ನೈಟಿ ಧರಿಸಿ ಆಂಬುಲೆನ್ಸ್‌ನಲ್ಲಿ ಬಂದು ಎಟಿಎಂ ಹಣ ಕದ್ದ ಖದೀಮರು; ವಿಡಿಯೋ ನೋಡಿ
Viral Video: ಇದೀಗ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಯಾರು ಅನುಮಾನ ಪಡಬಾರದು ಎಂದು ನೈಟಿ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿ ಅಂಬ್ಯುಲೆನ್ಸ್ ನಲ್ಲಿ ಬಂದು ಎಟಿಎಂನ ಹಣ ದೋಚಿದ್ದಾರೆ..
ತೆಲಂಗಾಣದಲ್ಲಿ ನೈಟಿ ಧರಿಸಿ ಎಟಿಎಂ ಹಣ ದೋಚಿದ ದುಷ್ಕರ್ಮಿಗಳು -
ತೆಲಂಗಾಣ,ಅ.12: ಇಂದು ಜಗತ್ತಿನಲ್ಲಿ ವಿಚಿತ್ರ ಘಟನೆಗಳು ಸುದ್ದಿಯಾಗುತ್ತವೆ. ಅದರಲ್ಲೂ ಮೋಸ ,ವಂಚನೆ, ಕಳ್ಳತನ, ದರೋಡೆ ಅನ್ನೋದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು (Viral News) ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಯಾರು ಅನುಮಾನ ಪಡಬಾರದು ಎಂದು ನೈಟಿ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿ ಅಂಬ್ಯುಲೆನ್ಸ್ ನಲ್ಲಿ ಬಂದು ಎಟಿಎಂನ ಹಣ ದೋಚಿದ್ದಾರೆ.
ಇಂದು ಜನರನ್ನು ಯಾಮಾರಿಸಿ ಯಾರಿಗೂ ಸಂದೇಹ ಬರದಂತೆ ದರೋಡೆ ಮಾಡುವ ಪ್ರಕರಣ ಹೆಚ್ಚಾಗಿದೆ.ಇಲ್ಲೂ ಖದೀಮರು ಯಾರು ಅನುಮಾನಪಡದಂತೆ ನೈಟಿ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಅನ್ನು ಒಡೆದು ಹಣ ದೋಚಿದ್ದಾರೆ.
ವಿಡಿಯೋ ನೋಡಿ:
🚨 THIEVES IN NIGHTIES LOOT SBI ATM IN TELANGANA Suspects wearing nighties and masks allegedly arrived in an ambulance and broke into an SBI ATM in Gandhari, Kamareddy district, Telangana in the early hours of October 11. CCTV footage captured the incident. Police have launched an investigation while the amount of cash stolen remains unconfirmed. 🎥 CCTV Footage #Telangana
— contentkikamii (@contentkikamii) October 12, 2026
ಅಕ್ಟೋಬರ್ 11 ರಂದು ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಮ್ ನಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳು ಸುಮಾರು 1 ರಿಂದ 1.30 ರವರೆಗೆ ಆಂಬ್ಯುಲೆನ್ಸ್‌ನಲ್ಲಿ ಎಟಿಎಂಗೆ ಆಗಮಿಸುತ್ತಿರುವ ಶಂಕಿತರನ್ನು ಸೆರೆಹಿಡಿದಿವೆ. ಖದೀಮರು ಕಟಿಂಗ್ ಉಪಕರಣ ಬಳಸಿ ಎಟಿಎಂಗೆ ಹಾನಿ ಮಾಡಿ ಹಣ ದೋಚಿದ್ದಾರೆ.
Viral Video: ಬ್ಲಿಂಕ್‌ಇಟ್ ಉಚಿತ ಆಂಬ್ಯುಲೆನ್ಸ್ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ
ಎಟಿಎಂ ಯಂತ್ರ ಜಖಂಗೊಂಡಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಸಿಸಿಟಿವಿ ದಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳು ದರೋಡೆಗೆ ಬಳಸಲಾದ ಆಂಬ್ಯುಲೆನ್ಸ್ ನಿಜವಾದ ತುರ್ತು ವಾಹನವೇ ಅಥವಾ ಶಂಕಿತರು ಕಳ್ಳತನ ಮರೆಮಾಚಲು ಬಳಸಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.