ಹ್ಯಾಂಡ್‌ಶೇಕ್ ವಿಚಾರ ಬಿಡಿ, ಇಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ; ಸೂರ್ಯಕುಮಾರ್
T20 World Cup IND vs PAK: ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್‌ಗೂ ಮುನ್ನ ನಡೆದ ಪಹಲ್ಗಾಮ್ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ, ಭಾರತ ಮತ್ತು ಪಾಕಿಸ್ತಾನ ಆಟಗಾರರು ಮೈದಾನದಲ್ಲಿ ಹಸ್ತಲಾಘವ ಮಾಡುವುದನ್ನು ನಿಲ್ಲಿಸಿದ್ದಾರೆ.
Surya Kumar and Salman Ali Agha -
ಕೊಲಂಬೊ, ಫೆ.14: ಭಾನುವಾರ(ಫೆ. 15) ನಡೆಯಲಿರುವ ಟಿ20 ವಿಶ್ವಕಪ್(T20 World Cup IND vs PAK)ನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ(IND vs PAK)ದ ಆಟಗಾರರೊಂದಿಗೆ ಹಸ್ತಲಾಘವ (ಹ್ಯಾಂಡ್‌ಶೇಕ್) ಮಾಡುವರೇ ಇಲ್ಲವೇ ಎಂಬ ಪ್ರಶ್ನೆಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂದೂರದ ನಂತರ ಕಳೆದ ವರ್ಷ ದುಬೈನಲ್ಲಿ ಏಷ್ಯಾಕಪ್ ನಡೆದಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ಆಟಗಾರರು ಕೈಕುಲುಕಿರಲಿಲ್ಲ. ಇದೀಗ ಸೂರ್ಯಕುಮಾರ್ ಯಾದವ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದು ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.
ಪಂದ್ಯದ ಟಾಸ್ ವೇಳೆ ಅಥವಾ ಪಂದ್ಯದ ನಂತರ ಉಭಯ ತಂಡಗಳ ನಾಯಕರು ಕೈ ಕುಲುಕುವರೇ ಎಂಬ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಸೂರ್ಯಕುಮಾರ್, “ಹಸ್ತಲಾಘವದ ವಿಚಾರವನ್ನು ನಾಳೆಗೆ ಬಿಡಿ. ಇಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ, ನಾಳೆ ಏನಾಗುತ್ತದೆ ಎಂದು ಕಾದು ನೋಡಿ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ, ಭಾರತದೊಂದಿಗೆ ಹಸ್ತಲಾಘವ ಮಾಡಲು ಪಾಕಿಸ್ತಾನ ಮುಕ್ತವಾಗಿದೆ ಎಂದು ಹೇಳಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಅಘಾ, ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗೆ ತಮ್ಮ ತಂಡವು ಮುಕ್ತವಾಗಿದೆ. ಕ್ರಿಕೆಟ್ ಉತ್ಸಾಹದಿಂದ ಆಡಬೇಕು. ನನ್ನ ವೈಯಕ್ತಿಕ ಅಭಿಪ್ರಾಯ ಅಪ್ರಸ್ತುತವಾಗಬಹುದು, ಆದರೆ ಕ್ರಿಕೆಟ್ ಯಾವಾಗಲೂ ಆಡುತ್ತಿರುವ ರೀತಿಯಲ್ಲಿಯೇ ಆಡಬೇಕು. ಏನು ಮಾಡಬೇಕೆಂದು ನಿರ್ಧರಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು.
IND vs PAK: ಭಾರತ-ಪಾಕ್ ಪಂದ್ಯಕ್ಕೆ ಏಷ್ಯಾಕಪ್ ಟ್ರೋಫಿ ಕಳ್ಳ ನಖ್ವಿ ಹಾಜರ್!
ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್‌ಗೂ ಮುನ್ನ ನಡೆದ ಪಹಲ್ಗಾಮ್ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ, ಭಾರತ ಮತ್ತು ಪಾಕಿಸ್ತಾನ ಆಟಗಾರರು ಮೈದಾನದಲ್ಲಿ ಹಸ್ತಲಾಘವ ಮಾಡುವುದನ್ನು ನಿಲ್ಲಿಸಿದ್ದಾರೆ.
Colombo, Sri Lanka: When asked whether the Indian team would shake hands with the Pakistan players in tomorrow's match, Indian cricket team's T20 captain Surya Kumar Yadav says, "Wait for 24 hours. We are here to play cricket. We will play good cricket. Have good food and sleep.… pic.twitter.com/r3l8g1CCk1
— ANI (@ANI) February 14, 2026
ಪಾಕ್ ಬಯಸಿದರೆ ಅಭಿಷೇಕ್ ಆಡಿಸುವೆ
ಅಭಿಷೇಕ್ ಶರ್ಮ ಬಗ್ಗೆ ಪಾಕಿಸ್ತಾನ ನಾಯಕ ಮೆಚ್ಚುಗೆಯ ಮಾತುಗಳನ್ನಾಡಿದ ಬೆನ್ನಿಗೆ ಸೂರ್ಯಕುಮಾರ್ ಯಾದವ್ ಅವರು, ಪಾಕಿಸ್ತಾನ ಅಭಿಷೇಕ್ ಶರ್ಮಾ ಆಡಲು ಬಯಸಿದರೆ, ಅವರು ಆಡುತ್ತಾರೆ ಎಂದು ಹೇಳಿದರು. ಹೊಟ್ಟೆನೋವಿನ ಸಮಸ್ಯೆಯಿಂದ ಅಭಿಷೇಕ್ ಕಳೆದ ನಮೀಬಿಯಾ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರು.
ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ?
ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ವರದಿಯಂತೆ ಶೇ. 60ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಫೆಬ್ರವರಿ 15 ರ ಭಾನುವಾರ ಕೊಲಂಬೊದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.