ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಾನಿಯಾದ ಗೋಡೆಯಲ್ಲಿ ಜೀವ ತಳೆದ ಜಿಂಕೆ: ಕಲಾವಿದನ ಕ್ರಿಯಾಶೀಲತೆಗೆ ನೆಟ್ಟಿಗರು ಫಿದಾ

Viral Video: ಗೌಹಾಟಿ ವಿಶ್ವವಿದ್ಯಾಲಯದ ಹಾನಿಗೊಳಗಾದ ಗೋಡೆಯನ್ನು ಕಲಾವಿದನೊಬ್ಬ ಬೆರಗು ಗೊಳಿಸುವ ಜಿಂಕೆಯ ಭಿತ್ತಿಚಿತ್ರವನ್ನಾಗಿ ಪರಿವರ್ತಿಸಿದ್ದು ಎಲ್ಲರ ಗಮನ ಸೆಳೆದಿದೆ. ಸೋಷಿಯಲ್ ಮೀಡಿ ಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಕಲಾಕೃತಿಯ ಬಗ್ಗೆ ಹೆಚ್ಚಿನ ಜನರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಕಲಾವಿದ ಭೇಜಾಲ್ (Bhejal) ಎನ್ನುವ ಯುವಕ ಈ ಚಿತ್ರವನ್ನು ರಚನೆ ಮಾಡಿದ್ದಾನೆ.

ಹಾನಿಯಾದ ಗೋಡೆಯನ್ನೇ ಭಿತ್ತಿಚಿತ್ರವನ್ನಾಗಿಸಿದ ಕಲಾವಿದ

ಹಾನಿಯಾದ ಗೋಡೆಗೆ ಜೀವ ತುಂಬಿದ ಕಲಾವಿದ -

Profile
Pushpa Kumari Feb 14, 2026 6:16 PM

ದಿಸ್‌ಪುರ, ಫೆ. 14: ಶಿಕ್ಷಣಕ್ಕಿಂತಲೂ ಕ್ರಿಯಾಶೀಲತೆವೊಂದಿದ್ದರೆ ಏನನ್ನು ಸಾಧಿಸಬಹುದು ಎನ್ನುವ ಮಾತಿದೆ. ಅದಕ್ಕೆ ಸೂಕ್ತ ಉದಾಹರಣೆ ಈ ಘಟನೆ. ಇಲ್ಲೊಬ್ಬ ಕಲಾವಿದನ ಕೈ ಚಳಕ ಎಲ್ಲರನ್ನು ಆಕರ್ಷಿಸಿದೆ. ಗೌವಾಹಟಿ ವಿಶ್ವವಿದ್ಯಾನಿಲಯದ ಹಾನಿಗೊಳಗಾದ ಗೋಡೆಯನ್ನು ಕಲಾವಿದನೊಬ್ಬ ಬೆರಗುಗೊಳಿಸುವ ಜಿಂಕೆಯ ಭಿತ್ತಿ ಚಿತ್ರವನ್ನಾಗಿ ಪರಿವರ್ತಿಸಿದ್ದು ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ (Viral Video) ವೈರಲ್‌ ಆಗುತ್ತಿರುವ ಈ ಕಲಾಕೃತಿಯ ಬಗ್ಗೆನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲಾವಿದ ಭೇಜಾಲ್ (Bhejal) ಎನ್ನುವ ಯುವಕ ಈ ಚಿತ್ರವನ್ನು ರಚಿಸಿದ್ದಾನೆ.

ಗುವಾಹಟಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬಿರುಕು ಬಿಟ್ಟಿದ್ದ ಹಳೆಯ ಗೋಡೆಯೊಂದು ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಯುವಕ ಭೇಜಾಲ್ ತಮ್ಮ ಅದ್ಭುತ ಕಲೆಯ ಮೂಲಕ ಹಾಳಾಗಿದ್ದ ಗೋಡೆಯನ್ನು ಸುಂದರವಾದ ಜಿಂಕೆಯ ಭಿತ್ತಿಚಿತ್ರವನ್ನಾಗಿ ಪರಿವರ್ತಿಸಿದ್ದಾನೆ. ಗೋಡೆಯ ನಡುವೆ ಬೆಳೆದಿದ್ದ ಬಿರುಕುಗಳನ್ನು ಮುಚ್ಚುವ ಬದಲು ಅವುಗಳನ್ನೇ ಚಿತ್ರವನ್ನಾಗಿಸಿದ್ದಾನೆ.

ವಿಡಿಯೊ ನೋಡಿ:

ಒಂದು ಕಾಲದಲ್ಲಿ ಈ ಕ್ಯಾಂಪಸ್ ಅನ್ನು ಮೂಲ ಸೌಕರ್ಯದ ಕೊರತೆಯಿಂದ ಯಾರು ಗಮನಿಸುವವರೇ ಇರಲಿಲ್ಲ. ಆದರೆ ಇದೀಗ ಯುವಕನ ಕೈಚಳಕದಿಂದ ಎಲ್ಲರೂ ಕಣ್ಣು ಹಾಯಿಸುವಂತಾಗಿದೆ. ಸ್ಪ್ರೇ ಪೇಂಟ್ ಬಳಸಿ, ಕಲಾವಿದ ಬಿರುಕು ಬಿದ್ದ ಗೋಡೆಯ ಉದ್ದಕ್ಕೂ ಜಿಂಕೆಯ ರೂಪವನ್ನು ನೀಡಿದ್ದಾನೆ. ಗೋಡೆಯಿಂದ ಹೊರಬಂದಿದ್ದ ಮರದ ಕೊಂಬೆಗಳನ್ನೆ ಜಿಂಕೆಯ ಕೊಂಬುಗಳನ್ನಾಗಿ ಮಾಡಿದ್ದು ನೈಜವಾಗಿ ಮೂಡಿಬಂದಿದೆ.

ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ

ಭಿತ್ತಿಚಿತ್ರವು ರಚನೆಯಾದಂತೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಂದರ್ಶಕರು ವೀಕ್ಷಿಸಲು ನೆರೆದಿದ್ದಾರೆ. ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಚಿತ್ರ ಬಿಡಿಸುವ ಹಂತಗಳನ್ನು ಸೆರೆಹಿಡಿಯಲಾಗಿದ್ದು, ಲಕ್ಷಾಂತರ ಜನರು ಇದನ್ನು ವೀಕ್ಷಿಸಿ 'ಅಪ್ರತಿಮ ಪ್ರತಿಭೆ' ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರೊಬ್ಬರು ಭಿತ್ತಿಚಿತ್ರದ ಹಿಂದಿನ ಚಿಂತನಶೀಲ ಪರಿಕಲ್ಪನೆಯನ್ನು ಕೊಂಡಾಡಿದ್ದಾರೆ