುವ ವಿಚಾರ ಕೊಹ್ಲಿಗೆ ತಿಳಿದರೆ ಮತ್ತೆ ಸಿಟ್ಟಿಗೇಳುವುದು ಖಚಿತ.
IND vs AFG: ವಿರಾಟ್ ಕೊಹ್ಲಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಆಕಾಶ್ ಚೋಪ್ರಾ!
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ಇದು ಸಲಹಾ ಸಂಸ್ಥೆಯಾಗಿದೆ. ಆಗಸ್ಟ್ 1, 2022 ರಂದು ಆರಂಭಗೊಂಡ ಈ ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್ಶೈರ್ನಲ್ಲಿದೆ.
ಚೇತರಿಕೆಯ ಹಾದಿಯಲ್ಲಿ ಕೊಹ್ಲಿ
ಗುಜರಾತ್ ಟೈಟಾನ್ಸ್ ಎದುರಿನ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಮಂಡಿರಜ್ಜು ನೋವಿಗೆ ಒಳಗಾದ ವಿರಾಟ್ ಕೊಹ್ಲಿ ಸದ್ಯ ಚೇತರಿಸಿಕ ಹಂತದಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆಗೆ ಪೂರ್ಣ ಫಿಟ್ನೆಸ್‌ಗೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಗಾಯದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಅಫ್ಘಾನಿಸ್ತಾನ ಸರಣಿಯಿಂದ ಕೈಬಿಡಲಾಗಿತ್ತು.