ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಐಪ್ಯಾಡ್: ಈ ದೇಶದ ಶಿಕ್ಷಣ ಸೌಲಭ್ಯಕ್ಕೆ ನೆಟ್ಟಿಗರು ಫಿದಾ!

Viral Video: ಜಪಾನ್ ಶಾಲೆಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಾಧುನಿಕ ಐಪ್ಯಾಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಅಲ್ಲಿನ ಸೌಕರ್ಯಗಳ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ..ಶಿಜುವೊಕಾ ಪ್ರಿಫೆಕ್ಚರ್‌ನ ಶಾಲೆಯಲ್ಲಿ ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿದೆ.

ಜಪಾನ್ ಶಾಲೆಯಲ್ಲಿ ಉಚಿತ ಐಪ್ಯಾಡ್: ವಿಡಿಯೊ  ವೈರಲ್

ಸಂಗ್ರಹ ಚಿತ್ರ -

Profile
Pushpa Kumari Apr 14, 2026 1:45 PM

ಜಪಾನ್, ಎ.14: ಇತ್ತೀಚೆಗೆ ಶಿಕ್ಷಣ ಕ್ಷೇತ್ರ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯದ ಕೊರತೆ ಎದುರಿಸುತ್ತಿದೆ. ಈ ನಡುವೆ ಜಪಾನ್ ಶಾಲೆಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಭಾರೀ ಚರ್ಚೆ ಯಾಗುತ್ತಿದೆ. ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಾಧುನಿಕ ಐಪ್ಯಾಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಅಲ್ಲಿನ ಸೌಕರ್ಯಗಳ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ

ಶಿಜುವೊಕಾ ಪ್ರಿಫೆಕ್ಚರ್‌ನ ಶಾಲೆಯಲ್ಲಿ ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿದೆ. ಮೊದಲ ವರ್ಷದ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಸಾಧನಗಳನ್ನು ಸಂಗ್ರಹಿಸಲು ಒಬ್ಬೊಬ್ಬರಾಗಿ ಶಿಸ್ತಿನಿಂದ ಮುಂದೆ ಬಂದಿದ್ದಾರೆ. ಈ ಮಕ್ಕಳಿಗೆ ಆ ಶಾಲೆಯ ಉಡುಗೊರೆ ಮಾತ್ರವಲ್ಲ ಅಲ್ಲಿನ ಸರಕಾರದ ಒಂದು ಮುಖ್ಯವಾದ ಸೌಲಭ್ಯ ಕೂಡ ಇದಾಗಿದೆ.

ವಿಡಿಯೋ ನೋಡಿ:



ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತದ ಶಿಕ್ಷಣ ಇಲಾಖೆ, ಇಲ್ಲಿನ ಸೌಲಭ್ಯದ ಬಗ್ಗೆ ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ. "ಹೈಸ್ಕೂಲ್ 1 ನೇ ವರ್ಷದ ಐಪ್ಯಾಡ್ ಪರಿಚಯ" ಎಂಬ ಶೀರ್ಷಿಕೆಯ ಮೇರೆಗೆ ನುಮಾಜು ಮುನ್ಸಿಪಲ್ ಹೈಸ್ಕೂಲ್ ಈ ವಿಡಿಯೊ ಹಂಚಿಕೊಂಡಿದೆ. ವಿದ್ಯಾರ್ಥಿಗಳು ತಮ್ಮ ಐಪ್ಯಾಡ್‌ಗಳನ್ನು ತೆರೆಯುವುದು ಮಾತ್ರವಲ್ಲ, ಅವರ ಖುಷಿಯಾದ ಕ್ಷಣವು ಇದರಲ್ಲಿ ಸೆರೆಯಾಗಿದೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಅಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಡಿಜಿಟಲ್ ಶಿಕ್ಷಣ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸುವುದು ಮುಖ್ಯ ಉದ್ದೇಶ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಭಾರತದಲ್ಲಿ ಮಕ್ಕಳಿಗೆ ಇಂತಹ ಸೌಲಭ್ಯಗಿಂತಲೂ ಸಾಮಾನ್ಯ ಶಾಲಾ ವಸ್ತುಗಳಾದರೂ ನೀಡಿ ಎಂದಿದ್ದಾರೆ. ಮತ್ತೊಬ್ಬರು ಜಪಾನಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.