ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕುದುರೆ ಮೂಲಕ ಆರ್ಡರ್ ತಲುಪಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್: ವೈರಲ್‌ ವಿಡಿಯೊ ನೋಡಿ

Viral Video: ಡೆಲಿವರಿ ಬಾಯ್ ಒಬ್ಬರು ಕುದುರೆ ಸವಾರಿ ಮೂಲಕ ಬ್ಲಿಂಕ್‌ಇಟ್‌ ಆರ್ಡರ್ ತಲುಪಿಸಿದ ಘಟನೆವೊಂದು ನಡೆದಿದೆ. ರಾಜಸ್ಥಾನದಲ್ಲಿ ಈ ದೃಶ್ಯ ಕಂಡು ಬಂದಿದ್ದು ವೈರಲ್ ಆಗಿರುವ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿಯು ಹಗಲು ಹೊತ್ತಿನಲ್ಲಿಯೇ ಜನನಿಬಿಡ ರಸ್ತೆಯಲ್ಲಿ ಕುದುರೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ.

ಕುದುರೆಯ ಮೇಲೆ ಆರ್ಡರ್ ತಲುಪಿಸಿದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್

ಕುದುರೆ ಸವಾರಿ ಮೂಲಕ ಆರ್ಡರ್ ತಲುಪಿಸಿದ ಡೆಲಿವರಿ ಬಾಯ್ -

Profile
Pushpa Kumari Feb 24, 2026 2:58 PM

ಜೈಪುರ, ಫೆ. 24: ಇತ್ತೀಚಿನ ದಿನಗಳಲ್ಲಿ ಏನೇ ಅಗತ್ಯ ವಸ್ತು ಬೇಕೆಂದಾಗ ಆನ್‌ಲೈನ್ ಮೂಲಕ ಆರ್ಡರ್ ಮಾಡುತ್ತೇವೆ. ಅದರಲ್ಲೂ ಕೆಲವೇ ನಿಮಿಷಗಳಲ್ಲಿ ಸಾಮಗ್ರಿಗಳನ್ನು ತಲುಪಿಸುವ ಆ್ಯಪ್‌ಗಳಾದ ಬ್ಲಿಂಕ್‌ಇಟ್‌, ಜಿಯೋ ಮಾರ್ಟ್‌ನಂತಹ ಕ್ವಿಕ್-ಕಾಮರ್ಸ್ ಸಂಸ್ಥೆಗಳು ಹೆಚ್ಚು ಸುದ್ದಿಯಲ್ಲಿವೆ. ಇದೀಗ ಡೆಲಿವರಿ ಬಾಯ್ ಒಬ್ಬರು ಕುದುರೆ ಸವಾರಿ ಮೂಲಕ ಬ್ಲಿಂಕ್‌ಇಟ್‌ ಆರ್ಡರ್ ಅನ್ನು ತಲುಪಿಸಿದ ಘಟನೆ ನಡೆದಿದ್ದು, ವಿಡಿಯೊ ವೈರಲ್‌ (Viral Video) ಆಗಿದೆ.

ರಾಜಸ್ಥಾನದಲ್ಲಿ ಈ ದೃಶ್ಯ ಕಂಡು ಬಂದಿದ್ದು ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಯು ಹಗಲು ಜನನಿಬಿಡ ರಸ್ತೆಯಲ್ಲಿ ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಆದಾಗ್ಯೂ ಎಲ್ಲರ ಗಮನ ಸೆಳೆದದ್ದು ಕುದುರೆ ಅಲ್ಲ, ಬದಲಾಗಿ ಆತ ಹೊತ್ತೊಯ್ಯುತ್ತಿದ್ದ ಹಳದಿ ಬ್ಲಿಂಕ್‌ಇಟ್‌ ಡೆಲಿವರಿ ಬ್ಯಾಗ್. ಸದ್ಯ ಈ ವಿಡಿಯೊ ಕಂಡು ನೆಟ್ಟಿಗರೇ ಶಾಕ್ ಆಗಿದ್ದಾರೆ.

ವಿಡಿಯೊ ಇಲ್ಲಿದೆ:

ಬ್ಲಿಂಕ್‌ಇಟ್‌ ತನ್ನ ಅತಿ ವೇಗದ ವಿತರಣೆಗಳಿಗೆ ವ್ಯಾಪಕವಾಗಿ ಹೆಸರುವಾಸಿ. ಇದನ್ನು ಸಾಮಾನ್ಯವಾಗಿ ಸ್ಕೂಟರ್‌, ಬೈಕ್‌ ಅಥವಾ ಎಲೆಕ್ಟ್ರಿಕ್ ವಾಹನಗಳಲ್ಲಿ ಸಾಗಿಸಲಾಗುತ್ತದೆ. ಇದೀಗ ರಾಜಸ್ಥಾನದ ಈ ದೃಶ್ಯ ಬಳಕೆದಾರರನ್ನು ರಂಜಿಸಿದೆ. ರಸ್ತೆಯೊಂದರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದು, ಅವರ ಬೆನ್ನಿನ ಮೇಲೆ ಬ್ಲಿಂಕಿಟ್‌ನ ಹಳದಿ ಬಣ್ಣದ ಡೆಲಿವರಿ ಬ್ಯಾಗ್ ಕಂಡು ಬಂದಿದೆ. ವೈರಲ್‌ ಆದ ವಿಡಿಯೊದಲ್ಲಿ ಸವಾರನು ಆತ್ಮವಿಶ್ವಾಸದಿಂದ ಕುದುರೆ ಮೇಲೆ ತೆರಳುತ್ತಿರುವುದನ್ನು ನೋಡಬಹುದು.

ರಾಜಸ್ಥಾನದಲ್ಲಿ ಆರ್ಡರ್ ಕುದುರೆಯ ಮೇಲೆ ಬರಬಹುದು ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಕ್ಲಿಪ್ ಶೇರ್ ಮಾಡಲಾಗಿದೆ. ಇಲ್ಲಿ ಕುದುರೆಗಳೇ ಅತಿ ವೇಗದ ಸಾರಿಗೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಆದರೆ ವಿಡಿಯೊದಲ್ಲಿರುವ ವ್ಯಕ್ತಿ ನಿಜವಾಗಿಯೂ ಬ್ಲಿಂಕ್‌ಇಟ್‌ಗಾಗಿ ವಿತರಣೆ ಮಾಡುತ್ತಿದ್ದನೇ ಎಂಬುದು ಸ್ಪಷ್ಟವಾಗಿಲ್ಲ