ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರ್ಪೋರೇಟ್ ಗುಲಾಮಗಿರಿ: ಕೆಲಸದ ಒತ್ತಡದಿಂದ ಮಗುವಿಗೆ ಸಮಯ ನೀಡಲಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ ತಂದೆ

Viral News: ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಕೆಲಸದಿಂದಾಗಿ ಮಗುವಿಗೆ ಸಮಯ ನೀಡಲಾಗದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ತಮ್ಮ ಕೆಲಸದ ವೇಳಾಪಟ್ಟಿಯನ್ನು ಕಾರ್ಪೊರೇಟ್ ಗುಲಾಮಗಿರಿ ಎಂದು ಕರೆದಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕೆಲಸದ ಒತ್ತಡ ಬಗ್ಗೆ ಬೇಸರ ಹೊರಹಾಕಿದ ಬೆಂಗಳೂರು ಕಾರ್ಪೋರೇಟ್ ಉದ್ಯೋಗಿ

ಸಾಂದರ್ಭಿಕ ಚಿತ್ರ -

Profile
Pushpa Kumari Apr 14, 2026 11:17 PM

ಬೆಂಗಳೂರು, ಏ. 14: ಇತ್ತೀಚೆಗೆ ಕೆಲಸದ ಒತ್ತಡವನ್ನು ಅನೇಕರು ಎದುರಿಸುತ್ತಿದ್ದಾರೆ. ಇದರಿಂದಾಗಿ ವೈಯಕ್ತಿಕ ಕೆಲಸ ಹಾಗೂ ಕುಟುಂಬಕ್ಕೆ ವ್ಯಯಿಸಲು ಸಮಯ ಸಿಗದೇ ಪರದಾಡುವವರು ಅನೇಕರು ಇದ್ದಾರೆ‌. ಈ ನಡುವೆ ಕಾರ್ಪೋರೇಟ್ ಉದ್ಯೋಗಿಯೊಬ್ಬರು ತಮ್ಮ ಕೆಲಸದಿಂದಾಗಿ ಮಗುವಿಗೆ ಸಮಯ ನೀಡಲಾಗದೆ ಇರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ತಮ್ಮ ಕೆಲಸದ ವೇಳಾ ಪಟ್ಟಿಯನ್ನು ಕಾರ್ಪೋರೇಟ್ ಗುಲಾಮಗಿರಿ ಎಂದು ಕರೆದಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಬೆಂಗಳೂರಿನ ವ್ಯಕ್ತಿಯೊಬ್ಬರು ಭಾವನಾತ್ಮಕ ರೆಡ್ಡಿಟ್ ಪೋಸ್ಟ್‌ನಲ್ಲಿ ಈ ಅನುಭವ ಶೇರ್ ಮಾಡಿದ್ದಾರೆ. ಬೆಳಗ್ಗೆ 11 ರಿಂದ ರಾತ್ರಿ 11ರವರೆಗಿನ ತನ್ನ ಕಠಿಣ ಕೆಲಸದ ದಿನಚರಿಯು ಒಂದು ವರ್ಷದ ಮಗುವಿನೊಂದಿಗಿನ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ. ತಮ್ಮ ಒಂದು ವರ್ಷದ ಮಗನೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ

ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಹೈರಾಣ

ʼʼಒಂದು ವರ್ಷದ ಮಗ ತುಂಬಾ ಉತ್ಸಾಹದಿಂದ ನನ್ನ ಬಳಿಗೆ ತೆವಳುತ್ತಾನೆ. ನಾನು ಆತನನ್ನು ಎತ್ತಿಕೊಳ್ಳುತ್ತೇನೆ ಅಥವಾ ಅವನೊಂದಿಗೆ ಆಟವಾಡುತ್ತೇನೆ ಎಂದು ಆಶಿಸುತ್ತಾನೆ. ಆದರೆ ಹೆಚ್ಚಾಗಿ, ನಾನು ಅವನನ್ನು ದೂರವಿಡಬೇಕಾಗುತ್ತದೆ. ಯಾಕೆಂದರೆ ನಾನು ತುರ್ತು ಕರೆಯ ಮೇಲೆ ಸಿಲುಕಿ ಕೊಂಡಿರುತ್ತೇನೆ. ಆತನ ಮುಖದಲ್ಲಿ ಆಗುವ ನಿರಾಸೆ ನನ್ನ ಮನಸ್ಸು ಒಡೆಯುವಂತೆ ಮಾಡುತ್ತದೆʼʼ ಎಂದು ಹೇಳಿಕೊಂಡಿದ್ದಾರೆ

ʼʼಈ 11ರಿಂದ 11ರವರೆಗಿನ ಕಾರ್ಪೋರೇಟ್ ದಿನಚರಿಯಿಂದ ನಾನು ಪ್ರಾಮಾಣಿಕವಾಗಿ ದಣಿದಿದ್ದೇನೆ. ಇದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ನನ್ನಿಂದ ತೆಗೆದುಕೊಳ್ಳುತ್ತಿದೆ. ಕಠಿಣ ಭಾಗವೆಂದರೆ ಅದು ನನ್ನ ಮನೆಯನ್ನೇ ಕಳೆದುಕೊಳ್ಳುತ್ತಿರುವುದುʼʼ ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅನೇಕರು ಆರ್ಥಿಕ ಸ್ಥಿರತೆ, ವೃತ್ತಿ ಅಪಾಯಗಳು ಮತ್ತು ಪೋಷಕರ ಬಗ್ಗೆ ತಮ್ಮದೇ ಆದ ಅನುಭವ ಹಂಚಿಕೊಂಡಿದ್ದಾರೆ. ಒಬ್ಬರು ಇಂತಹ ಸಂದರ್ಭವನ್ನು ಅನೇಕರು ಎದುರಿಸುತ್ತಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ನಾನು ಮಗುವಿನೊಂದಿಗೆ ಇರಬಹುದಾದ ಸಮಯವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಆದರೆ ಕುಟುಂಬದ ಜವಾಬ್ದಾರಿಗಳು ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ.