ಆಯುಷ್ಯ ಗಟ್ಟಿ ಇದ್ದರೆ ಯಮನೂ ಸುಮ್ಮನಾಗುತ್ತಾನೆ; ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ವ್ಯಕ್ತಿ
Viral Video: ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ತನಗೆ ಅರಿವಿಲ್ಲದೆ ಅವರು ಬೀಳುತ್ತಿದ್ದಂತೆ 8ನೇ ಮಹಡಿಯ ಕಿಟಕಿಯ ಹೊರಗೆ ಅಳವ ಡಿಸಲಾದ ಲೋಹದ ಗ್ರಿಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೊ ವೈರಲ್ ಆಗಿದೆ.
ಹತ್ತನೇ ಮಹಡಿಯಿಂದ ಬಿದ್ದ ವ್ಯಕ್ತಿ -
ಗಾಂಧಿನಗರ, ಡಿ. 26: ಮನುಷ್ಯ ಎಷ್ಟು ವರ್ಷ ಬದುಕಬೇಕೆಂಬ ಆಯಸ್ಸನ್ನು ದೇವರೇ ನಿರ್ಧಾರಿಸುತ್ತಾನೆ ಎನ್ನುವ ಮಾತಿದೆ. ಕೆಲವೊಂದು ದುರ್ಘಟನೆಗಳಿಂದ ಮನುಷ್ಯ ಬದುಕಿ ಬಂದಿರುವ ಘಟನೆ ನೋಡಿದರೆ ನಿಮಗೂ ಈ ಮಾತು ನಿಜ ಎಂದೆನಿಸಬಹುದು. ನಿದ್ದೆಯ ಮಂಪರಿನಲ್ಲಿ 10ನೇ ಮಹಡಿಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ತನಗೆ ಅರಿವಿಲ್ಲದೆ ಅವರು ಬೀಳುತ್ತಿದ್ದಂತೆ 8ನೇ ಮಹಡಿಯ ಕಿಟಕಿಯ ಹೊರಗೆ ಅಳವಡಿಸಲಾದ ಲೋಹದ ಗ್ರಿಲ್‌ನಲ್ಲಿ ಅವನು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದ್ದು ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೊ ವೈರಲ್ (Viral Video) ಆಗಿದೆ.
ಸೂರತ್ ನ ಎತ್ತರದ ವಸತಿ ಕಟ್ಟಡವೊಂದರಲ್ಲಿ ನಡೆದ ಭಯಾನಕ ಘಟನೆಯಲ್ಲಿ 57 ವರ್ಷದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಜಹಾಂಗೀರ್‌ಪುರ 'ಟೈಮ್ಸ್ ಗ್ಯಾಲಕ್ಸಿ' ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಲ್ಲಿ 57 ವರ್ಷದ ನಿತಿನ್ ಅಡಿಯಾ ಎಂಬುವವರು ವಾಸವಾಗಿದ್ದರು. ಅವರು ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಯತಪ್ಪಿ ಕಿಟಕಿಯಿಂದ ಹೊರಕ್ಕೆ ಬಿದ್ದಿದ್ದಾರೆ. ಆದರೆ ನೇರವಾಗಿ ನೆಲಕ್ಕೆ ಬೀಳುವ ಬದಲು, 8 ನೇ ಮಹಡಿಯ ಕಿಟಕಿಯ ಹೊರಗೆ ಅಳವಡಿಸಲಾದ ಲೋಹದ ಗ್ರಿಲ್‌ನಲ್ಲಿ ಸಿಲುಕಿಕೊಂಡರು.
10ನೇ ಮಹಡಿಯಿಂದ ಬಿದ್ದ ವ್ಯಕ್ತಿ; ವಿಡಿಯೊ ನೋಡಿ:
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ರಕ್ಷಣಾ ತಂಡವು ಅವರನ್ನು ಉಳಿಸಲು ಪ್ರಯತ್ನ ಮಾಡಿದೆ. ಈ ರಕ್ಷಣಾ ಕಾರ್ಯ ಪ್ರಾರಂಭಿಸುವ ಮೊದಲು ಅವರು ಸುಮಾರು ಒಂದು ಗಂಟೆಗಳ ಕಾಲ ತಲೆ ಕೆಳಗಾಗಿ ನೇತಾಡುತ್ತಿದ್ದರು. ಸುಮಾರು 80 ಅಡಿ ಎತ್ತರದಲ್ಲಿ ಕೇವಲ ಒಂದು ಕಾಲಿನಲ್ಲಿ ತಲೆ ಕೆಳಗಾಗಿ ನೇತಾಡುತ್ತಿದ್ದ ನಿತಿನ್ ಅವರ ಸ್ಥಿತಿ ಕಂಡು ಸ್ಥಳೀಯರೇ ಬೆಚ್ಚಿ ಬಿದ್ದಿದ್ದಾರೆ. ರಕ್ಷಣಾ ತಂಡ ಧಾವಿಸಿ ಮೊದಲು 10ನೇ ಮಹಡಿಯಿಂದ ಹಗ್ಗಗಳನ್ನು ಇಳಿಸಿ ನಿತಿನ್ ಅವರಿಗೆ 'ಸೇಫ್ಟಿ ಬೆಲ್ಟ್' ಮೂಲಕ ಕೆಳಕ್ಕೆ ಬೀಳದಂತೆ ಭದ್ರಪಡಿಸಿತು.
ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!
ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ನಂತರ ನಿತಿನ್ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಅವರ ಕಾಲಿಗೆ ಸ್ವಲ್ಪ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ಘಟನೆಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಈ ದೃಶ್ಯ ಭಯಾನಕವಾಗಿದೆ, ರಕ್ಷಕರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಅದೃಷ್ಟಶಾಲಿ ವ್ಯಕ್ತಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಗ್ನಿಶಾಮಕದಳದ ಸಮಯಪ್ರಜ್ಞೆ ಮತ್ತು ನಿತಿನ್ ಅವರ ಅದೃಷ್ಟಕ್ಕೆ ಜನರು ಮೆಚ್ಚುಗೆ ತಿಳಿಸಿದ್ದಾರೆ.