ಕೇವಲ 3 ಲೈಕ್ಸ್‌ಗಾಗಿ ಸಂಭ್ರಮಿಸಿದ ವೃದ್ಧ ದಂಪತಿಗಳ ಕ್ಯೂಟ್ ವಿಡಿಯೊ: ಭಾರೀ ವೈರಲ್ ಆಯ್ತು ಅಜ್ಜ-ಅಜ್ಜಿಯ ಮುಗ್ಧತೆ!
Viral Video: ಇಲ್ಲೊಂದು ವೃದ್ದ ದಂಪತಿಗಳು ಕೇವಲ ಮೂರು ಲೈಕ್ಸ್ ಗಾಗಿ ಖುಷಿ ಪಟ್ಟ ಸಂಭ್ರಮದ ಕ್ಷಣ ಭಾರೀ ವೈರಲ್ ಆಗಿದೆ. ಇಂದಿನ ಕಾಲದಲ್ಲಿ ಸಾವಿರಾರು ಲೈಕ್ಸ್ ಸಿಕ್ಕರೂ ತೃಪ್ತಿಪಡದವರ ನಡುವೆ, ಕೇವಲ ಈ ಮೂರು ಲೈಕ್ಸ್‌ಗಳಿಗೆ ಸಂಭ್ರಮಿಸಿದ ವೃದ್ಧ ದಂಪತಿಯ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ...
ಮೂರು ಲೈಕ್ ಗಾಗಿ ಖುಷಿಪಟ್ಟ ವೃದ್ಧ ದಂಪತಿಗಳು -
ದೆಹಲಿ,ಜ.25: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ವಿವಿಧ ರೀತಿಯ ವಿಡಿಯೊ ಮಾಡಿ ಸುದ್ದಿಯಾಗುವವರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಜಾಸ್ತಿ ಲೈಕ್ಸ್, ಕಾಮೆಂಟ್ ಗಾಗಿ ವಿವಿಧ ಕಂಟೆಂಟ್ ಮಾಡಿ ವೈರಲ್ (Viral Video) ಆಗ್ತಾರೆ. ಆದರೆ ಇಲ್ಲೊಂದು ವೃದ್ದ ದಂಪತಿಗಳು ಕೇವಲ ಮೂರು ಲೈಕ್ಸ್ ಗಾಗಿ ಖುಷಿ ಪಟ್ಟ ಸಂಭ್ರಮದ ಕ್ಷಣ ಭಾರೀ ವೈರಲ್ ಆಗಿದೆ. ಇಂದಿನ ಕಾಲದಲ್ಲಿ ಸಾವಿರಾರು ಲೈಕ್ಸ್ ಸಿಕ್ಕರೂ ತೃಪ್ತಿಪಡದವರ ನಡುವೆ, ಕೇವಲ ಈ ಮೂರು ಲೈಕ್ಸ್‌ಗಳಿಗೆ ಸಂಭ್ರಮಿಸಿದ ವೃದ್ಧ ದಂಪತಿಯ ವಿಡಿಯೋವೊಂದು ನೆಟ್ಟಿಗರ ಮನ ಗೆದ್ದಿದೆ.
ಜೀವನದಲ್ಲಿ ಸಣ್ಣ ವಿಚಾರಗಳನ್ನು ಕೂಡವ ಆನಂದಿಸಬೇಕು ಎಂಬುವುದಕ್ಕೆ ಈ ವಿಡಿಯೊವೇ ಸಾಕ್ಷಿಯಾಗಿದೆ. ಇತ್ತೀಚೆಗೆ ಇನ್ ಸ್ಟ್ರಾ ದಲ್ಲಿ ಈ ವೀಡಿಯೊ ಹೈಲೈಟ್ ಆಗಿದೆ. ವೃದ್ಧ ದಂಪತಿಗಳ ಮುಗ್ಧತೆ ಮತ್ತು ಸರಳತೆಯು ಇಂಟರ್ನೆಟ್‌ನಲ್ಲಿ ಅನೇಕರ ಗಮನ ಸೆಳೆದಿದೆ. ದೆಹಲಿಯಲ್ಲಿ ವಾಸ ವಿರುವ ಉತ್ತರ ಪ್ರದೇಶ ಮೂಲದ ಸುಮಿತ್ರಾ ಸಿಂಗ್ ಅವರ amma_at_65 ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಈ ಖಾತೆಯನ್ನು ಅವರ ಮೊಮ್ಮಗಳು ನಿರ್ವಹಿಸುತ್ತಿದ್ದಾರೆ.
ವಿಡಿಯೋ ನೋಡಿ:
ಕೆಲವು ದಿನಗಳ ಹಿಂದೆ ಸುಮಿತ್ರಾ ಸಿಂಗ್ ಅವರು ಮನೆಯಲ್ಲಿ ಪೂಜೆ ಮಾಡುತ್ತಾ 'ಓಂ ಜೈ ಜಗದೀಶ್ ಹರೇ' ಎಂದು ಭಜನೆ ಮಾಡಿರುವ ವಿಡಿಯೊವನ್ನು ಶೇರ್ ಮಾಡಿದ್ದರು. ಇದನ್ನು ಹಿರಿಯ ವ್ಯಕ್ತಿ ತನ್ನ ಪತ್ನಿಯಲ್ಲಿ ಇದನ್ನು ಮೂರು ಜನರು ಇಷ್ಟಪಟ್ಟಿದ್ದಾರೆ ಎಂದು ಖುಷಿ ವ್ಯಕ್ತಿ ಪಡಿಸಿದ್ದಾರೆ. ಈ ವಿಡಿಯೊವನ್ನು ಮೊಮ್ಮಗಳು ಶೇರ್ ಮಾಡಿದ್ದು, ಮೂರು ಲೈಕ್ ಗೆ ಅವರು ತುಂಬಾ ಸಂತೋಷಪಡುತ್ತಿದ್ದಾರೆ. ಅದು ವೈರಲ್ ಆಗುತ್ತಿದ್ದರೆ ಏನಾಗುತ್ತಿತ್ತು? ಎಂಬ ಶೀರ್ಷಿಕೆಯನ್ನು ಹಾಕಿದ್ದಾರೆ
Viral Video: ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಅಜ್ಜ-ಅಜ್ಜಿಯ ಈ ವಿಡಿಯೋ ನೋಡಿದ ನೆಟ್ಟಿಗರು ಅವರ ಮುಗ್ಧತೆಗೆ ಫಿದಾ ಆಗಿದ್ದಾರೆ. ಕೇವಲ ಮೂರೇ ಲೈಕ್ಸ್ ಕಂಡು ಸಂಭ್ರಮಿಸಿದ ಆ ವಿಡಿಯೋ ಈಗ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ವೀಕ್ಷಣೆ ಹಾಗೂ 8,500 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಹಲವಾರು ಬಳಕೆದಾರರು ದಂಪತಿಗಳ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ದಂಪತಿಗಳ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದ ನಂತರ, ಜನವರಿ 24 ರ ಶನಿವಾರ ಖಾತೆಯಿಂದ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿ, ಇದು ಈಗ ಒಂದು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂದು ಅವರು ತಮ್ಮ ಮೊಮ್ಮಗಳಿಗೆ ಹಿಂದಿನ ಪೋಸ್ಟ್ ಅನ್ನು ತೋರಿಸುತ್ತಾ ಹೇಳಿದ್ದಾರೆ. ತಮಗೆ ಪ್ರೀತಿ ನೀಡಿದ ಎಲ್ಲರಿಗೂ, ಎಲ್ಲಾ ಮಕ್ಕಳಿಗೂ ಆಶೀರ್ವಾದಗಳು ಎಂದು ಪ್ರೀತಿಯಿಂದ ಹಾರೈಸಿದ್ದಾರೆ.