Arrowhead Tiger: ರಣಥಂಭೋರ್ ರಾಣಿ ಆರೋಹೆಡ್ ಸಾವು ; ಮಗಳ ಅಗಲಿಕೆಯಿಂದಲೇ ಪ್ರಾಣ ಬಿಟ್ಟಳಾ ಮಚ್ಲಿಯ ಮೊಮ್ಮಗಳು?
ರಣಥಂಭೋರ್ ರಾಷ್ಟ್ರೀಯ ಉದ್ಯಾನದ ರಾಣಿಹುಲಿ (Ranthambore National Park) ಪ್ರಸಿದ್ಧ ‘ಆರೋಹೆಡ್’ (Arrowhead) (T-84) ಹುಲಿ, ಮೆದುಳಿನ ಗೆಡ್ಡೆಯಿಂದಾಗಿ ಗುರುವಾರ 14 ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈಕೆ ಮೃತ ಹುಲಿಯು ‘ಮಚ್ಲಿ ಎಂಬ ಹುಲಿಯ ಮೊಮ್ಮಗಳು.


ಜೈಪುರ: ರಣಥಂಭೋರ್ ರಾಷ್ಟ್ರೀಯ ಉದ್ಯಾನದ ರಾಣಿಹುಲಿ (Ranthambore National Park) ಪ್ರಸಿದ್ಧ ‘ಆರೋಹೆಡ್’ (Arrowhead) (T-84) ಹುಲಿ, ಮೆದುಳಿನ ಗೆಡ್ಡೆಯಿಂದಾಗಿ ಗುರುವಾರ 14 ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಆರೋಹೆಡ್ ಮೊಸಳೆಯನ್ನು (Crocodile) ಬೇಟೆಯಾಡಿದ ವಿಡಿಯೋ ವೈರಲ್ ಆಗಿತ್ತು. ಇದು ‘ರಣಥಂಭೋರ್‌ನ ರಾಣಿ’ ಮತ್ತು ‘ಮೊಸಳೆ ಬೇಟೆಗಾರ’ ಎಂದೇ ಖ್ಯಾತವಾದ ಮಚ್ಲಿಯ ಬೇಟೆಯ ಕೌಶಲ್ಯವನ್ನು ನೆನಪಿಸಿತು. ಮೃತ ಹುಲಿಯು ‘ಮಚ್ಲಿ ಎಂಬ ಹುಲಿಯ ಮೊಮ್ಮಗಳು.
ರಣಥಂಭೋರ್ ರಾಷ್ಟ್ರೀಯ ಉದ್ಯಾನದ ಅಧಿಕೃತ ಖಾತೆಯು, “ಭಾರವಾದ ಹೃದಯದಿಂದ ಈ ದುಃಖದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಕೃಷ್ಣಾಳ ಮಗಳು ಮತ್ತು ಮಚಲಿಯ ಮೊಮ್ಮಗಳಾದ ಆರೋಹೆಡ್ (T-84) ತನ್ನ ಕೊನೆಯ ಉಸಿರೆಳೆದಿದ್ದಾಳೆ. ದೀರ್ಘಕಾಲದಿಂದ ಆಕೆ ಧೈರ್ಯದಿಂದ ಮೂಳೆ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಳು. ಆರೋಹೆಡ್ ಕೇವಲ ಹುಲಿಯಲ್ಲ, ಸೌಂದರ್ಯ, ಶಕ್ತಿ, ಮತ್ತು ಮಾತೃತ್ವದ ಸಂಕೇತವಾಗಿದ್ದಳು. ಆಕೆಯ ವಾರಸತ್ವ ಆಕೆಯ ಮರಿಗಳ ಮೂಲಕ ಮತ್ತು ವನ್ಯಜೀವಿ ಪ್ರಿಯರ ಹೃದಯದಲ್ಲಿ ಜೀವಂತವಾಗಿರಲಿದೆ” ಎಂದು ತಿಳಿಸಿದೆ.
ರಣಥಂಭೋರ್ ನೇಚರ್ ಗೈಡ್ ಅಸೋಸಿಯೇಷನ್‌ನ ಸದಸ್ಯರು ಸೇರಿದಂತೆ ವನ್ಯಜೀವಿ ಉತ್ಸಾಹಿಗಳು ಗುರುವಾರ ಆರೋಹೆಡ್‌ಗೆ ಪುಷ್ಪನಮನ ಸಲ್ಲಿಸಿದರು. “ಆರೋಹೆಡ್ ಮಚ್ಛಲಿಯ ವಾರಸತ್ವವನ್ನು ಚೈತನ್ಯ ಮತ್ತು ಶಕ್ತಿಯೊಂದಿಗೆ ಮುಂದುವರಿಸಿತು” ಎಂದು ಹಿರಿಯ ಗೈಡ್ ಶಾಕಿರ್ ಅಲಿ ಹೇಳಿದರು. ಎರಡು ದಿನಗಳ ಹಿಂದೆ, ಆರೋಹೆಡ್ ಪದಂ ತಲಾಬ್ ಬಳಿ ಮೊಸಳೆಯನ್ನು ಬೇಟೆಯಾಡಿತ್ತು. ಜಲಾಶಯದ ತೀರದಲ್ಲಿ ಅಲುಗಾಡದೆ ಕಾಯುತ್ತಾ, ತನ್ನ ಸುತ್ತಮುತ್ತಲಿನೊಂದಿಗೆ ಒಂದಾಗಿ, ಆಕಸ್ಮಿಕವಾಗಿ ದಾಳಿ ಮಾಡಿತ್ತು. ಒಂದು ನಿಮಿಷ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಮೊಸಳೆಯನ್ನು ಕೊಂದು ತನ್ನ ರೌದ್ರತೆಯನ್ನು ಪ್ರದರ್ಶಿಸಿತ್ತು.
ಈ ಸುದ್ದಿಯನ್ನೂ ಓದಿ: ಸಂಪುಟ ನಿರ್ಣಯ: ಉತ್ತರ ಕನ್ನಡದ ಅಪ್ಸರಕೊಂಡ-ಮುಗಳಿ ಕಡಲ ವನ್ಯಜೀವಿ ಧಾಮ ಘೋಷಣೆ
ಸಾಮಾಜಿಕ ಮಾಧ್ಯಮದಲ್ಲಿ ‘ರಣಥಂಭೋರ್‌ನ ರಾಣಿ’ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. “ಆರೋಹೆಡ್ ಇನ್ನಿಲ್ಲ. ಅದರ ಮರಣವು ರಣಥಂಭೋರ್‌ನ ಕಾಡಿನ ಇತಿಹಾಸದ ಒಂದು ಧೀರ ಮತ್ತು ಮರೆಯಲಾಗದ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.