ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಾರ್ಜಿಲಿಂಗ್‌ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್: ಪ್ರಪಾತಕ್ಕೆ ಜಾರುತ್ತಿದ್ದಂತೆ ನಿಯಂತ್ರಣಕ್ಕೆ ತಂದ ರೈಡರ್‌; ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವಿಡಿಯೊ ವೈರಲ್‌

Viral Video: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಕುರ್ಸಿಯಾಂಗ್ ಪ್ರದೇಶದ ಮಳೆಕಾಡಿನ ರಸ್ತೆಯೊಂದರಲ್ಲಿ ಬೈಕರ್ ಒಬ್ಬರು ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಜಕ್ಕೂ ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬೀಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಬೈಕರ್‌

ಡಾರ್ಜಿಲಿಂಗ್‌ನ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ -

Profile
Pushpa Kumari Jul 21, 2026 9:35 PM

ಕೋಲ್ಕತಾ, ಜು.21: ಮಳೆಗಾಲದ ತಂಪು ವಾತಾವರಣ ಅನುಭವಿಸಲು, ಹಸಿರು ನೋಟ ಕಣ್ತುಂಬಿಕೊ‍ಳ್ಳಲು ಬಹುತೇಕರು ಟ್ರಿಪ್ ಹೋಗಲು ಬಯಸುತ್ತಾರೆ. ಆದರೆ ಪ್ರಯಾಣವೇನೂ ಈ ಹವಾಮಾನದಲ್ಲಿ ಖುಷಿ ಕೊಟ್ಟರೂ ಅಷ್ಟೇ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎನ್ನುವುದನ್ನು ಈ ವಿಡಿಯೊ ಸಾರಿ ಹೇಳಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ. ತೇವವಾದ ರಸ್ತೆಗಳು, ಜಾರುವ ಮಾರ್ಗಗಳು ಬಹಳಷ್ಟು ಅಪಾಯಕಾರಿ. ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಡಾರ್ಜಿಲಿಂಗ್‌ನ ಕುರ್ಸಿಯಾಂಗ್ ಪ್ರದೇಶದ ಮಳೆಕಾಡಿನ ರಸ್ತೆಯೊಂದರಲ್ಲಿ ಬೈಕರ್ ಒಬ್ಬರು ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಜಕ್ಕೂ ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ಉದ್ಘರಿಸಿದ್ದಾರೆ.

ಬೈಕ್ ಸವಾರ ಡಾರ್ಜಿಲಿಂಗ್‌ನ ಕುರ್ಸಿಯಾಂಗ್ ಪ್ರದೇಶದ ಮಳೆಕಾಡಿನ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯ ಅಂಚಿಗೆ ಹೋಗುವ ಬದಲು ಕಣಿವೆಯ ಕಡೆಗೆ ಚಲಿಸಿದ್ದಾರೆ‌. ಕಡಿದಾದ ತಿರುವಿನಲ್ಲಿ ಬೈಕ್ ದಿಢೀರನೆ ನಿಯಂತ್ರಣ ಕಳೆದು ಕೊಂಡು ಸ್ಕಿಡ್‌ ಆಗಿದೆ. ಹೀಗಾಗಿ ಬೈಕ್ ನೇರವಾಗಿ ಕಣಿವೆಯ ಕಡೆಗೆ ಜಾರತೊಡಗಿತು.

ವಿಡಿಯೊ ನೋಡಿ:

ಆದರೆ ಬೈಕರ್ ಈ ಕ್ಷಣವೇ ಸಮಯ ಪ್ರಜ್ಞೆ ಮೆರೆದಿದ್ದು ಬೈಕ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೈಕ್ ಸ್ಕಿಡ್ ಆದ ಫೋರ್ಸ್‌ಗೆ ಸವಾರನ ಒಂದು ಶೂ ಕಳಚಿ ಬಿದ್ದಿದೆ. ಪ್ರಾಣಾಪಾಯದಿಂದ ಪಾರಾದ ತಕ್ಷಣವೇ ಬೈಕ್ ಸವಾರ ತೀವ್ರ ಭಯದಿಂದ ರಸ್ತೆ ಬದಿಯಲ್ಲಿ ಕುಳಿತುಕೊಂಡು ಸುಧಾರಿಸಿಕೊಂಡಿದ್ದಾರೆ.

ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ಈ ವಿಡಿಯೊ ಕುರ್ಸಿಯಾಂಗ್‌ನ ಅಂಕುಡೊಂಕಾದ ರಸ್ತೆ, ಮಳೆಯಿಂದ ನೆನೆದ ಭೂದೃಶ್ಯ, ಸವಾರರಿಬ್ಬರ ಬೈಕ್‌ ರೈಡಿಂಗ್‌ ತೋರಿಸುವುದರೊಂದಿಗೆ ಆರಂಭವಾಗುತ್ತದೆ. ಅವರು ಬಹಳ ಎಚ್ಚರಿಕೆಯಿಂದ ಪ್ರಯಾಣ ಮಾಡುತ್ತಿದ್ದರು. ಆದರೆ ಸವಾರ ತಿರುವಿಗೆ ಪ್ರವೇಶಿಸುತ್ತಿದ್ದಂತೆ, ಬೈಕ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿತು. ಕೆಲವೇ ಕ್ಷಣಗಳಲ್ಲಿ, ಬೈಕ್ ಪಕ್ಕದಲ್ಲಿದ್ದ ಕಿರಿದಾದ ಪರ್ವತ ರಸ್ತೆಯ ಅಸುರಕ್ಷಿತ ಅಂಚಿನ ಕಡೆಗೆ ಜಾರಿತು. ಬೈಕರ್ ತಕ್ಷಣ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ.

ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ಸವಾರ ತಕ್ಷಣವೇ ಧಾವಿಸಿದರು. ಅದೃಷ್ಟವಶಾತ್ ಸವಾರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಈ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅನೇಕರು ಅಪಘಾತವು ದುರಂತದಲ್ಲಿ ಕೊನೆಗೊಂಡಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು. ನೆಟ್ಟಿಗರೊಬ್ಬರು, ʼʼಕಡಿದಾದ ಮತ್ತು ಅಂಕುಡೊಂಕಾದ ಮಾರ್ಗಗಳಲ್ಲಿ ಪ್ರಯಾಣಿಸುವಾಗ ಜಾಗೃತರಾಗಿ ಇರಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.