ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

''ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕು": ಬಸ್‌ನಲ್ಲಿ ವೃದ್ಧನ ರಂಪಾಟ; ಇಂತಹವರು ಹೊರಗೆ ಬರೋದ್ಯಾಕೆ? ನೆಟ್ಟಿಗರ ಆಕ್ರೋಶ

Viral Video: ವೃದ್ಧನೊಬ್ಬ ಮಹಿಳೆಯರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ತಮ್ಮನ್ನು ತಾವು ಪಂಡಿತ ಎಂದು ಹೇಳಿಕೊಂಡಿದ್ದ ವ್ಯಕ್ತಿ ಮಹಿಳೆಯರ ಉಡುಪು ಹಾಗೂ ಸ್ವಾತಂತ್ರ್ಯ ಬಗ್ಗೆ ಮಾತನಾಡಿದ್ದು ಮಹಿಳೆಯರ ಕೆಂಗಣ್ಣಿಗೆ ಕಾರಣವಾಗಿದೆ. ಈ ವಿಡಿಯೊ ವೈರಲ್‌ ಆಗಿದೆ.

ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವೃದ್ಧ: ವಿಡಿಯೊ ವೈರಲ್

ಬಸ್‌ನಲ್ಲಿಯೇ ವೃದ್ಧನ ರಂಪಾಟ -

Profile
Pushpa Kumari Mar 28, 2026 5:10 PM

ದೆಹಲಿ, ಮಾ. 28: ಸಾರ್ವಜನಿಕ ಬಸ್ಸಿನಲ್ಲಿ ವೃದ್ಧ ವ್ಯಕ್ತಿಯೊಬ್ಬರ ವಿವಾದಾತ್ಮಕ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ವೃದ್ಧನೊಬ್ಬ ಮಹಿಳೆಯರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. ತಮ್ಮನ್ನು ತಾವು ಪಂಡಿತ ಎಂದು ಹೇಳಿಕೊಂಡಿದ್ದ ವ್ಯಕ್ತಿ ಮಹಿಳೆಯರ ಉಡುಪು ಹಾಗೂ ಸ್ವಾತಂತ್ರ್ಯ ಬಗ್ಗೆ ಮಾತನಾಡಿದ್ದು ಮಹಿಳೆಯರ ಕೆಂಗಣ್ಣಿಗೆ ಕಾರಣವಾಗಿದೆ.

ಸಾರ್ವಜನಿಕ ಬಸ್ಸಿನೊಳಗೆ ರೆಕಾರ್ಡ್ ಮಾಡಲಾದ ವಿಡಿಯೊ ಇದಾಗಿದ್ದು, ಆಕ್ರೋಶ ಹುಟ್ಟುಹಾಕಿದೆ. ಹಣೆಯ ಮೇಲೆ ತಿಲಕ ಧರಿಸಿದ ಆತ ಸಹಪ್ರಯಾಣಿಕರೊಂದಿಗೆ ವಾಗ್ವಾದ ಮಾಡಿದ್ದಾನೆ. ಈ ನಡುವೆ ಮಹಿಳೆಯರ ಸ್ವಾತಂತ್ರ್ಯ ಬಗ್ಗೆಯೂ ಮಾತನಾಡಿದ್ದಾನೆ.

ವಿಡಿಯೊ ನೋಡಿ:

"ಹೆಣ್ಣು ಯಾವತ್ತಿದ್ದರೂ ಮನೆಯಲ್ಲಿಯೇ ಇರಬೇಕು. ಆಗ ಮಾತ್ರ ಗೌರವ ಸಿಗುತ್ತದೆ. ಆಕೆ ಸೂಟ್ ಧರಿಸುವುದರಿಂದ ಮಹಿಳೆಯಾಗುವುದಿಲ್ಲ" ಎಂದಿದ್ದಾರೆ. ಮಹಿಳೆಯರ ಜತೆ ವಾಗ್ದಾಳಿ ನಡೆಸುತ್ತ ಬಟ್ಟೆ ತೊಡುವುದಕ್ಕೂ ಒಂದು ಮಿತಿ ಇರುತ್ತದೆ ಎಂದು ಭೋದನೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಅಲ್ಲೇ ಕಿಡಿಕಾರಿದ್ದಾರೆ.

ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್; ವಿಡಿಯೋ ನೋಡಿ

ಹೆಚ್ಚಿನ ಬಳಕೆದಾರರು ಈ ಹೇಳಿಕೆಗಳನ್ನು ಖಂಡಿಸಿದ್ದಾರೆ. ಭಾರತದಲ್ಲಿ ಮಹಿಳೆಯರು ಎಲ್ಲ ವೃತ್ತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಇಂತಹ ಅಭಿಪ್ರಾಯಗಳು ಮಹಿಳೆಯ ಗೌರವವನ್ನು ಹಾಳು ಮಾಡುತ್ತವೆ ಎಂದು ಹಲವರು ಹೇಳಿದ್ದಾರೆ. ಇಂತಹ ವ್ಯಕ್ತಿಗಳು ಯಾವತ್ತು ಬದಲಾಗಲ್ಲ ಎಂದು ಅನೇಕರು ವೃದ್ಧನ ಮಾತಿಗೆ ಆಕ್ರೋಶ ಹೊರ ಹಾಕಿದ್ದಾರೆ.