Vastu Tips: ಮನೆಯಲ್ಲಿ ಈ ವಸ್ತುಗಳು ಖಾಲಿಯಾದ್ರೆ ಆರ್ಥಿಕ ಸಂಕಷ್ಟ ಪಕ್ಕಾ!
ವಾಸ್ತುಶಾಸ್ತ್ರದ ಕೆಲವು ಸರಳ ನಿಯಮಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸಿಕೊಳ್ಳಬಹುದು. ವಿಶೇಷವಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳು ಯಾವತ್ತೂ ಖಾಲಿಯಾಗಬಾರದು ಎಂದು ಶಾಸ್ತ್ರಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಆ ವಸ್ತುಗಳು ಖಾಲಿಯಾಗಿದ್ದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು...? ಇದರ ಬಗ್ಗೆ ವಾಸ್ತು ಸಲಹೆಗಳು ಏನು- ಎಂಬುದನ್ನು ತಿಳಿದುಕೊಳ್ಳೋಣ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ವಾಸ್ತುಶಾಸ್ತ್ರದ (Vastu Shastra) ಪ್ರಕಾರ ಮನೆ ಅಥವಾ ಕೆಲಸ ಮಾಡುವ ಸ್ಥಳ ಸರಿ ಇದ್ದರೆ ಜೀವನದಲ್ಲೂ ಶಾಂತಿ, ಸಮೃದ್ಧಿ ಹಾಗೂ ಆರ್ಥಿಕ ಸ್ಥಿರತೆ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ. ನಮ್ಮ ದಿನನಿತ್ಯದ ಜೀವನದಲ್ಲಿ ವಾಸ್ತುಶಾಸ್ತ್ರದ ಪಾತ್ರ ಬಹಳ ಮುಖ್ಯವಾಗಿದ್ದು, ಇದರಲ್ಲಿ ಸಣ್ಣ ತಪ್ಪುಗಳೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ನಮಗೆ ತಿಳಿಯದೇ ಮಾಡುವ ತಪ್ಪುಗಳು ವಾಸ್ತುದೋಷವಾಗಿ ಪರಿವರ್ತನೆಗೊಂಡು ಹಣಕಾಸಿನ ಸಂಕಷ್ಟ, ಮನಸ್ಸಿನ ಅಶಾಂತಿ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶಕ್ಕೆ ಕಾರಣವಾಗಬಹುದು.
ವಾಸ್ತುಶಾಸ್ತ್ರದ ಕೆಲವು ಸರಳ ನಿಯಮಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸಿಕೊಳ್ಳಬಹುದು. ವಿಶೇಷವಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳು ಯಾವತ್ತೂ ಖಾಲಿಯಾಗಬಾರದು ಎಂದು ಶಾಸ್ತ್ರಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಆ ವಸ್ತುಗಳು ಖಾಲಿಯಾಗಿದ್ದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು...? ಇದರ ಬಗ್ಗೆ ವಾಸ್ತು ಸಲಹೆಗಳು(Vastu Tips) ಏನು...? ಎಂಬುದನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಹಣ ಇಡುವ ಸ್ಥಳ. ವಾಸ್ತುಶಾಸ್ತ್ರದ ಪ್ರಕಾರ ತಿಜೋರಿ ಹಾಗೂ ಪರ್ಸ್ ಯಾವತ್ತೂ ಖಾಲಿಯಾಗಿರಬಾರದು. ಸಂಪೂರ್ಣವಾಗಿ ಹಣವಿಲ್ಲದೇ ಖಾಲಿ ಪರ್ಸ್ ಅಥವಾ ತಿಜೋರಿಯನ್ನು ಇಡುವುದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯ ಕೃಪೆ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಯಾವತ್ತೂ ಸ್ವಲ್ಪವಾದರೂ ಹಣವನ್ನು ಪರ್ಸ್‌ನಲ್ಲಿ ಇರಿಸಿಕೊಳ್ಳುವುದು ಶುಭಕರ. ಹಣವೃದ್ಧಿಗಾಗಿ ಕೆಂಪು ಬಟ್ಟೆಯಲ್ಲಿ ಸ್ವಲ್ಪ ಹಣವನ್ನು ಸುತ್ತಿ, ಗೋಮತಿ ಚಕ್ರ ಹಾಗೂ ಅರಿಶಿನ ಸೇರಿಸಿ ಲಕ್ಷ್ಮೀದೇವಿಯ ಪಾದದ ಬಳಿ ಇಟ್ಟು ಪೂಜೆ ಮಾಡುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
Astro Tips: ಗಣೀಶನ ಪ್ರಿಯವಾದ ಬುಧವಾರದ ಪೂಜೆಯಲ್ಲಿ ತಪ್ಪಿಯೂ ಅವನಿಗೆ ಇಷ್ಟವಿಲ್ಲದ ಈ ವಸ್ತುಗಳನ್ನು ಅರ್ಪಿಸಬೇಡಿ
ಎರಡನೆಯದಾಗಿ ಬಾತ್ರೂಮ್‌ನಲ್ಲಿರುವ ಬಕೆಟ್. ಸ್ನಾನ ಮುಗಿಸಿ ಹೊರಬರುವಾಗ ಬಕೆಟ್ ಅನ್ನು ಸಂಪೂರ್ಣ ಖಾಲಿ ಇಡಬಾರದು ಎಂದು ವಾಸ್ತುಶಾಸ್ತ್ರ ಎಚ್ಚರಿಸುತ್ತದೆ. ಖಾಲಿ ಬಕೆಟ್ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ. ಜೊತೆಗೆ ಒಡೆದ ಬಕೆಟ್ ಅಥವಾ ಕಪ್ಪು ಬಣ್ಣದ ಬಕೆಟ್ ಬಳಸುವುದನ್ನು ಕೂಡ ತಪ್ಪಿಸಬೇಕು. ಈ ರೀತಿಯ ನಿರ್ಲಕ್ಷ್ಯದಿಂದ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು.
ಮೂರನೆಯದಾಗಿ ದೇವರ ಕೋಣೆಯಲ್ಲಿರುವ ಕಲಶ. ಮನೆಯಲ್ಲಿನ ಅತ್ಯಂತ ಪವಿತ್ರ ಸ್ಥಳ ದೇವರ ಕೋಣೆ ಆಗಿದ್ದು, ಅಲ್ಲಿ ಕಲಶವನ್ನು ನೀರಿನಿಂದ ತುಂಬಿ ಇಡುವುದು ಅತ್ಯಂತ ಮುಖ್ಯ. ಕಲಶ ಖಾಲಿಯಾಗಿದ್ದರೆ ಅಶುಭ ಪರಿಣಾಮಗಳು ಉಂಟಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಗಂಗಾಜಲವನ್ನು ಕಲಶದಲ್ಲಿ ತುಂಬಿ, ತುಳಸಿಯನ್ನು ಸೇರಿಸುವುದರಿಂದ ಲಕ್ಷ್ಮೀದೇವಿಯ ಕೃಪೆ ಲಭಿಸಿ ಮನೆಯವರ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ನಾಲ್ಕನೆಯದು ಅಡುಗೆ ಮನೆಯ ಕಣಜ ಅಥವಾ ಧಾನ್ಯ ಇಡುವ ಪಾತ್ರೆಗಳು. ಅನ್ನಪೂರ್ಣೇಶ್ವರಿ ದೇವಿಯ ಕೃಪೆ ಪಡೆಯಲು ಅಕ್ಕಿ ಹಾಗೂ ದವಸ ಧಾನ್ಯಗಳ ಪಾತ್ರೆಗಳು ಯಾವತ್ತೂ ಖಾಲಿಯಾಗಬಾರದು. ಆಹಾರಕ್ಕೆ ಗೌರವ ನೀಡಿದರೆ ಮಾತ್ರ ಜೀವನದಲ್ಲಿ ಯಾವ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ. ಧಾನ್ಯಗಳ ಕೊರತೆ ಮನೆಯಲ್ಲಿ ಆರ್ಥಿಕ ಕುಸಿತದ ಸೂಚನೆ ಎನ್ನಲಾಗುತ್ತದೆ.
ಹೀಗಾಗಿ ವಾಸ್ತುಶಾಸ್ತ್ರದ ಪ್ರಕಾರ ಹೇಳಲಾದ ಈ ಸರಳ ಆದರೆ ಮಹತ್ವದ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸದಾ ಸಮೃದ್ಧಿ, ಶಾಂತಿ ಮತ್ತು ಹಣಕಾಸಿನ ಸ್ಥಿರತೆ ಕಾಪಾಡಿಕೊಳ್ಳಬಹುದು.