IPL 2026: ಎರಡನೇ ತವರು ರಾಯ್ಪುರದಲ್ಲಿ ಆರ್‌ಸಿಬಿ ಪಂದ್ಯವಾಡಲು ಕಾರಣವೇನು?
ಆರ್‌ಸಿಬಿ ರಾಯ್ಪುರದಲ್ಲಿ ತನ್ನ ಮೊದಲ ಪಂದ್ಯವನ್ನು ಮೇ 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಎರಡನೇ ಹಾಗೂ ಅಂತಿಮ ಪಂದ್ಯವನ್ನು ಮೇ 13 ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರು ಆಡಲಿದೆ. ಆರ್‌ಸಿಬಿ ಫೈನಲ್ ತಲುಪಿದರೆ ಮತ್ತೆ ಚಿನ್ನಸ್ವಾಮಿಯಲ್ಲಿ ಪಂದ್ಯವನ್ನಾಡುವ ಅವಕಾಶ ಸಿಗಲಿದೆ.
m chinnaswamy stadium rcb fans -
ಬೆಂಗಳೂರು, ಎ.25: ಪ್ರಸಕ್ತ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಆಡಿದ ಏಳು ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. ತವರಿನ 7 ಪಂದ್ಯಗಳ ಪೈಕಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಇನ್ನೆರಡು ತವರು ಪಂದ್ಯಗಳು ರಾಯ್ಪುರದಲ್ಲಿ ಆಡಲಿದೆ.
ರಾಯ್ಪುರದಲ್ಲಿ ಆಡಲು ಕಾರಣವೇನು?
ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜೀವಗಳನ್ನು ಬಲಿ ಪಡೆದ ದುರಂತ ಕಾಲ್ತುಳಿತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಲಭ್ಯತೆಯ ಸುತ್ತಲಿನ ತಿಂಗಳುಗಳ ಚರ್ಚೆಗಳು ಮತ್ತು ಅನಿಶ್ಚಿತತೆಯ ಕಾರಣ ಫ್ರಾಂಚೈಸಿ ತಮ್ಮ ತವರು ಮೈದಾನವಾಗಿ ರಾಯ್ಪುರವನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಡಲು ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿತ್ತು. ಆದರೂ ಛತ್ತೀಸ್‌ಗಢ ಕ್ರಿಕೆಟ್ ಸಂಘ ಮತ್ತು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದ ಫ್ರಾಂಚೈಸಿ ತನ್ನ ಮಾತುಗಳಿಗೆ ಬದ್ಧವಾಗಿ 2 ಪಂದ್ಯಗಳನ್ನು ಆಡಲು ತೀರ್ಮಾನಿಸಿತ್ತು. ಹೀಗಾಗಿ ಆರ್‌ಸಿಬಿ ಇಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.
ಆರ್‌ಸಿಬಿ ರಾಯ್ಪುರದಲ್ಲಿ ತನ್ನ ಮೊದಲ ಪಂದ್ಯವನ್ನು ಮೇ 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಎರಡನೇ ಹಾಗೂ ಅಂತಿಮ ಪಂದ್ಯವನ್ನು ಮೇ 13 ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರು ಆಡಲಿದೆ. ಆರ್‌ಸಿಬಿ ಫೈನಲ್ ತಲುಪಿದರೆ ಮತ್ತೆ ಚಿನ್ನಸ್ವಾಮಿಯಲ್ಲಿ ಪಂದ್ಯವನ್ನಾಡುವ ಅವಕಾಶ ಸಿಗಲಿದೆ. ಇನ್ನುಳಿದ 7 ಪಂದ್ಯಗಳ ಪೈಕಿ ಕನಿಷ್ಠ 4 ಪಂದ್ಯ ಗೆದ್ದರೂ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.
5️⃣ games. 5️⃣ full houses and relentless support at ನಮ್ಮ Chinnaswamy. 🫶
— Royal Challengers Bengaluru (@RCBTweets) April 25, 2026
This isn't a goodbye post, this is a 'We love you and we’re grateful’ post. ❤️#PlayBold #ನಮ್ಮRCB #IPL2026 pic.twitter.com/w73fqUHuw4
IPL 2026 Points Table: ಅಂಕಪಟ್ಟಿಯಲ್ಲಿ ಏರಿಕೆ ಕಂಡ ಆರ್‌ಸಿಬಿ
ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ ಸುರಿಮಳೆಗೈದ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಆರ್‌ಸಿಬಿಗೆ 5 ವಿಕೆಟ್ ಅಂತರದ ದೊಡ್ಡ ಗೆಲುವು ತಂದುಕೊಟ್ಟರು. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಗುಜರಾತ್, 3 ವಿಕೆಟ್‌ಗೆ 205 ರನ್ ಬಾರಿಸಿತು. ಆದರೆ ಆರ್‌ಸಿಬಿ ಅಬ್ಬರದ ಮುಂದೆ ಈ ಮೊತ್ತ ಯಾವುದಕ್ಕೂ ಸಾಕಾಗಲಿಲ್ಲ. 18.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸಿ ಗೆಲುವು ಸಾಧಿಸಿತು.
IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು
ಸಂಕ್ಷಿಪ್ತ ಸ್ಕೋರ್: ಗುಜರಾತ್ 20 ಓವರಲ್ಲಿ 205/3 (ಸಾಯಿ ಸುದರ್ಶನ್ 100, ಗಿಲ್ 32, ಭುವನೇಶ್ವರ್ ಕುಮಾರ್ 1-31), ಆರ್‌ಸಿಬಿ 18.5 ಓವರ್‌ಗಳಲ್ಲಿ 206/5 (ವಿರಾಟ್ ಕೊಹ್ಲಿ 81, ಪಡಿಕ್ಕಲ್ 55, ರಶೀದ್ ಖಾನ್ 2-49). ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.