ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೋಟೆಲ್ ರೂಮ್‌ನಲ್ಲಿ ಮಲಗಿದ ದಂಪತಿ ತಲೆ ಬಳಿ ಹರಿದಾಡಿದ ನಾಗರಹಾವು: ಭಯಾನಕ ವಿಡಿಯೊ

Viral Video: ಥೈಲ್ಯಾಂಡ್‌ಗೆ ಪ್ರವಾಸಕ್ಕೆಂದು ತೆರಳಿದ ದಂಪತಿಗೆ ಅಘಾತಕಾರಿ ಸನ್ನಿವೇಶವೊಂದು ಎದುರಾಗಿದೆ. ಹೋಟೆಲ್ ರೂಮಿನಲ್ಲಿ ತಂಗಿದ್ದ ಸಂದರ್ಭದಲ್ಲಿ ಹಾವೊಂದು ತಲೆ ಪಕ್ಕದಲ್ಲಿ ಹಾದು ಹೋಗಿದೆ. ಈ ದೃಶ್ಯ ಕಂಡ ದಂಪತಿ ದಂಗಾಗಿದ್ದಾರೆ. ಸದ್ಯ ಈ ಘಟನೆ ಇಂಡರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ದಂಪತಿಯ ಹಾಸಿಗೆಯ ಬಳಿ ಬೃಹತ್ ನಾಗರಹಾವು ಪತ್ತೆ

ದಂಪತಿ ಹಾಸಿಗೆಯ ಬಳಿ ಬೃಹತ್ ನಾಗರಹಾವು ಪತ್ತೆ -

Profile
Pushpa Kumari Mar 28, 2026 3:19 PM

ಬ್ಯಾಂಕಾಕ್‌, ಮಾ. 28: ಥೈಲ್ಯಾಂಡ್‌ಗೆ ಪ್ರವಾಸಕ್ಕೆಂದು ತೆರಳಿದ್ದ ದಂಪತಿಗೆ ಅಘಾತಕಾರಿ ಸನ್ನಿವೇಶವೊಂದು ಎದುರಾಗಿದೆ. ಹೋಟೆಲ್ ರೂಮಿನಲ್ಲಿ ತಂಗಿದ್ದ ಸಂದರ್ಭದಲ್ಲಿ ಹಾವೊಂದು ಕೂದಲೆಳೆಯ ಅಂತರದಲ್ಲಿ ಹಾದು ಹೋಗಿದೆ. ಈ ದೃಶ್ಯ (Viral News) ಕಂಡ ದಂಪತಿ ದಂಗಾಗಿದ್ದಾರೆ. ಥೈಲ್ಯಾಂಡ್‌ನ ಪ್ರವಾಸಿ ಸ್ಥಳವಾದ ಕ್ರಾಬಿಯಲ್ಲಿ ಈ ಘಟನೆ ನಡೆದಿದೆ. ತಾವು ಮಲಗಿದ್ದ ಹಾಸಿಗೆಯ ಮೇಲೆಯೇ ಬೃಹತ್ ನಾಗರಹಾವು ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಮಲಗಿದ್ದ ಹಾಸಿಗೆಯ ಮೇಲೆಯೇ ಬೃಹತ್ ನಾಗರಹಾವು ಇರುವುದನ್ನು ಕಂಡು ದಂಪತಿ ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದಂಪತಿ ಪೈಕಿ ಒಬ್ಬರು ಇದ್ದಕ್ಕಿದ್ದಂತೆ ಭಯಭೀತರಾಗಿ ಎಚ್ಚರಗೊಂಡಿದ್ದು, ಕೋಣೆಯಲ್ಲಿ ಹಾವು ಇದೆ ಎಂದು ಕಿರುಚಿದ್ದಾರೆ. ಆರಂಭದಲ್ಲಿ ಪ್ರತ್ಯೇಕ ಹಾಸಿಗೆಯ ಮೇಲೆ ಮಲಗಿದ್ದ ಸಂಗಾತಿ, ಇದು ಕನಸು ಆಗಿರಬಹುದೆಂದು ಎಂದುಕೊಂಡಿದ್ದಾರೆ.

ವಿಡಿಯೊ ನೋಡಿ:



ಹಾವಿನ ಜೋರಾದ ಬುಸುಗುಟ್ಟುವಿಕೆ ಸದ್ದು ಇಡೀ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿತು. ಬಳಿಕ ವೃತ್ತಿಪರ ಹಾವು ಹಿಡಿಯುವವರನ್ನು ತಕ್ಷಣ ಸ್ಥಳಕ್ಕೆ ಕರೆಸಲಾಯಿತು. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೈರಲ್ ವಿಡಿಯೊದಲ್ಲಿ, ತಜ್ಞರು ಕೊಠಡಿಯನ್ನು ಎಚ್ಚರಿಕೆಯಿಂದ ಶೋಧಿಸುತ್ತಿರುವುದನ್ನು ಕಾಣಬಹುದು.

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಸಾವು; ಅತಿಯಾದ ಒತ್ತಡವೇ ಕಾರಣ ಎಂದು ಕುಟುಂಬಸ್ಥರ ಆರೋಪ

ಹಾಸಿಗೆಯ ಹಿಂದೆ ಮತ್ತು ಕೆಳಗೆ ಅಡಗಿರುವ ಹಾವನ್ನು ಗುರುತಿಸಲಾಯಿತು. ಹಾವು ಸುಮಾರು ಐದು ಅಡಿ ಉದ್ದವಿರಬಹುದು ಎಂದು ಅಂದಾಜಿಸಲಾಗಿದೆ. ಹಾವು ಹಿಡಿಯುವವರು ಅದರ ಸಮೀಪಕಕ್ಕೆ ತೆರಳಿದಾಗ ಅವರ ಮೇಲೆ ಎರಗಲು ಮುಂದಾಗಿದೆ. ಸುಮಾರು ಸಮಯದ ಕಾರ್ಯಾಚರಣೆಯ ನಂತರ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.

ಈ ದೃಶ್ಯ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಬಳಕೆದಾರರೊಬ್ಬರು ಇದು ಪವಾಡವೇ ಸರಿ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ನಿಜವಾಗಿಯೂ ಈ ದೃಶ್ಯ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.