ಸುಳ್ಳುಗಳನ್ನು ಹರಡಿ ವಿಶ್ರಾಂತಿ; ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸವನ್ನು ಅಣಕಿಸಿದ ಬಿಜೆಪಿ
ಸುಳ್ಳುಗಳನ್ನು ಹರಡುವುದರಿಂದ ಬೇಸೆತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ವಿಯೆಟ್ನಾಂಗೆ ವಿಶ್ರಾಂತಿ ಪಡೆಯಲು ಹೊರಟಿದ್ದಾರೆ ಎಂದು ಬಿಜೆಪಿ ಅಣಕಿಸಿದೆ. ಚುನಾವಣಾ ಆಯೋಗ ನಡೆಸಿದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಮುಖ್ಯಸ್ಥ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನಡುವೆ ರಾಹುಲ್ ಗಾಂಧಿ ವಿಯೆಟ್ನಾಂ ಭೇಟಿಗೆ ತೆರಳಿರುವುದಕ್ಕೆ ಬಿಜೆಪಿ ಅಪಹಾಸ್ಯ ಮಾಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು (India bloc) ಚುನಾವಣಾ ಆಯೋಗ (election commission) ನಡೆಸಿದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಮುಖ್ಯಸ್ಥ ಜ್ಞಾನೇಶ್ ಕುಮಾರ್ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ನಡುವೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು (rahul gandhi) ವಿಯೆಟ್ನಾಂ ಪ್ರವಾಸಕ್ಕೆ (Vietnam trip) ಹೊರಟಿರುವುದನ್ನು ಬಿಜೆಪಿ (BJP) ಅಣಕಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವನ್ನು ಹಂಚಿಕೊಂಡು ಸುಳ್ಳುಗಳನ್ನು ಹರಡುವುದರಿಂದ ಬೇಸೆತ್ತು ಅವರು ವಿಶ್ರಾಂತಿಗೆ ತೆರಳಿದ್ದಾರೆ ಎಂದು ಹೇಳಿದೆ.
ವಿಯೆಟ್ನಾಂ ಭೇಟಿಗೆ ಹೊರಟಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತೀಯ ಜನತಾ ಪಕ್ಷ ಸೋಮವಾರ ಸುಳ್ಳುಗಳನ್ನು ಹರಡಿದ ಬಳಿಕ ರಾಹುಲ್ ಗಾಂಧಿಯವರು ವಿಶ್ರಾಂತಿಗೆ ಹೊರಟಿದ್ದಾರೆ ಎಂದು ಹೇಳಿ ಅವರು ವಿಮಾನದ ಎಕಾನಮಿ ದರ್ಜೆಯ ಕ್ಯಾಬಿನ್ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ.
ರಾಜೌರಿಯಲ್ಲಿ ಉಗ್ರರ ಅಡಗುತಾಣ ಪತ್ತೆ; 9 ಗ್ರೆನೇಡ್ಗಳು ಸೇರಿ ಹಲವು ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶ
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ನಡುವೆ ಸುಳ್ಳುಗಳನ್ನು ಹರಡುವುದರಿಂದ ಬೇಸತ್ತಿದ್ದೇನೆ... ಕೆಲವು ದಿನಗಳವರೆಗೆ ವಿಯೆಟ್ನಾಂ ಸುತ್ತ ಸುತ್ತಾಡಲು ಹೊರಟೆ ಎನ್ನುವ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಬಿಜೆಪಿ ಹಂಚಿಕೊಂಡಿದೆ.
🚨 PROTESTS AT HOME, VIETNAM TRIP ABROAD? Rahul Gandhi has travelled to Vietnam while Congress continues its political battle over SIR and alleged “vote chori.” The timing raises questions. Why now? What is the purpose of this visit? https://t.co/P0Bv2OX5u1
— Sunanda Acharya (@Sunanda_Iam) October 19, 2026
ಬಿಜೆಪಿ ಹಂಚಿಕೊಂಡಿರುವ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ನೀಲಿ ಟಿ ಶರ್ಟ್ ಮತ್ತು ಏರ್ಪಾಡ್ಗಳನ್ನು ಧರಿಸಿರುವುದನ್ನು ಕಾಣಬಹುದು. ಸಹ ಪ್ರಯಾಣಿಕ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಗುರುತಿಸಿ ಇನ್ನೊಬ್ಬ ಪ್ರಯಾಣಿಕನೊಂದಿಗೆ ಚರ್ಚಿಸುತ್ತಿರುವುದನ್ನು ಕಾಣಬಹುದು.
ರಾಹುಲ್ ಗಾಂಧಿಯವರ ಅಧಿಕೃತ ಗುರುತು ಹಾಗೂ ಅವರ ವಿಯೆಟ್ನಾಂ ಪ್ರವಾಸದ ಬಗ್ಗೆ ಕಾಂಗ್ರೆಸ್ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಕೆಲವು ದಿನಗಳ ಹಿಂದೆ ಮಾಧ್ಯಮವೊಂದು ರಾಹುಲ್ ಗಾಂಧಿಯವರು ವಿದೇಶ ಪ್ರವಾಸಕ್ಕಾಗಿ ನಾಲ್ಕು ದಿನಗಳ ರಜೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಯೆಟ್ನಾಂನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ತಿಳಿಸಿದೆ.
ಹಿಂದೂ ಧರ್ಮವನ್ನು ಕಾಪಾಡುವಲ್ಲಿ RSS ಪಾತ್ರ ಮಹತ್ವದ್ದು; ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತು
ವಿಧಾನ ಸಭಾ ಚುನಾವಣೆ ಸಿದ್ಧತೆಯಲ್ಲಿರುವ ಗೋವಾದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ನ ಗೋಯ್ ರಖೋನ್ ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ವಿಯೆಟ್ನಾಂ ಪ್ರವಾಸಕ್ಕೆ ಹೊರಟಿದ್ದಾರೆ. ಯಾತ್ರೆಯಲ್ಲಿ ಅವರು ಪಕ್ಷದ ನಾಯಕರೊಂದಿಗೆ ಎರಡು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿದ್ದರು.