ಅಕ್ಷಯ ತೃತೀಯಕ್ಕೆ ಚಿನ್ನ ಕೊಳ್ಳಲು ಸಾಧ್ಯವಾಗದಿದ್ದರೆ ಇವುಗಳನ್ನು ಖರೀದಿಸಿ
Akshaya Tritiya 2025: ಅಕ್ಷಯ ತೃತೀಯವು ಒಳ್ಳೆಯ ಅದೃಷ್ಟ (Good Luck) ಮತ್ತು ಯಶಸ್ಸನ್ನು (Success) ತರುತ್ತದೆ ಎಂಬ ನಂಬಿಕೆಯಿದೆ. ಈ ದಿನ ಬಹಳಷ್ಟು ಜನರು ಚಿನ್ನವನ್ನು ಖರೀದಿಸುತ್ತಾರೆ, ಏಕೆಂದರೆ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಸಂಪತ್ತು ಮತ್ತು ಭವಿಷ್ಯದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ಭಾವಿಸಲಾಗುತ್ತದೆ. ಈ ದಿನ ಖರೀದಿಸಿದ ಚಿನ್ನವು ಎಂದಿಗೂ ಕ್ಷೀಣಿಸದೆ ಮೌಲ್ಯದಲ್ಲಿ ನಿರಂತರವಾಗಿ ಬೆಳೆಯುತ್ತದೆ ಎಂಬ ನಂಬಿಕೆಯೂ ಇದೆ. ಒಂದು ವೇಳೆ ಚಿನ್ನ ಖರೀದಿಸಲು ಸಾಧ್ಯವಾಗದೇ ಇದ್ದರೆ ಏನು ಮಾಡಬೇಕು? ಬೇರೆ ಯಾವ ವಸ್ತುಗಳನ್ನು ಖರೀದಿ ಮಾಡಿದರೆ ಉತ್ತಮ?