ಮಗಳ ರೀಲ್ಸ್‌ನಲ್ಲಿ ತಂದೆಯ ಮಸ್ತ್ ಡ್ಯಾನ್ಸ್: ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೆಪ್‌ಗೆ ನೆಟ್ಟಿಗರು ಫಿದಾ
Viral Video: ಇಲ್ಲೊಬ್ಬರು ತಂದೆ ಮಗಳ ರೀಲ್ಸ್‌ನಲ್ಲಿ ಮಸ್ತ್ ಸ್ಟೆಪ್ ಹಾಕಿದ್ದಾರೆ. ಮೈಕೆಲ್ ಜಾಕ್ಸನ್ ಶೈಲಿಯ ಮೂನ್ ವಾಕ್ ಸ್ಟೆಪ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಈ ಮೂಲಕ ತಂದೆ ಮನೆಯ ಜವಾಬ್ದಾರಿ ನಿಭಾಯಿಸುವುದು ಮಾತ್ರವಲ್ಲ ಮಕ್ಕಳ ಖುಷಿಯಲ್ಲೂ ಬಹು ಮುಖ್ಯ ಪಾತ್ರವಹಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಮಗಳ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ತಂದೆ -
ನವದೆಹಲಿ,ಮಾ.18: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಶ್ರಮ ಅಪಾರ. ಹೆಚ್ಚಿನ ಮನೆಯಲ್ಲಿ ತಾಯಿ ಪ್ರೀತಿ ವಾತ್ಸಲ್ಯ ತೋರಿಸಿದರೆ ತಂದೆ ಕಟ್ಟುನಿಟ್ಟಾಗಿ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಇಲ್ಲೊಬ್ಬರು ತಂದೆ ಮಗಳ ರೀಲ್ಸ್‌ನಲ್ಲಿ ಮಸ್ತ್ ಸ್ಟೆಪ್ ಹಾಕಿದ್ದಾರೆ. ಮೈಕೆಲ್ ಜಾಕ್ಸನ್ ಶೈಲಿಯ ಮೂನ್ ವಾಕ್ ಸ್ಟೆಪ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ (Viral Video) ಸದ್ದು ಮಾಡಿದ್ದಾರೆ. ಈ ಮೂಲಕ ತಂದೆ ಮನೆಯ ಜವಾಬ್ದಾರಿ ನಿಭಾಯಿಸುವುದು ಮಾತ್ರವಲ್ಲ ಮಕ್ಕಳ ಖುಷಿಯಲ್ಲೂ ಬಹು ಮುಖ್ಯ ಪಾತ್ರದಾರರು ಎಂದು ತೋರಿಸಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ಮನೆಯಲ್ಲಿ ತಂದೆ ಅಂದಾಗ ಶಿಸ್ತಿನ ಸಿಪಾಯಿ ಆಗಿರುತ್ತಾರೆ. ಆದರೆ ಇಲ್ಲೊಬ್ಬ ತಂದೆ ಮಗಳ ಜತೆ ಸೇರಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಮಗಳು ಮೈಕೆಲ್ ಜಾಕ್ಸನ್ ಅವರ ಬಿಲ್ಲಿ ಜೀನ್ ಹಾಡಿಗೆ ನೃತ್ಯ ಮಾಡುತ್ತಾ ರೆಕಾರ್ಡ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮಗಳ ವಿಡಿಯೊಕ್ಕೆ ಎಂಟ್ರಿ ಕೊಟ್ಟ ತಂದೆ ಮೂನ್‌ವಾಕ್ ಸ್ಟೆಪ್ ಮಾಡಿದ್ದಾರೆ. ಮೈಕಲ್ ಜಾಕ್ಸನ್ ಸ್ಟೈಲ್ ಮೂಲಕವೇ ಸ್ಟೆಪ್ ಹಾಕುತ್ತಾ ಭಾರಿ ವೈರಲ್ ಆಗಿದ್ದಾರೆ.
ವಿಡಿಯೊ ನೋಡಿ:
ವಿಶೇಷ ಎಂದರೆ ತಂದೆ ಯಾವುದೇ ಶೂ ಧರಿಸದೇ ಸಾಮಾನ್ಯವಾಗಿ ಮನೆಯಲ್ಲೇ ಹಾಕುವ ಚಪ್ಪಲಿ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೊ ಸಾಮಾನ್ಯ ರೀಲ್‌ನಂತೆ ಪ್ರಾರಂಭವಾಗಿದ್ದು, ಜಾಕ್ಸನ್ ಅವರ ಐಕಾನಿಕ್ ಬಿಲ್ಲಿ ಜೀನ್‌ಗೆ ಯುವತಿ ನೃತ್ಯ ಮಾಡುವುದನ್ನು ಕಾಣಬಹುದು. ಎಲ್ಲಿಂದಲೋ, ಬಂದ ಅವರ ತಂದೆ ಮಧ್ಯ ಪ್ರವೇಶಿಸಿ ಸಖತ್ ಸ್ಟೆಪ್ ಹಾಕಿದ್ದಾರೆ.
ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ?
ಒಂದು ದಿನದ ಹಿಂದೆ ಹಂಚಿಕೊಂಡ ಈ ವಿಡಿಯೊ ವೈರಲ್ ಆಗಿ ಹದಿನೈದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿತು. ತಂದೆಯ ಪ್ರತಿಭೆಯ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ಇವರು ಜಗತ್ತಿನ ಬೆಸ್ಟ್ ಡ್ಯಾನ್ಸರ್ ಎಂದು ಬರೆದುಕೊಂಡಿದ್ದಾರೆ.