ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಯಸ್ಸು ನೂರಾದರೂ ಕುಂದದ ಜೀವನೋತ್ಸಾಹ; ಟೀ ಮಾರಿ ಜೀವನ ಸಾಗಿಸುವ ಅಜ್ಜಿಗೆ ಜನರು ಫಿದಾ

Viral Video: ವಡೋದರಾದ 103 ವರ್ಷದ ಮಹಿಳೆಯೊಬ್ಬರು ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ ಸ್ವಾವಲಂಬಿಯಾಗಿ ಬದುಕನ್ನು ಸಾಗಿಸುತ್ತಿದ್ದಾರೆ. ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಬಳಿ ಚಹಾ ಅಂಗಡಿಯನ್ನು ನಡೆಸುತ್ತಿರುವ ಅಜ್ಜಿಯ ಕರ್ತವ್ಯ ನಿಷ್ಠೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

103 ನೇ ವಯಸ್ಸಿನಲ್ಲಿ ಟೀ ಮಾರಿ ಬದುಕು ಸಾಗಿಸುವ ಅಜ್ಜಿ: ವಿಡಿಯೊ ನೋಡಿ

ನೂರರ ಹರೆಯದಲ್ಲೂ ಟೀ ಮಾರಿ ಜೀವನ ಸಾಗಿಸುವ ಅಜ್ಜಿ -

Profile
Pushpa Kumari Mar 28, 2026 12:53 PM

ಗುಜರಾತ್, 28: ವಯಸ್ಸು ಅನ್ನೋದು ಕೇವಲ ಸಂಖ್ಯೆಯಷ್ಟೇ.. ಶ್ರಮಪಡುವ ಮನಸ್ಸಿದರೆ ಎಲ್ಲವೂ ಸಾಧ್ಯ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ವಡೋದರಾದ 103 ವರ್ಷದ ಮಹಿಳೆಯೊಬ್ಬರು ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ ಸ್ವಾವಲಂಬಿಯಾಗಿ ಬದುಕನ್ನು ಸಾಗಿಸುತ್ತಿದ್ದಾರೆ. ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಬಳಿ ಚಹಾ ಅಂಗಡಿಯನ್ನು ನಡೆಸುತ್ತಿರುವ ಅಜ್ಜಿಯ ಕರ್ತವ್ಯ ನಿಷ್ಠೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಕಾಶಿಬಾ ಅಜ್ಜಿಯ ಶುಂಠಿ ಚಹಾದ ಸುವಾಸನೆಯು ದಾರಿ ಹೋಕರನ್ನು ಆಕರ್ಷಿಸುತ್ತಲೇ ಇದೆ. ಆದರೆ ಸ್ಟಾಲ್ ನಿಜ ವಾಗಿಯೂ ವಿಶೇಷವಾಗಿಸುವುದು ಪಾನೀಯಕ್ಕೆ ಮಾತ್ರವಲ್ಲ, ಅವರ ವಯಸ್ಸು ಕೂಡ. ವಿಶ್ರಾಂತಿಯನ್ನು ಬಯಸುವ ಸಮಯ ದಲ್ಲಿ, ಕಾಶಿಬಾ ಅಜ್ಜಿ ಸ್ವಾವಲಂಬನೆಯ ಸಂಕೇತವಾಗಿ ನಿಂತಿದ್ದಾರೆ. ತಮ್ಮ ಸಣ್ಣ ವ್ಯವಹಾರವನ್ನು ಯಾರ ಹಂಗಿಲ್ಲದೆ ಅವರು ನಿರ್ವಹಿಸುತ್ತಿದ್ದಾರೆ.

ವಿಡಿಯೋ ನೋಡಿ:

ವಡೋದರಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಹತ್ತಿರ ಅಜ್ಜಿ ಹಲವು ವರ್ಷದಿಂದ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರನ್ನು ಎಲ್ಲರೂ ಪ್ರೀತಿಯಿಂದ 'ಕಾಕಿ' ಎಂಬುದಾಗಿ ಕರೆ ಯುತ್ತಾರೆ. ಸದ್ಯ ಶತಾಯುಷಿ ಕಾಶಿಬಾ ಅವರ ಈ ದೃಶ್ಯವು ಜನರ ಗಮನ ಸೆಳೆದಿದೆ. ತಲೆಮಾರುಗಳ ವಿದ್ಯಾರ್ಥಿ ಗಳಿಗೆ ಪರಿಚಿತವಾಗಿರುವ ಅವರ ಶುಂಠಿ ಚಹಾ ದ ಸುವಾಸನೆಯು ದಾರಿಹೋಕರನ್ನು ಆಕರ್ಷಿಸುತ್ತಲೇ ಇದೆ.

Viral News: ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಈ ವಯಸ್ಸಿನಲ್ಲೂ ಯಾರ ಮೇಲೂ ಅವಲಂಬಿತರಾಗದೆ, ತಮ್ಮ ಸಣ್ಣ ವ್ಯಾಪಾರದ ಮೂಲಕ ಗೌರವಯುತ ಜೀವನ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ಅವರನ್ನು "ನಿಜವಾದ ಪ್ರಭಾವಿ" ಎಂದು ಶ್ಲಾಘಿಸಿದ್ದಾರೆ, ಅನೇಕ ವಿದ್ಯಾರ್ಥಿಗಳು ಅವರ ಅಂಗಡಿಗೆ ಭೇಟಿ ನೀಡಿದ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಅಜ್ಜಿಯ ಚೈತನ್ಯವನ್ನು ಕೊಂಡಾಡಿದ್ದಾರೆ.