ಚಲಿಸುವ ಆಟೋದ ಮೇಲೆ ಕುಳಿತು ಡಾಗೇಶ್ ಭಾಯ್ ಸವಾರಿ: ಭಾರೀ ವೈರಲ್ ಆಗ್ತಿದೆ ಈ ವಿಡಿಯೊ!
Viral Video: ಮುಂಬೈನ ರಸ್ತೆಯೊಂದರಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ನೆಟ್ಟಿಗರ ಕಣ್ಣು ಅರಳಿಸಿದೆ. ವೇಗವಾಗಿ ಚಲಿಸುವ ರಿಕ್ಷಾದ ಛಾವಣಿಯ ಮೇಲೆ ಬೀದಿ ನಾಯಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು ಅತ್ಯಂತ ಆತ್ಮವಿಶ್ವಾಸದಿಂದ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಈಗ ಭಾರಿ ಸಂಚಲನ ಸೃಷ್ಟಿಸಿದೆ. ಸುತ್ತಲೂ ವಾಹನಗಳು ಇದ್ದರೂ, ಆಟೋ ವೇಗವಾಗಿ ಚಲಿಸುತ್ತಿದ್ದರೂ ಸಹ, ಈ ಶ್ವಾನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೆ ಸವಾರಿ ಮಾಡುತ್ತಿದೆ.
ಚಲಿಸುವ ಆಟೋದ ಮೇಲೆ ಕುಳಿತು ಶ್ವಾನದ ಸವಾರಿ -
ಮುಂಬೈ,ಜ. 15: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹಲವಾರು ದೃಶ್ಯಗಳು ನೆಟ್ಟಿಗರ ಗಮನ ಸೆಳೆ ಯುತ್ತವೆ. ಸದ್ಯ ಅಂತಹುದೇ ವಿಡಿಯೊವೊಂದು ವೈರಲ್ (Viral Video) ಆಗಿದ್ದು ಮುಂಬೈನ ರಸ್ತೆಯೊಂದರಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ನೆಟ್ಟಿಗರ ಕಣ್ಣು ಅರಳಿಸಿದೆ. ವೇಗವಾಗಿ ಚಲಿಸುವ ರಿಕ್ಷಾದ ಛಾವಣಿಯ ಮೇಲೆ ಬೀದಿ ನಾಯಿ ಆಕಸ್ಮಿಕವಾಗಿ ಕಾಣಿಸಿ ಕೊಂಡಿದ್ದು ಅತ್ಯಂತ ಆತ್ಮವಿಶ್ವಾಸದಿಂದ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಈಗ ಭಾರಿ ಸಂಚಲನ ಸೃಷ್ಟಿಸಿದೆ. ಸುತ್ತಲೂ ವಾಹನಗಳು ಇದ್ದರೂ, ಆಟೋ ವೇಗವಾಗಿ ಚಲಿಸುತ್ತಿದ್ದರೂ ಸಹ, ಈ ಶ್ವಾನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೆ ಸವಾರಿ ಮಾಡುತ್ತಿದೆ.
ವೈರಲ್ ಆದ ದೃಶ್ಯದಲ್ಲಿ ಮುಂಬೈನ ಜನದಟ್ಟಣೆಯ ರಸ್ತೆಯಲ್ಲಿ ಆಟೋವೊಂದು ಚಲಿಸುತ್ತಿರುವುದನ್ನು ಕಾಣಬಹುದು. ಆ ಆಟೋದ ಟಾಪ್ ಮೇಲೆ ನಾಯಿವೊಂದು ಯಾವುದೇ ಆತಂಕ ವಿಲ್ಲದೆ ಕುಳಿತಿದೆ. ಸುತ್ತಲೂ ವಾಹನಗಳ ಕರ್ಕಶ ಶಬ್ದವಿದ್ದರೂ,ಆಟೋ ವೇಗವಾಗಿ ಚಲಿಸುತ್ತಿದ್ದರೂ ಸಹ, ಈ ಶ್ವಾನ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತಿದೆ. ಇದನ್ನು ಕಂಡ ನೆಟ್ಟಿಗರು ಈ ನಾಯಿಗೆ 'ಡೋಗೇಶ್ ಭಾಯಿ' ಎಂದು ಕರೆದಿದ್ದಾರೆ.
ವಿಡಿಯೋ ನೋಡಿ:
ವಿಡಿಯೊದಲ್ಲಿ ಸುತ್ತಲೂ ವಾಹನಗಳು ಕಂಡು ಬಂದ ದೃಶ್ಯ ಕಾಣಬಹುದು.ಈ ಸಂದರ್ಭದಲ್ಲಿ ಚಲಿಸುವ ಆಟೋರಿಕ್ಷಾದ ಛಾವಣಿಯ ಮೇಲೆ ಬೀದಿ ನಾಯಿಯೊಂದು ಆರಾಮವಾಗಿ ಕುಳಿತಿರುವ ದೃಶ್ಯ ಕಂಡುಬಂದಿದೆ.ಇನ್ಸ್ಟಾಗ್ರಾಮ್ ಬಳಕೆದಾರ 'ನಿಮಿಶ್ ಕೊಡಿಲ್ಕರ್' ಎಂಬುವವರು ಶೇರ್ ಮಾಡಿದ್ದು ವಿಡಿಯೋ ಈಗಾಗಲೇ 7.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
Viral News: ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಭಾವುಕ ಪೋಸ್ಟ್ ವೈರಲ್!
ವೇಗವಾಗಿ ಚಲಿಸುವ ವಾಹನಗಳಿಂದ ಸುತ್ತುವರೆದಿರುವ ಈ ಸಾಹಸ ಅಪಾಯಕಾರಿಯಾಗಿ ಕಾಣು ತ್ತಿತ್ತು, ಪ್ರಾಣಿಗಳ ಸುರಕ್ಷತೆಯ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕ ದಿಢೀರ್ ಬ್ರೇಕ್ ಹಾಕಿದರೆ ನಾಯಿ ಕೆಳಗೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇತ್ತು.ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.
ಬಳಕೆದಾರರೊಬ್ಬರು ನಾಯಿಯ ಧೈರ್ಯಕ್ಕೆ ಮೆಚ್ಚಲೆಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ದೃಶ್ಯಗಳು ನೋಡಲು ತಮಾಷೆಯಾಗಿ ಕಂಡರು ನಾಯಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.