ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ಉದ್ಯೋಗಿಗೆ ರಜೆಯ ದಿನದಂದು ಲಾಗಿನ್ ಆಗುವಂತೆ ಮ್ಯಾನೇಜರ್ ಆದೇಶಿಸಿದ್ದು, ಮುಂದೆ ಆಕೆ ಊಹಿಸದ ಬೆಳವಣಿಗೆ ನಡೆದಿದೆ. ಮಹಿಳಾ ಉದ್ಯೋಗಿ ಕೆಲಸ ಮಾಡಲು ನಿರಾಕರಿಸುವ ಮೂಲಕ ತಿರುಗೇಟು ನೀಡಿದ್ದಾಳೆ. ಸದ್ಯ ಈ ವಿಡಿಯೊ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಸೆಳೆದಿದೆ. ಅನೇಕರು ತಮ್ಮ ಕೆಲಸದ ಸ್ಥಳಗಳಲ್ಲಿ ಆದ ಇದೇ ರೀತಿಯ ಅನುಭವ ಶೇರ್ ಮಾಡಿಕೊಂಡಿದ್ದಾರೆ.

ರಜೆ ದಿನ ಕೆಲಸ ಹೇಳಿದ ಮ್ಯಾನೇಜರ್‌ಗೆ ಡೋಂಟ್ ಕೇರ್ ಎಂದ ಯುವತಿ

ಅಫ್ರೀನ್ -

Profile
Pushpa Kumari Jul 13, 2026 10:00 PM

ನವದೆಹಲಿ, ಜು. 13: ಇತ್ತೀಚಿಗೆ ಕಾರ್ಪೊರೇಟ್ ಸಂಸ್ಥೆಯಲ್ಲಿನ ಕೆಲಸ ವಿಚಾರದ ಬಗ್ಗೆ ಉದ್ಯೋಗಿಗಳಿಂದ ದೂರು ಕೇಳಿ ಬರುತ್ತಲೇ ಇದೆ. ಕೆಲಸದ ಒತ್ತಡ, ವೇತನ, ರಜೆಯ ವಿಚಾರ ಹೀಗೆ ಉದ್ಯೋಗಿಗಳು ತಮ್ಮ ಅಳಲನ್ನು ಹೊರಹಾಕುತ್ತಲೇ ಇದ್ದಾರೆ. ಅದರಲ್ಲೂ ಟಾರ್ಗೆಟ್ ಮುಗಿಸಲು ಕೆಲಸದ ಅವಧಿ ಮುಗಿದ ಮೇಲೂ ದುಡಿಸಿಕೊಳ್ಳುವುದು, ರಜೆಯ ದಿನದಲ್ಲಿಯೂ ಆಫೀಸ್ ಬರಲು ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ರಜೆ ದಿನದಂದು ಯುವತಿಯೊಬ್ಬಳಿಗೆ ಮ್ಯಾನೇಜರ್ ಕೆಲಸಕ್ಕೆ ಬರುವಂತೆ ಹೇಳಿದ್ದು, ಅದಕ್ಕೆ ಆಕೆ ಕೊಟ್ಟ ಉತ್ತರ ವೈರಲ್‌ ಆಗಿದೆ. ಖಡಕ್ ಆಗಿ ಪ್ರತಿಕ್ರಿಯೆ ನೀಡುವ ಮೂಲಕ ಮ್ಯಾನೇಜರ್ ಬಾಯನ್ನೇ ಮುಚ್ಚಿಸಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ (Viral Video) ಹುಟ್ಟು ಹಾಕಿದೆ.

ರಜೆಯ ದಿನದಂದು ಲಾಗಿನ್ ಆಗುವಂತೆ ಮ್ಯಾನೇಜರ್ ಆದೇಶಿಸಿದ್ದು, ಮಹಿಳಾ ಉದ್ಯೋಗಿ ಕೆಲಸ ಮಾಡಲು ನಿರಾಕರಿಸುವ ಈ ವಿಡಿಯೊ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಸೆಳೆದಿದೆ. ಅನೇಕರು ತಮ್ಮ ಕೆಲಸದ ಸ್ಥಳಗಳಲ್ಲಿ ಇದೇ ರೀತಿಯ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೊ ನೋಡಿ:

ಮ್ಯಾನೇಜರ್ ಅಫ್ರೀನ್ ಎಂಬ ಉದ್ಯೋಗಿಗೆ ಕರೆ ಮಾಡಿ ನೀವು ಕಚೇರಿಯಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾಳೆ. ಆಫೀಸ್ ಟೀಮ್ ನಿಮ್ಮನ್ನು ಕಾಯುತ್ತಿದೆ ತಕ್ಷಣ ಹಾಜರಾಗಿ ಎಂದು ಆದೇಶಿಸಿದ್ದಾಳೆ. "ಶನಿವಾರ ಆದ್ದರಿಂದ ನಾನು ರಜೆಯಲ್ಲಿದ್ದೇನೆ ಮತ್ತು ನಾನು ಇಂದು ಬರುತ್ತಿಲ್ಲ" ಎಂದು ಅವಳು ತನ್ನ ಮ್ಯಾನೇಜರ್‌ಗೆ ಹೇಳಿದ್ದಾಳೆ. ಇದಕ್ಕೆ ಮ್ಯಾನೇಜರ್ "ಕ್ಷಮಿಸಿ? ನೀವು ಕಳೆದ ಎರಡು ತಿಂಗಳಿನಿಂದ ಪ್ರತಿ ಶನಿವಾರ ಬರುತ್ತಿದ್ದೀರಿ. ಇದ್ದಕ್ಕಿದ್ದಂತೆ ಸಮಸ್ಯೆ ಏನು?" ಎಂದು ಕೇಳಿದಾಗ, ಅಫ್ರೀನ್ ಶಾಂತವಾಗಿ ಕಾರಣ ವಿವರಿಸಿದ್ದಾಳೆ.

Viral Video: ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ʼʼಎರಡು ತಿಂಗಳು ಸಂಸ್ಥೆ ಕೆಲಸದ ಒತ್ತಡದಲ್ಲಿದೆ ಎಂದು ನಾನು ನಿಮಗೆ ಸಹಾಯ ಮಾಡಲು ಬಂದಿದ್ದೆ. ಅಷ್ಟಕ್ಕೇ ಅದನ್ನೇ ನನ್ನ ಕೆಲಸ ಸಮಯ ಎಂದು ಹೇಳಲು ಸಾಧ್ಯವಿಲ್ಲ‌ʼʼ ಎಂದಿದ್ದಾಳೆ. ʼʼತಂಡವು ಮತ್ತೆ ಒತ್ತಡದಲ್ಲಿದೆʼʼ ಎಂದು ಮ್ಯಾನೇಜರ್ ಹೇಳಿದಾಗ, ʼʼಉದ್ಯೋಗಿ ತಂಡವು ಯಾವಾಗಲೂ ಒತ್ತಡದಲ್ಲಿದೆ ಎಂದು ತಿಳಿದಿದೆ. ಆದರೆ ಉಚಿತವಾಗಿ ಕೆಲಸ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸುವುದು ನನ್ನ ಜವಾಬ್ದಾರಿಯಲ್ಲʼʼ ಎಂದು ಪ್ರತಿಕ್ರಿಯಿಸಿದ್ದಾಳೆ.

"ಒಂದು ವೇಳೆ ನಾನು ಇವತ್ತು ಕೆಲಸ ಮಾಡಬೇಕೆಂದರೆ ನನಗೆ ಓವರ್‌ಟೈಮ್ ಮೊತ್ತ ಸಿಗುತ್ತದೆಯೇ ಎಂದು ತಿಳಿಸಿ" ಎಂದು ಆಫ್ರೀನ್ ನೇರವಾಗಿಯೇ ಕೇಳಿದ್ದಾಳೆ. ಕೊನೆಗೆ ಮ್ಯಾನೇಜರ್ ಈ ಬಗ್ಗೆ ಮಾತನಾಡೋಣ ಎಂದು ಕರೆಯನ್ನು ಕಡಿತಗೊಳಿಸಿದ್ದಾಳೆ. ವಿಡಿಯೊಕ್ಕೆ ಅಫ್ರೀನ್ “ನಾನು ಇಂದು ಎದ್ದು ನಿಲ್ಲದಿದ್ದರೆ ಅವರು ವರ್ಷಗಳ ಕಾಲ ಇದನ್ನೇ ಮುಂದುವರಿಸುತ್ತಾರೆ" ಎಂದು ಕ್ಯಾಪ್ಶನ್‌ ನೀಡಿದ್ದಾಳೆ.

ಈ ಬಗ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, "ತಂಡವು ಯಾವಾಗಲೂ ಒತ್ತಡದಲ್ಲಿರುತ್ತದೆ, ಉದ್ಯೋಗಿಗಳು ಕೆಲಸ ಮಾಡಬೇಕಾದರೆ ಅವರಿಗೆ ಸಂಬಳ ನೀಡಿ" ಎಂದಿದ್ದಾರೆ. ಮತ್ತೊಬ್ಬರು, ʼʼನೀವು ಮಾಡಿದ್ದು ಸರಿಯಾಗಿ ಇದೆʼʼ ಎಂದು ಬೆಂಬಲ ನೀಡಿದ್ದಾರೆ. ಇದೊಂದು ಸ್ಕ್ರಿಪ್ಟೆಡ್ ವಿಡಿಯೊ ಎನ್ನಲಾಗಿದೆ. ಅಫ್ರೀನ್ ಹೆಚ್ಚಾಗಿ ಇಂತಹ ಜಾಗೃತಿ ಮೂಡಿಸುವ ಸ್ಕ್ರಿಪ್ಟೆಡ್ ವಿಡಿಯೊ ಮಾಡುತ್ತಿರುತ್ತಾರೆ.