ಮಹೇಶ್ ಬಾಬುವಿಗೆ ಸಂಕಷ್ಟ ತಂದಿಟ್ಟ ಜಾಹೀರಾತು
ಹೈದರಾಬಾದ್ನ ವೈದ್ಯೆಯೊಬ್ಬರು ಸಾಯಿ ಸೂರ್ಯ ಡೆವಲಪರ್ಸ್ ವಿರುದ್ಧ 34.8 ಲಕ್ಷ ರೂ. ವಂಚನೆ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಟ ಮಹೇಶ್ ಬಾಬು ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ (Supreme Court) ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಆರಂಭಿಸಿದೆ. ಕೇಂದ್ರ ಸರ್ಕಾರವು ಮಧ್ಯಂತರ ಆದೇಶಗಳನ್ನು ನೀಡುವ ಉದ್ದೇಶಕ್ಕಾಗಿ ವಿಚಾರಣೆಯನ್ನು ಮೂರು ಪ್ರಮುಖ ವಿಷಯಗಳಿಗೆ ಸೀಮಿತಗೊಳಿಸುವಂತೆ ಕೇಂದ್ರ ಸರ್ಕಾರವು ನ್ಯಾಯಪೀಠವನ್ನು ಒತ್ತಾಯಿಸಿದೆ.
ಢೋಂಗಿ ಜಾತ್ಯತೀತವಾದಿಗಳು ದೇಶದ ಬಹುಸಂಖ್ಯಾತರ ಪರ ನಿಲ್ಲುವ ಯಾವುದೇ ಲಕ್ಷಣ ಕಾಣು ವುದೇ ಇಲ್ಲ. ತಮ್ಮ ಮತಬ್ಯಾಂಕ್ ಅನ್ನು ಕಾಪಾಡುವ ಸಲುವಾಗಿ ಹಿಂದೂಗಳ ಹಿತಾಸಕ್ತಿಯ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಮನಸ್ಥಿತಿ ಇವರಲ್ಲಿ ದಟ್ಟವಾಗಿದೆ. ಹಿಂದೂಗಳನ್ನು ಕಾಪಾಡುವ ಅಥವಾ ಅವರ ರಕ್ಷಣೆಗೆ ನಿಲ್ಲುವ ಪ್ರಜ್ಞಾವಂತ ವಿರೋಧ ಪಕ್ಷ ಇಂದು ಮರೆಯಾಗಿದೆ.
Nishikant Dubey Controversy: ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ಬಳಿಕ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಭಾನುವಾರ ಬೆಳಗ್ಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್.ವೈ.ಖುರೇಶಿ ಅವರೊಂದಿಗೆ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಾಗ್ವಾದ ನಡೆಸಿದ್ದಾರೆ.
Waqf Amendment Act 2025: ಬಹು ಚರ್ಚಿತ ಮತ್ತು ವಿವಾದಿತ 2025 ರ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ. ಇಂದು ನಡೆದ ವಿಚಾರಣೆ ವೇಳೆ ಕೇಂದ್ರವು ಮುಸ್ಲಿಮೇತರರನ್ನು ಕೇಂದ್ರ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ನೇಮಿಸಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ದೇಶಾದ್ಯಂತ ಕಾನೂನು ಜಾರಿಗೆ ಬಂದಿದೆ. ಜತೆಗೆ ಕೆಲವು ರಾಜ್ಯಗಳು ತಾವು ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದಿವೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲಎಂದು ಹೇಳಿದೆ.
Pralhad Joshi: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ. ವಕ್ಫ್ ಆಸ್ತಿ ಸಂರಕ್ಷಣೆಗಾಗಿಯೇ ಎಂಬುದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲೆಂದೇ ಜಾರಿ ತಂದಿದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
West Bengal violence: ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯ ನಿಮ್ಟಿಟಾ ಮತ್ತು ಸುಟಿಯಲ್ಲಿ ಶುಕ್ರವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯ ನಂತರ ಉದ್ವಿಗ್ನತೆ ಉಂಟಾಗಿತ್ತು. ನಿಮ್ಟಿಟಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಳ ಕಾಲ ರೈಲ್ವೆ ಹಳಿಗಳನ್ನು ತಡೆದು ರೈಲ್ವೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೂ ಕಲ್ಲು ತೂರಾಟ ನಡೆಸಿದ್ದು, ಅವರಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಕಳೆದ 6 ತಿಂಗಳಿನಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ದೊರೆತಿದೆ. ತಮಿಳುನಾಡಿನ ಇಡೀ ತಿರುಚೆಂದೂರೈ ಗ್ರಾಮವನ್ನು ವಕ್ಫ್ ಆಸ್ತಿಯೆಂದು ಘೋಷಿಸಲಾಗಿತ್ತು; ಗ್ರಾಮದ 480 ಎಕರೆ ಜಮೀನು ಮತ್ತು 1500 ವರ್ಷದ ಇತಿಹಾಸವಿರುವ ಚಂದ್ರಶೇಖರ ಸ್ವಾಮಿ ದೇವಾಲಯವೂ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯೆಂದು ನಿರ್ಣಯವಾಗಿತ್ತು.
Ravi Shankar Prasad:ಭಾರೀ ವಿವಾದಗಳ ನಡುವೆಯೇ ವಕ್ಫ್ ಮಸೂದೆ ಸಂಸತ್‌ನಲ್ಲಿ ನಿನ್ನೆ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಇದನ್ನು ಮುಸ್ಲಿಂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಈ ಬಗ್ಗೆ ಮಾಜಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಸ್ಪಷ್ಟನೆ ಕೊಟ್ಟಿದ್ದು, ಈ ಮಸೂದಯಿಂದ ದೇಶದ ಯಾವುದೇ ಮಸೀದಿಗೆ ಹಾನಿಯಾಗಲ್ಲ ಎಂದಿದ್ದಾರೆ.
Radha Mohan Das Agarwal: ಸುದೀರ್ಘ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇದೇ ವೇಳೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್ ಅಗರ್ವಾಲ್ ರಾಜ್ಯದಲ್ಲಿ ಯಾವ ಯಾವ ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ಪಟ್ಟಿ ಮಂಡಿಸಿದ್ದಾರೆ.
ವಕ್ಫ್ ಕಾಯ್ದೆಗೆ(Waqf Bill) ತಿದ್ದುಪಡಿಯಿಂದ ಬಡ ಮತ್ತು ಪಸ್ಮಾಂಡ ಮುಸ್ಲಿಮರಿಗೆ ಅನುಕೂಲವಾಗುತ್ತದೆ. ಇದು ಅವರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ದಾರಾ ಶಿಕೋಹ್ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ವಿರೋಧಿಸಿದವರನ್ನು ಟೀಕಿಸುತ್ತಿರುವವರು ಹುಸಿ-ಜಾತ್ಯತೀತರು. ಅವರು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
Waqf Amendment Bill: ಸಂಸತ್ತಿನ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆ 2025ರ ವಿರುದ್ಧ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್ ಶುಕ್ರವಾರ ಹೇಳಿದೆ. ಮಸೂದೆ ಅಂಗೀಕಾರಗೊಂಡಿದ್ದು, ಭಾರತೀಯ ಸಂವಿಧಾನದ ಮೇಲೆ ನರೇಂದ್ರ ಮೋದಿ ಸರ್ಕಾರದ ದಾಳಿ" ಎಂದು ಕರೆದಿರುವ ಕಾಂಗೆಸ್ ರಾಷ್ಟ್ರೀಯ ವಕ್ತಾರ ಜೈರಾಂ ರಮೇಶ್, ಈ ಮಸೂದೆಯ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
Waqf Amendment Bill: ಭಾರೀ ವಿವಾದಕ್ಕೀಡಾಗಿರುವ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ, ಏ. 2ರಂದು ಲೋಕಸಭೆಯಲ್ಲಿ ಮಂಡಿಸಿತು. ಅಲ್ಪಸಂಖ್ಯಾತರ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು. ಆದರೆ, ವಿಪಕ್ಷಗಳಿಂದ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಮಧ್ಯರಾತ್ರಿಯವರೆಗೆ ಈ ಕುರಿತಂತೆ ಪರ ವಿರೋಧ ಚರ್ಚೆಗಳು ನಡೆದವು. ಈ ಮಸೂದೆಯು ಕಾಯ್ದೆಯಾಗಿ ಬಂದಾಗ ಇದಕ್ಕೆ ಉಮೀದ್ ಎಂದು ಹೆಸರಿಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
Waqf Bill: ಸಂಸದ ಓವೈಸಿ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ( Tejaswi Surya) ಅವರು ಹಿಂದುಗಳಿಗೆ ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಬೇಕಾಗಿಲ್ಲ. ಇದು ನನ್ನ ವಚನ. ನಿಮ್ಮ ಮೂಲಕ ಎಲ್ಲ ಮುಸ್ಲಿಂ ಸಮುದಾಯಕ್ಕೆ ನಾನು ಹೇಳ ಬಯಸುತ್ತೇನೆ. ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಹಿಂದೂಗಳಿಗೆ ಬೇಕಾಗಿಲ್ಲ ಎಂದರು.
Waqf Bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಲು ತಮ್ಮ ಪಕ್ಷ ಬೆಂಬಲ ನೀಡಿದ್ದನ್ನು ಖಂಡಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ)ದ ಇಬ್ಬರು ಪ್ರಮುಖ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವುದನ್ನು ಯೋಚಿಸಿ ನಾನು ನಿರಾಶನಾಗಿದ್ದೇನೆ” ಎಂದು ಹಿರಿಯ ಜೆಡಿ(ಯು) ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ, ನಿತೀಶ್ ಕುಮಾರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
PM Narendra Modi:ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ, ಪ್ರಧಾನಿ ಮೋದಿ, ಸಂಸತ್ತಿನ ಎರಡೂ ಸದನಗಳಿಂದ ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯ ಅಂಗೀಕಾರವು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಇದು ವಿಶೇಷವಾಗಿ ದೀರ್ಘಕಾಲದಿಂದ ಅವಕಾಶ ವಂಚಿತರಿಗೆ ಸಹಾಯ ಮಾಡುತ್ತದೆ ಎಂದರು.