ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುಟ್ಟ ಬಾಲಕಿಯನ್ನು ಫುಟ್‌ಬಾಲ್‌ನಂತೆ ಒದ್ದ ಅಂಗನವಾಡಿ ಕಾರ್ಯಕರ್ತೆ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌

Viral Video: ಮಹಾರಾಷ್ಟ್ರದ ಪನ್ವೇಲ್ ತಾಲೂಕಿನ ನಂದಗಾಂವ್ ಗ್ರಾಮದ ಅಂಗನವಾಡಿ ಕೇಂದ್ರವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕಾರ್ಯಕರ್ತೆ ಪುಟ್ಟ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾಳೆ. ಪುಟ್ಟ ಬಾಲಕಿಯನ್ನು ಒದೆಯುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪುಟ್ಟ ಬಾಲಕಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಅಂಗನವಾಡಿ ಕಾರ್ಯಕರ್ತೆ

ಪುಟ್ಟ ಬಾಲಕಿಯ ಮೇಲೆ ಹಲ್ಲೆ ನಡೆಸಿದ ಅಂಗನವಾಡಿ ಕಾರ್ಯಕರ್ತೆ -

Profile
Pushpa Kumari Jun 27, 2026 3:34 PM

ಮುಂಬೈ, ಜೂ. 27: ಮಕ್ಕಳಿಗೆ ಬುದ್ಧಿ ಹೇಳಿ, ಸರಿ ದಾರಿಯಲ್ಲಿ ನಡೆಯುವಂತೆ ಮಾಡಬೇಕಾದ ಶಿಕ್ಷಕಿಯೊಬ್ಬಳು ಮಾನವೀಯತೆ ಮರೆತು ವರ್ತಿಸಿದ್ದಾಳೆ. ಮಹಾರಾಷ್ಟ್ರದ ಪನ್ವೇಲ್ ತಾಲೂಕಿನ ನಂದಗಾಂವ್ ಗ್ರಾಮದ ಅಂಗನವಾಡಿ ಕೇಂದ್ರವೊಂದರಲ್ಲಿ ಈ ಘಟನೆ ನಡೆದಿದೆ. ಪುಟ್ಟ ಬಾಲಕಿಯನ್ನು ಕಾಲಿನಿಂದ ಒದ್ದು ಅಮಾನುಷವಾಗಿ ಹಲ್ಲೆ ಎಸಗಿದ್ದಾಳೆ. ಈ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಶಿಕ್ಷಕಿಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಚಿಕ್ಕ ಹುಡುಗಿಯ ಎದೆಗೆ ಒದೆಯುವುದನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ. ಬಾಲಕಿ ನೆಲಕ್ಕೆ ಬಿದ್ದರೂ ಕಿಂಚಿತ್ತೂ ಕಕುಣೆ ತೋರದೆ ರಾಕ್ಷಸಿಯಂತೆ ವರ್ತಿಸಿದ್ದಾಳೆ.

ವಿಡಿಯೊ ನೋಡಿ:



ಈ ವಿಡಿಯೊವನ್ನು ಮಧುರ್ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಅಸಹಾಯಕ ಮಗುವಿಗೆ ಅಂಗನವಾಡಿ ಕಾರ್ಯಕರ್ತೆ ಕ್ರೂರವಾಗಿ ಹಿಂಸಿಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಮತ್ತೊಬ್ಬ ಶಿಕ್ಷಕಿ ಆಗಮಿಸಿ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಲ್ಲಿಂದ ಕಳುಹಿಸಿ ಬಾಲಕಿಯನ್ನು ಮೇಲಕ್ಕೆತ್ತಿದ್ದಾಳೆ. ಪುಟ್ಟ ಹುಡುಗಿಯ ಎದೆಗೆ ಒದೆಯಲು ನಿನಗೆಷ್ಟು ಧೈರ್ಯ? ಆಕೆಗೂ ಇದೇ ರೀತಿ ಒದ್ದು ಶಿಕ್ಷೆ ನೀಡಬೇಕೆಂಬ ಕೂಗು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ: ವಿಗ್ ಧರಿಸಿ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ

ಅನೇಕರು ಶೈಕ್ಷಣಿಕ ಮತ್ತು ಶಿಶುಪಾಲನಾ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈಕೆಯ ಮೇಲೆ ತಕ್ಷಣವೇ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ದೃಶ್ಯಾವಳಿಗಳನ್ನು ಗಮನಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆರೋಪ ಸಾಬೀತಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. "ಮಕ್ಕಳಿಗೆ ಪ್ರೀತಿ-ಆರೈಕೆ ಸಿಗಬೇಕೇ ಹೊರತು ಇಂತಹ ಕ್ರೌರ್ಯವಲ್ಲʼʼ ಎಂದು ಒಬ್ಎಂಬರು ಹೇಳಿದ್ದುದಾರೆ. ಮತ್ತೊಬ್ಬರು, ʼʼಸಾರ್ವಜನಿಕರು ಮತ್ತು ಪೋಷಕರು ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿ‌‌. ಇದು ನಿಜ ಎಂದು ಸಾಬೀತಾದರೆ ಗಲ್ಲು ಶಿಕ್ಷೆ ವಿಧಿಸಬೇಕುʼʼ ಎಂದು ಬರೆದಿದ್ದಾರೆ.