ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಳಿಯನಿಗೆ ರಾಜಾತಿಥ್ಯ ತೋರಿದ ಅತ್ತೆ-ಮಾವ: ಸಂಕ್ರಾಂತಿ ಹಬ್ಬಕ್ಕೆ 158 ಬಗೆಯ ಖಾದ್ಯ ತಯಾರಿಸಿ ಉಣಬಡಿಸಿದ ಕುಟುಂಬ!

Viral Video: ಆಂಧ್ರ ಕುಟುಂಬವು ಅಳಿಯನಿಗೆ 158 ಬಗೆಯ ರುಚಿಕರವಾದ ತಿನಿಸುಗಳೊಂದಿಗೆ ಅದ್ಧೂರಿ ಸಂಕ್ರಾಂತಿ ಹಬ್ಬವನ್ನು ಏರ್ಪಡಿಸಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಈ ದೃಶ್ಯ ಕಂಡು ಬಂದಿದ್ದು ಭರ್ಜರಿ ಔತಣ ಕೂಟವನ್ನು ಏರ್ಪಡಿಸಿದ್ದಾರೆ.ಅಳಿಯ ಶ್ರೀದತ್ತ ಅವರಿಗೆ ಬರೋಬ್ಬರಿ 158 ಬಗೆಯ ಖಾದ್ಯಗಳನ್ನು ಉಣಬಡಿಸುವ ಮೂಲಕ ಈ ಕುಟುಂಬ ಸುದ್ದಿಯಾಗಿದ್ದು ಇದರ ವಿಡಿಯೊ ಭಾರೀ ವೈರಲ್ ಆಗಿದೆ.

ಅಳಿಯನಿಗೆ 158 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದ ಅತ್ತೆ: ವಿಡಿಯೋ ವೈರಲ್

ಅಳಿಯನಿಗೆ ರಾಜಾತಿಥ್ಯ ತೋರಿದ ಅತ್ತೆ -

Profile
Pushpa Kumari Jan 15, 2026 8:21 PM

ಅಮರಾವತಿ, ಜ. 15: ಮನೆಗೆ ಅಳಿಯ ಬರುತ್ತಾನೆ ಎಂದರೆ ಎಲ್ಲ ಮನೆಯಲ್ಲೂ ಸಂಭ್ರಮ ಇದ್ದೇ ಇರುತ್ತದೆ. ಹೀಗಾಗಿ ಅಳಿಯ ಬಂದಾಗ ಬಗೆ ಬಗೆಯ ತಿನಿಸುಗಳನ್ನು ಮಾಡಿ ಉಪಚಾರ ಮಾಡೋದು ಸಾಮಾನ್ಯ.‌ ಆದರೆ ಇಲ್ಲೊಂದು ಕಡೆ ಆಂಧ್ರ ಪ್ರದೇಶದ ಕುಟುಂಬವೊಂದು ಅಳಿಯನಿಗೆ 158 ಬಗೆಯ ತಿನಿಸುಗಳೊಂದಿಗೆ ಅದ್ಧೂರಿ ಸಂಕ್ರಾಂತಿ ಹಬ್ಬವನ್ನು ಏರ್ಪಡಿಸಿದೆ. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಈ ದೃಶ್ಯ ಕಂಡು ಬಂದಿದ್ದು ಭರ್ಜರಿ ಔತಣ ಕೂಟವನ್ನು ಏರ್ಪಡಿಸಲಾಗಿದೆ. ಅಳಿಯ ಶ್ರೀದತ್ತ ಅವರಿಗೆ ಬರೋಬ್ಬರಿ 158 ಬಗೆಯ ಖಾದ್ಯಗಳನ್ನು ಉಣಬಡಿಸುವ ಮೂಲಕ ಈ ಕುಟುಂಬ ಸುದ್ದಿಯಾಗಿದ್ದು ಇದರ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬವು ತಮ್ಮ ಅಳಿಯನಿಗಾಗಿ 158 ಭಕ್ಷ್ಯಗಳನ್ನು ತಯಾರಿಸುವ ಮೂಲಕ ಈ ವರ್ಷದ ಸಂಕ್ರಾಂತಿ ಆಚರಣೆಯನ್ನು ಮರೆಯಲಾಗದ ಸಂಭ್ರಮವನ್ನಾಗಿ ಮಾಡಿದೆ. ವಂದನಪು ಮುರಳೀಕೃಷ್ಣ ಮತ್ತು ಅವರ ಪತ್ನಿ ಗೋದಾವರಿ ಜಿಲ್ಲೆಯ ರಾಜಮಂಡ್ರಿಯವರಾದ ತಮ್ಮ ಅಳಿಯ ಶ್ರೀದತ್ತ ಮತ್ತು ಅವರ ಮಗಳು ಮೌನಿಕಾಗೆ ಅದ್ದೂರಿ ಔತಣವನ್ನು ಆಯೋಜಿಸಿದ್ದಾರೆ. ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಮುರಳಿಕೃಷ್ಣ ಅವರ ಪುತ್ರಿ ಮೌನಿಕಾ ಮತ್ತು ಅಳಿಯ ಶ್ರೀದತ್ತ ಅವರಿಗೆ ಇದು ಮೊದಲ ಸಂಕ್ರಾಂತಿ ಹಬ್ಬ.

ವಿಡಿಯೊ ನೋಡಿ:



ಆಂಧ್ರದಲ್ಲಿ ಮಕರ ಸಂಕ್ರಾಂತಿಗೆ‌‌ ಅಳಿಯನನ್ನು ಮನೆಗೆ ಕರೆದು 'ರಾಜಾತಿಥ್ಯ' ನೀಡುವುದು ಸಂಪ್ರದಾಯ. ಇದನ್ನು ತೆನಾಲಿ ಕುಟುಂಬವು ಅತ್ಯಂತ ವಿಜೃಂಭಣೆಯಿಂದ ಆಚರಿಸಿದೆ. 158 ಖಾದ್ಯಗಳ ಪಟ್ಟಿಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಇದ್ದವು. ಆಂಧ್ರದ ಸಾಂಪ್ರದಾಯಿಕ ಖಾದ್ಯಗಳಾದ ಮುರುಕುಲು, ಚೆಕ್ಕಾಲು ಮತ್ತು ಗರೇಲುಗಳಂತಹ ಗರಿಗರಿಯಾದ ಖಾರದ ತಿಂಡಿಗಳು, ಅರಿಸೆಲು, ಬೊಬ್ಬಟ್ಲು, ಸುನ್ನುಂಡುಲು ಮತ್ತು ಕಜ್ಜಿಕಾಯಲು ಮುಂತಾದ ಬೆಲ್ಲವನ್ನು ಒಳಗೊಂಡಿರುವ ಸಿಹಿ ತಿನಿಸುಗಳು, ಜತೆಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳು ಇದ್ದವು.

ಬೀದಿನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಪ್ರಾಣಪಕ್ಷಿಯೇ ಹಾರಿಹೋಯ್ತು!

ಆಂಧ್ರದ ಗೋದಾವರಿ ಮತ್ತು ಗುಂಟೂರು ಭಾಗಗಳಲ್ಲಿ ಅಳಿಯಂದಿರನ್ನು ಬಹಳ ಗೌರವದಿಂದ ಕಾಣಲಾಗುತ್ತದೆ. ಇಲ್ಲಿ ಸಂಕ್ರಾಂತಿ ಹಬ್ಬವು ಗ್ರ್ಯಾಂಡ್ ಆಗಿದ್ದು ಕುಟುಂಬ ಜತೆ ಸೇರಿ ಆಚರಣೆ ಮಾಡಲಾಗುತ್ತದೆ. ಈ ಭರ್ಜರಿ ಔತಣಕೂಟದ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಅದ್ದೂರಿ ಆತಿಥ್ಯವನ್ನು ಕಂಡು‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇಲ್ಲಿನ ಅಳಿಯ ಅದೃಷ್ಟವಂತರು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಸಿಕ್ಕರೆ ಇಂತಹ ಕುಟುಂಬ ಸಿಗಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.