ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಬಾನಿ ಮದುವೆಯನ್ನು ಮೀರಿಸಿದ ಸಮಾರಂಭ ಇದು; ಇಲ್ಲಿ ಅತಿಥಿಗಳಿಗೆ ರಾಜಾತಿಥ್ಯ

ಮದುವೆ ಸಮಾರಂಭದ ಔತಣ ಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ರಾಜಾತಿಥ್ಯ ನೀಡಲಾಗಿದೆ. ರಾಜ ಮಹಾರಾಜರ ಕಾಲದ ಅದ್ಧೂರಿ ಔತಣಕೂಟವನ್ನು ರೀ ಕ್ರಿಯೆಟ್ ಮಾಡಿರುವ ಘಟನೆ ದಕ್ಷಿಣ ಭಾರತದ ವಿವಾಹ ಸಮಾರಂಭವೊಂದರಲ್ಲಿ ನಡೆದಿದೆ. ಮದುವೆಯ ಊಟದ ಛತ್ರವು ಸಂಪೂರ್ಣ ಮಾರ್ಪಾಡಾಗಿದ್ದು ಸೆಲೆಬ್ರಿಟಿಗಳ ಔತಣಕೂಟವನ್ನು ಕೂಡ ಮೀರಿಸುವಂತಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಈ ಸಮಾರಂಭಕ್ಕೆ ಹೋದವರೇ ಅದೃಷ್ಟವಂತರು; ವೈರಲ್‌ ವಿಡಿಯೊ ನೋಡಿ

ಮದುವೆ ಕಾರ್ಯಕ್ರಮದ ಔತಣಕೂಟ -

Profile
Pushpa Kumari Dec 13, 2025 3:26 PM

ನವದೆಹಲಿ, ಡಿ. 13: ಮದುವೆ ಸಮಾರಂಭಕ್ಕೆ ಆಗಮಿಸುವ ಗಣ್ಯರು, ಅತಿಥಿಗಳ ಊಟ ಉಪಚಾರ ಚೆನ್ನಾಗಿ ಮಾಡಬೇಕು ಎಂದು ಲಕ್ಷ ಗಟ್ಟಲೆ ಹಣ ವ್ಯಯಿಸುವವರು ಇದ್ದಾರೆ. ಇನ್ನು ಕೆಲವರು ಬಗೆ ಬಗೆಯ ಕಂಡು ಕೇಳರಿಯದ ಹೊಸ ವೆರೈಟಿ ಊಟೋಪಚಾರವನ್ನು ಮೆನುವಲ್ಲಿ ಅಳವಡಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಅಂತಹದ್ದೊಂದು ವಿಶೇಷ ಔತಣ ಕೂಟವೊಂದರ ವಿಡಿಯೊ ವೈರಲ್‌ ಆಗಿದೆ. ಅತಿಥಿಗಳಿಗೆ ಆತಿಥ್ಯವನ್ನು ನೀಡುವ ಸಲುವಾಗಿ ರಾಜ ಮಹಾರಾಜರ ಕಾಲದ ಅದ್ಧೂರಿ ಔತಣಕೂಟವನ್ನು ಮತ್ತೆ ರೀ ಕ್ರಿಯೆಟ್ ಮಾಡಿರುವ ಘಟನೆ ದಕ್ಷಿಣ ಭಾರತದ ವಿವಾಹ ಸಮಾರಂಭವೊಂದರಲ್ಲಿ ನಡೆದಿದೆ. ಮದುವೆ ಊಟದ ಛತ್ರವು ಸಂಪೂರ್ಣ ಮಾರ್ಪಾಡಾಗಿದ್ದು, ಸೆಲೆಬ್ರಿಟಿಗಳ ಔತಣಕೂಟವನ್ನು ಕೂಡ ಮೀರಿಸುವಂತಿದೆ. ಬಂದ ಗಣ್ಯರನ್ನು ಅತ್ಯಂತ ಗೌರವದಿಂದ ಸ್ವಾಗತಿಸಲಾಗಿದ್ದು, ರಾಜ್ಯಾತಿಥ್ಯವನ್ನು ಮೀರಿಸುವ ಆಸನ ಏರ್ಪಡಿಸಿ ಅವರಿಗೆ ನಾನಾ ತರಹದ ಆಹಾರ ಖಾದ್ಯ ಬಡಿಸಲಾಗಿದೆ. ಸದ್ಯ ಮದುವೆ ಸಮಾರಂಭದ ವಿಡಿಯೊ ಭಾರಿ ವೈರಲ್ (Video Viral) ಆಗುತ್ತಿದೆ.

ಮದುವೆಯ ಊಟದ ಛತ್ರ ಯಾವುದೊ ಸಿನಿಮಾ ಸೆಟ್‌ನಂತೆ ಕಂಡು ಬಂದಿದೆ. ಇಲ್ಲಿ ಅತಿಥಿಗಳಿಗಾಗಿ ಮಾಡಿದ್ದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿದ್ದು, ಯಾವುದೋ ಅಂತಾರಾಷ್ಟ್ರೀಯ ಕಾರ್ಯಕ್ರಮ ಇರಬಹುದು ಇಲ್ಲವೆ ಸೆಲೆಬ್ರಿಟಿಗಳ ಕಾರ್ಯಕ್ರಮ ಎನಿಸುವಂತಿದೆ.

ವಿಡಿಯೊ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಅತಿಥಿಗಳು ರಾಜಮನೆತನದ ರೀತಿಯಲ್ಲಿ ಅಲಂಕರಿಸಲ್ಪಟ್ಟ ಚಿನ್ನದ ಸಿಂಹಾಸನದ ಮೇಲೆ ಅತಿಥಿಗಳು ಕುಳಿತುಕೊಂಡಿರುವುದು ಕಂಡ ಬಂದಿದೆ. ಅವರಿಗೆ ಸಾಂಪ್ರದಾಯಿಕ ಶೈಲಿಯ ಬಾಳೆ ಎಲೆ ಊಟ ಬಡಿಸುವ ದೃಶ್ಯವನ್ನೂ ಕಾಣಬಹುದು. ಈ ಮದುವೆ ಸಮಾರಂಭಕ್ಕೆ ದಕ್ಷಿಣ ಭಾರತದ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸಿದ್ಧ ಪಡಿಸಲಾಗಿದ್ದು ಅದನ್ನು ಅತಿಥಿಗಳು ಸವಿಯುತ್ತಿರುವುದು ಈ ಕ್ಲಿಪ್‌ನಲ್ಲಿ ಸೆರೆಯಾಗಿದೆ. ಈ ರಾಯಲ್ ದರ್ಬಾರ್ ಊಟದಲ್ಲಿ ನೀರಿನ ಬಾಟಲ್‌ನಿಂದ ಹಿಡಿದು ಟಿಶ್ಯೂ ಪೇಪರ್ ತನಕವು ಎಲ್ಲವನ್ನೂ ಪ್ರೀಮಿಯರ್ ಕ್ವಾಲಿಟಿಯದ್ದೇ ಬಳಸಲಾಗಿದೆ.

ರೀಲ್ಸ್ ಕ್ರೇಜ್‌ಗಾಗಿ ಪತ್ನಿ ಜೊತೆಗಿನ 'ಖಾಸಗಿ' ವೀಡಿಯೋ ಶೇರ್ ಮಾಡಿದ ಯುವಕ!

ಅತಿಥಿಗಳು ಯಾವ ಸೆಲೆಬ್ರಿಟಿ ತಾರೆಗಳಿಗೂ ಕಮ್ಮಿಯಿಲ್ಲ ಎಂಬಂತೆ ಸಿಂಹಾಸನದಲ್ಲಿ ಕುಳಿತಿದ್ದಾರೆ. ಇದು ಯಾರ ಮದುವೆಯ ಔತಣಕೂಟ, ಸ್ಥಳ ಇತ್ಯಾದಿಗಳ ಬಗ್ಗೆ ಮಾಹಿತಿ ಇದುವರೆಗೆ ತಿಳಿದುಬಂದಿಲ್ಲ. ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದ್ದು ಸರಳ ಮದುವೆಯಾದರೂ ಅದ್ಧೂರಿ ಔತಣಕೂಟ ಇದ್ದರೆ ಬಂದ ಅತಿಥಿಗಳು ಜೀವಮಾನ ಪೂರ್ತಿ ನೆನಪಿಟ್ಟುಕೊಳ್ಳುತ್ತಾರೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

ಇದು ನಮ್ಮ ಸಾಂಸ್ಕೃತಿ. ಅಂಬಾನಿಗಳು ಸಹ ಇಂತಹದ್ದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅತಿಥಿಗಳನ್ನು ಅತ್ಯಂತ ಗೌರವ ಮತ್ತು ಆತ್ಮೀಯತೆಯಿಂದ ನಡೆಸಿಕೊಳ್ಳುವ ಭಾರತೀಯ ಆತಿಥ್ಯ ನಿಜಕ್ಕೂ ಶ್ರೇಷ್ಠವಾದುದು. ರಾಜ ಮಹಾರಾಜರ ಕಾಲದ ಔತಣಕೂಟ ಈಗ ಎಲ್ಲಿಯೂ ಕಾಣಸಿಗಲಾರದು, ಇಲ್ಲಿ ಊಟ ಮಾಡುವವರು ಅದೃಷ್ಟವಂತರು ಎಂದು ಹೇಳಿದ್ದಾರೆ.