ಏಜ್ ಇಸ್ ಜಸ್ಟ್ ಎ ನಂಬರ್: 68 ವರ್ಷದ ಅಜ್ಜಿಯ ಸ್ಕೇಟಿಂಗ್ ನೋಡಿದ್ರೆ ನೀವೂ ಬೆರಗಾಗ್ತೀರಾ; ವಿಡಿಯೊ ಇಲ್ಲಿದೆ
68 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಸ್ಕೇಟಿಂಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಯಾವುದೇ ಭಯ ಇಲ್ಲದೆ ಬಹಳಷ್ಟು ಆತ್ಮವಿಶ್ವಾಸದಿಂದ ಸ್ಕೇಟ್ ಬೋರ್ಡ್ ಮೂಲಕ ಓಡಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
68 ವರ್ಷದ ಅಜ್ಜಿಯ ಸ್ಕೇಟಿಂಗ್ -
ಬೀಜಿಂಗ್, ಡಿ. 16: ವಯಸ್ಸು ಅನ್ನೋದು ಕೇವಲ ಸಂಖ್ಯೆ ಅಷ್ಟೇ. ಆದರೆ ಸಾಧಿಸುವ ಛಲ ಇದ್ದರೆ ಯಾವುದನ್ನು ಬೇಕಾದರೂ ಯಶಸ್ಸು ಗಳಿಸಬಹುದು. ಅದರಲ್ಲೂ ಯಾವುದೇ ವಿಚಾರದಲ್ಲಿ ನಮಗೆ ಆಸಕ್ತಿ ಇದ್ದರೆ ಯಾವಾಗ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ವಿಡಿಯೊವೇ ಸಾಕ್ಷಿ. ಹೌದು, 68 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಸ್ಕೇಟ್ ಬೋರ್ಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಯಾವುದೇ ಭಯ ಇಲ್ಲದೆ ಬಹಳಷ್ಟು ಆತ್ಮ ವಿಶ್ವಾಸದಿಂದ ಸ್ಕೇಟಿಂಗ್ ಮಾಡಿದ್ದು ನೆಟ್ಟಿಗರು ಅವರ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಚೀನಾದ 68 ವರ್ಷದ ಅಜ್ಜಿಯೊಬ್ಬರು ತಮ್ಮ ಸ್ಕೇಟ್ ಬೋರ್ಡಿಂಗ್ ಹವ್ಯಾಸ ಮೂಲಕ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗ್ರಾಂಡ್ಮಾ ಲಿಯು ಎಂದೇ ಅವರು ಜನಪ್ರಿಯ. ಇವರು ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಚೆಂಗ್ಡು ನಗರದ ನಿವಾಸಿ. ಅವರು ಸಾರ್ವಜನಿಕ ಸ್ಥಳದಲ್ಲೇ ಸ್ಕೇಟ್‌ಬೋರ್ಡ್ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ಸವಾರಿ ಮಾಡುವ ದೃಶ್ಯ ಕಂಡು ಬಂದಿದೆ. ಈ ವಯಸ್ಸಿನಲ್ಲಿ ಅವರು ತೋರಿಸುತ್ತಿರುವ ಕೌಶಲ್ಯವು ವೀಕ್ಷಕರನ್ನೇ ಬೆರಗುಗೊಳಿಸಿದೆ.
ವಿಡಿಯೊ ನೋಡಿ:
ಸ್ಕೇಟ್ ಬೋರ್ಡಿಂಗ್ ಯುವ ಜನತೆಗೆ ಸೀಮಿತವಲ್ಲ ಎಂದು ಈ ಅಜ್ಜಿ ತಿಳಿಸಿಕೊಟ್ಟಿದ್ದಾರೆ. ಜೀವನದಲ್ಲಿ ಹೊಸ ವಿಚಾರಗಳನ್ನು ಕಲಿಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬ ದೊಡ್ಡ ಸಂದೇಸ ರವಾನಿಸಿದ್ದಾರೆ ಎಂದು ನೆಟ್ಟಿಗರು ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಸಾವು
ಸದ್ಯ ಹಲವರು ಅಜ್ಜಿಯ ಧೈರ್ಯದ ನಡೆಗೆ ಮೆಚ್ಚುಗೆ ತಿಳಿಸಿದ್ದಾರೆ. ಬಳಕೆದಾರರು ಈ ಬಗ್ಗೆ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇವರ ಜೀವನೋತ್ಸಾಹವು ಅನೇಕರಿಗೆ ಪ್ರೇರಣೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ವಯಸ್ಸು ಎಂಬುದು ಬರೀ ಸಂಖ್ಯೆ...ಛಲ ಇದ್ದರೆ ಎಲ್ಲವೂ ಸಾಧ್ಯ. ನಿಮ್ಮ ಜೀವನೋತ್ಸಾಹಕ್ಕೆ ಮೆಚ್ಚಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.