ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೆಲಿವರಿ ಬಾಯ್‌ಗೆ ರಾಖಿ ಕಟ್ಟಿದ ಯುವತಿ: ಜೇಬಿನಲಿದ್ದ 50 ರೂ ಉಡುಗೊರೆಯಾಗಿ ನೀಡಿದ ಸಿಬ್ಬಂದಿ! ಹೃದಯಸ್ಪರ್ಶಿ ದೃಶ್ಯ!

Viral Video: ಮನೆ ಬಾಗಿಲಿಗೆ ಬಂದ ಡೆಲಿವರಿ ಸಿಬ್ಬಂದಿಗೆ ಯುವತಿಯೊಬ್ಬಳು ರಾಖಿ ಕಟ್ಟಿ ಆತನನ್ನು ಅಣ್ಣನ ಸ್ಥಾನದಲ್ಲಿ ನೋಡಿದ್ದಾಳೆ.‌ ಡೆಲಿವರಿ ಬಾಯ್ ಕೂಡ ಬಹಳ ಖುಷಿಯಿಂದ ತನ್ನ ಕೈಯನ್ನು ಮುಂಭಾಗಕ್ಕೆ ಚಾಚಿ, ಮುಖದಲ್ಲಿ ಮುಗ್ಧ ನಗುವಿನೊಂದಿಗೆ ರಾಖಿ ಕಟ್ಟಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ರಾಖಿ ಕಟ್ಟಿದ ಯುವತಿಗೆ 50 ರೂಪಾಯಿ ಉಡುಗೊರೆ ನೀಡಿದ ಡೆಲಿವರಿ ಬಾಯ್!

ರಾಖಿ ಕಟ್ಟಿದ ಯುವತಿಗೆ 50 ರೂಪಾಯಿ ಉಡುಗೊರೆ ನೀಡಿದ ಡೆಲಿವರಿ ಬಾಯ್ -

Profile
Pushpa Kumari Aug 29, 2026 3:28 PM

ನವದೆಹಲಿ,ಆ.29: ರಕ್ಷಾಬಂಧನದ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿತ್ತು.‌ ಕೇವಲ ಅಣ್ಣ- ತಂಗಿಯ ಹಬ್ಬವಷ್ಟೇ ಅಲ್ಲದೆ ಸ್ನೇಹ,ಪ್ರೀತಿ ವಾತ್ಸಲ್ಯದ ಸಂಕೇತ ಎಂದು ಭಾವಿಸಿ ಆಚರಣೆ ಮಾಡಲಾಗಿದೆ.ಇದಕ್ಕೆ ಸಾಕ್ಷಿ ಎನ್ನುವಂತೆ ಮನೆ ಬಾಗಿಲಿಗೆ ಬಂದ ಡೆಲಿವರಿ ಸಿಬ್ಬಂದಿಗೆ ಯುವತಿಯೊಬ್ಬಳು ರಾಖಿ ಕಟ್ಟಿ ಆತನನ್ನು ಅಣ್ಣನ ಸ್ಥಾನದಲ್ಲಿ ನೋಡಿದ್ದಾಳೆ.‌ ಡೆಲಿವರಿ ಬಾಯ್ ಕೂಡ ಬಹಳ ಖುಷಿಯಿಂದ ತನ್ನ ಕೈಯನ್ನು ಮುಂಭಾಗಕ್ಕೆ ಚಾಚಿ, ಮುಖದಲ್ಲಿ ಮುಗ್ಧ ನಗುವಿನೊಂದಿಗೆ ರಾಖಿ ಕಟ್ಟಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.

ರಕ್ಷಾ ಬಂಧನವೆಂದರೆ ಸೌಹಾರ್ದತೆಯ ಸಂಕೇತ ಎಂಬುದನ್ನು ಯುವತಿ ತೋರಿಸಿಕೊಟ್ಟಿದ್ದಾರೆ. ಆಕಾಂಕ್ಷಾ ಎನ್ನುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮನೆಗೆ ಡೆಲಿವರಿ ಕೊಡಲು ಬಂದ ಏಜೆಂಟ್ ಗೆ ಆಕಾಂಕ್ಷ ರಾಖಿ ಕಟ್ಟಲು ಮುಂದಾಗುತ್ತಾರೆ. ಡೆಲಿವರಿ ಬಾಯ್ ಕೂಡ ಬಹಳ ಸಂತೋಷದಿಂದ ತನ್ನ ಕೈಯನ್ನು ಮುಂದಕ್ಕೆ ಚಾಚಿ ರಾಖಿ ಕಟ್ಟಿಸಿಕೊಂಡಿದ್ದಾರೆ.

ವಿಡಿಯೋ ನೋಡಿ:

ರಾಖಿ ಕಟ್ಟಿದ ನಂತರ, ಆಕಾಂಕ್ಷಾ ಗೌರವದ ಸೂಚಕವಾಗಿ ಅವರ ಪಾದಗಳನ್ನು ಸ್ಪರ್ಶಿಸಲು ನಮಸ್ಕರಿಸಿದ್ದಾರೆ. ವಿತರಣಾ ಏಜೆಂಟ್ ಕೂಡ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯೆ ನೀಡುತ್ತಾ, ಆಕೆಯ ಪಾದಗಳನ್ನು ಮುಟ್ಟಿ ಗೌರವ ಸೂಚಿಸುತ್ತಾನೆ‌. ಅಷ್ಟೇ ಅಲ್ಲದೆ ಇದರ ಪ್ರತಿಯಾಗಿ ಆತ ತನ್ನ ಜೇಬಿನಲ್ಲಿದ್ದ 50 ರೂಪಾಯಿ ನೋಟನ್ನು ತೆಗೆದು ಉಡುಗೊರೆ ರೂಪದಲ್ಲಿ ನೀಡುತ್ತಾನೆ. ಯುವತಿ ಈ ಹಣವನ್ನು ತೆಗೆದುಕೊಳ್ಳಲು ನಿರಾಕರಣೆ ಮಾಡಿದರೂ ತಾನು ತಂಗಿ ಎಂದು ಸ್ವೀಕರಿಸಲಿಲ್ಲವೇ? ತೆಗೆದುಕೊಳ್ಳಲೇಬೇಕು ಎಂದು ಆಕೆಯಲ್ಲಿ ಪದೇ ಪದೇ ವಿನಂತಿಸಿದ್ದಾರೆ.

Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ

ಈ ಮೊತ್ತವು ಹಣಕಾಸಿನ ಮೌಲ್ಯಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಮಹತ್ವವನ್ನು ಹೊಂದಿರುವಂತೆ ತೋರುತ್ತಿತ್ತು. ಆ ಕ್ಷಣದ ಹಿಂದಿನ ಪ್ರೀತಿ ಮತ್ತು ವಾತ್ಸಲ್ಯದ ಪರವಾಗಿ ರೂ. 50 ನೋಟನ್ನು ಸಂರಕ್ಷಿಸಲು ಬಯಸಿದ್ದೇನೆ. ಈ ನೋಟನ್ನು ಅವರ ಪ್ರೀತಿಯ ಕಾಣೆಕೆಯಾಗಿ ಸದಾ ಕಾಯ್ದುಕೊಳ್ಳುವುದಾಗಿ ಆಕಾಂಕ್ಷಾ ಬರೆದಿದ್ದಾರೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಬಳಕೆದಾರ ರೊಬ್ಬರು ಭಾವನಾತ್ಮಕ ಮೌಲ್ಯವು ಹಣಕ್ಕಿಂತ ಹೆಚ್ಚು ಮುಖ್ಯವಾಗಿದೆ ಎಂದರು. ಮತ್ತೊಬ್ಬರು ಅರ್ಥಪೂರ್ಣ ರಕ್ಷಾ ಬಂಧನ ಆಚರಣೆ ಅಂದರು.