ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಈ ಐದು ಫೋಟೋಗಳನ್ನು ಮನೆಯಲ್ಲಿ ಎಂದಿಗೂ ಇಡಬೇಡಿ

ಸಾಮಾನ್ಯವಾಗಿ ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಇರಿಸಬಾರದು ಎನ್ನುತ್ತಾರೆ ಹಿರಿಯರು. ಯಾಕೆಂದರೆ ನೋಡಲು ಸುಂದರ, ಆಕರ್ಷಕವಾಗಿದ್ದರೂ ಅವುಗಳು ಮನೆಯ ವಾಸ್ತು ದೋಷಕ್ಕೆ ಕಾರಣವಾಗಬಹುದು. ಮನೆಯಲ್ಲಿ ಎಂದಿಗೂ ಇರಿಸಬಾರದ ಐದು ಫೋಟೋಗಳ ಕುರಿತು ವಾಸ್ತು ಶಾಸ್ತ್ರ (Vastu Tips) ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ  ಫೋಟೋಗಳನ್ನು ಮನೆಯಲ್ಲಿ ಇರಿಸಬೇಡಿ

ಯುದ್ಧದ ದೃಶ್ಯ, ನಟರಾಜ ಪ್ರತಿಮೆಯಂತಹ ಚಿತ್ರಗಳನ್ನು ಮನೆಯಲ್ಲಿ ಇರಿಸಬಾರದು ಎನ್ನುತ್ತದೆ ವಾಸ್ತು (Vastu Tips) ಶಾಸ್ತ್ರ. ಯಾಕೆಂದರೆ ಇವು ಮನೆಗೆ (Vastu for home) ನಕಾರಾತ್ಮಕ ಶಕ್ತಿಯನ್ನು (Negative energy) ಆಕರ್ಷಿಸುತ್ತದೆ. ಮನೆಯ ಶಾಂತಿ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ನಮಗಿಷ್ಟವೆಂದೋ ಅಥವಾ ಮನೆಯ ಅಲಂಕಾರಕ್ಕೆ ಇರಲಿ ಎಂದು ನಾವು ಖರೀದಿ ಮಾಡಿ ತರುವ ದುಬಾರಿ ಚಿತ್ರಗಳು ಮನೆಯ ವಾಸ್ತು ಮೇಲೆ ಪರಿಣಾಮ ಬಿರುವುದು ಎಂಬುದು ನನಪಿರಲಿ. ತಿಳಿದೋ, ತಿಳಿಯದೆಯೋ ನಾವು ಮನೆಗೆ ತರುವ ಕೆಲವು ಚಿತ್ರಗಳೊಂದಿಗೆ ನಾವು ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವುದು ಒಳ್ಳೆಯದು.

ಮನೆಯಲ್ಲಿ ಇಡಲೇಬಾರದ ಐದು ಚಿತ್ರಗಳ ಬಗ್ಗೆ ವಾಸ್ತು ಶಾಸ್ತ್ರವು ಹೇಳಿದೆ. ಅವುಗಳು ಮನೆಯ ಮೇಲೆ ಬೀಳುವ ಪರಿಣಾಮ ಏನು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಉತ್ತಮ.

bo

ಮುಳುಗುವ ದೋಣಿ ಅಥವಾ ಹಡಗಿನ ಚಿತ್ರವನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಅಂತಹ ಚಿತ್ರಗಳು ಮನೆಯಲ್ಲಿ ವೈಫಲ್ಯ ಮತ್ತು ಅಸ್ಥಿರತೆಯನ್ನು ಉಂಟು ಮಾಡುತ್ತದೆ ಎನ್ನುತ್ತದೆ ವಾಸ್ತು. ಇದು ಮನೆ ಮಂದಿಯ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಆರ್ಥಿಕ ನಷ್ಟ, ವ್ಯವಹಾರದಲ್ಲಿ ಹಿನ್ನಡೆಗೆ ಕಾರಣವಾಗುತ್ತದೆ.

ತಾಂಡವ ನೃತ್ಯವನ್ನು ಪ್ರದರ್ಶಿಸುವ ಶಿವನ ಉಗ್ರ ರೂಪವಾದ ನಟರಾಜ ವಿನಾಶದ ಪ್ರತೀಕ. ಹೀಗಾಗಿ ಮನೆಯಲ್ಲಿ ಇಂತಹ ಚಿತ್ರವನ್ನು ಇರಿಸಬಾರದು ಎನ್ನುತ್ತದೆ ವಾಸ್ತು. ಆಧ್ಯಾತ್ಮಿಕವಾಗಿ ಇದು ಮಹತ್ವ ಪಡೆದಿದ್ದರೂ ಇದು ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸಿ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಸಾಧ್ಯತೆ ಇದೆ.

wal

ಪ್ರೀತಿಯ ಸಂಕೇತವಾದ ಗುಲಾಬಿ ಗಿಡಗಳಲ್ಲಿ ಮುಳ್ಳುಗಳಿರುತ್ತವೆ. ಇದು ನಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಇದರ ಚಿತ್ರಗಳನ್ನು ಮನೆಯೊಳಗೆ ಇಡುವುದರಿಂದ ಮನೆಯ ವಾಸ್ತು ವಿನ ಮೇಲೆ ಪರಿಣಾಮ ಬೀರುತ್ತದೆ. ಇದು ವಯಕ್ತಿಕ, ವೃತ್ತಿ ಜೀವನದಲ್ಲಿ ತೊಂದರೆಯನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: Vastu Tips: ನಕಾರಾತ್ಮಕತೆಯನ್ನು ದೂರ ಮಾಡುವ ಈ ಅಲಂಕಾರಿಕ ವಸ್ತುಗಳನ್ನು ಎಲ್ಲಿಡಬೇಕು ಗೊತ್ತೆ?

ಮಹಾಭಾರತವಾಗಿರಲಿ ಅಥವಾ ಇತರ ಯಾವುದೇ ಹಿಂಸೆ, ವಿನಾಶ ಮತ್ತು ನಷ್ಟವನ್ನು ಪ್ರತಿಬಿಂಬಿಸುವ ಯುದ್ಧದ ಚಿತ್ರಗಳನ್ನು ಮನೆಯಲ್ಲಿ ಇಡಕೂಡದು. ಇದು ಮನೆಯಲ್ಲಿ ಜಗಳ ಉಂಟು ಮಾಡುವಂತೆ ಮಾಡಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಅಳುವ ಮಗುವಿನ ಚಿತ್ರವನ್ನು ಮನೆಯಲ್ಲಿ ಇರಿಸಬಾರದು. ಇದು ಭಾವನಾತ್ಮಕ ಒತ್ತಡವನ್ನು ಉಂಟು ಮಾಡುತ್ತದೆ. ಅಳುವ ಮಗುವಿನ ಚಿತ್ರ ದುಃಖ, ಉದ್ವೇಗ ಮತ್ತು ಬಡತನವನ್ನು ಮನೆಗೆ ತರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.